Home Loan: 30 ಲಕ್ಷ ಸಾಲದ ಮೇಲೆ ನೀಡಬೇಕೇ 25 ಲಕ್ಷ ಬಡ್ಡಿ, ನಷ್ಟವನ್ನು ಹೇಗೆ ತಪ್ಪಿಸಬಹುದು ತಿಳಿದುಕೊಳ್ಳಿ

Interest on Home Loan: ಮಧ್ಯಮ ವರ್ಗದವರು ಅಥವಾ ವೇತನ ಪಡೆಯುವ ಜನರು ಮನೆ ಖರೀದಿಸಲು ಸಾಲ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.

ನವದೆಹಲಿ : Interest on Home Loan: ಮಧ್ಯಮ ವರ್ಗದವರು ಅಥವಾ ವೇತನ ಪಡೆಯುವ ಜನರು ಮನೆ ಖರೀದಿಸಲು ಸಾಲ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. 50 ರಿಂದ 60 ಲಕ್ಷದ ಮನೆಯನ್ನು ಖರೀದಿಸಬೇಕಾದರೆ, ಅಷ್ಟು ದೊಡ್ಡ ಮೊತ್ತವನ್ನು ವ್ಯವಸ್ಥೆ ಮಾಡುವುದು ಸುಲಭವಲ್ಲ. ಆದರೆ, ಬ್ಯಾಂಕಿನಿಂದ ತೆಗೆದುಕೊಳ್ಳುವ ಸಾಲಕ್ಕೆ ಎಷ್ಟು ಬಡ್ಡಿ ಪಾವತಿಸಬೇಕು ಎಂದು ಯೋಚಿಸಿದ್ದೀರಾ?  ನೀವು 20 ವರ್ಷಗಳ ಅವಧಿಗೆ ಲೆಕ್ಕ ಹಾಕಿ ನೋಡಿದರೆ, 30 ಲಕ್ಷ ಸಾಲದ ಮೇಲೆ, ಅಷ್ಟೇ ಮೊತ್ತವನ್ನು ಬ್ಯಾಂಕ್‌ಗೆ ಹೆಚ್ಚುವರಿಯಾಗಿ ಪಾವತಿಸಬೇಕು. ಸಾಲದ ಅವಧಿ ಅಧಿಕವಾಗಿದ್ದರೆ, ಬಡ್ಡಿಯು ನಿಮ್ಮ ಸಾಲದ ಮೊತ್ತಕ್ಕೆ ಸಮಾನವಾಗಿರುತ್ತದೆ.  ಆದ್ದರಿಂದ, ಸಾಲವನ್ನು ತೆಗೆದುಕೊಳ್ಳುವ ಮೊದಲು ವಿವಿಧ ಬ್ಯಾಂಕುಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವುದು ಉತ್ತಮ. ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಗೃಹ ಸಾಲದ ಬಡ್ಡಿ ದರವನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡುತ್ತಿದ್ದೇವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ನೀವು 25 ವರ್ಷಗಳವರೆಗೆ 30 ಲಕ್ಷ ಗೃಹ ಸಾಲವನ್ನು ತೆಗೆದುಕೊಂಡರೆ, ಗೃಹ ಸಾಲದ ಮೇಲಿನ ಬಡ್ಡಿದರ ಶೇಕಡಾ 6.80 ರ ಪ್ರಕಾರ, ಮಾಸಿಕ ಇಎಂಐ ರೂ 22900 ಆಗಿರುತ್ತದೆ. ಅಂದರೆ ನೀವು ಪಾವತಿಸುವ ಒಟ್ಟು ಬಡ್ಡಿ ರೂ 24,96,045 ಆಗಿರುತ್ತದೆ.  

2 /4

ನೀವು 25 ವರ್ಷಗಳವರೆಗೆ 30 ಲಕ್ಷ ಗೃಹ ಸಾಲವನ್ನು ತೆಗೆದುಕೊಂಡರೆ, ICICI ಬ್ಯಾಂಕಿನ ಗೃಹ ಸಾಲದ ಬಡ್ಡಿ ದರ ಶೇ 7.50 ರ ಪ್ರಕಾರ, ಮಾಸಿಕ ಇಎಂಐ ರೂ 24,168 ಪಾವತಿಸಬೇಕಾಗುತ್ತದೆ. ಅಂದರೆ ಒಟ್ಟು ಬಡ್ಡಿ ರೂ 28,00,271 ಆಗಿರುತ್ತದೆ.  

3 /4

HDFC ಯಲ್ಲಿ  25 ವರ್ಷಗಳವರೆಗೆ 30 ಲಕ್ಷ ಗೃಹ ಸಾಲವನ್ನು ತೆಗೆದುಕೊಂಡರೆ, ಬ್ಯಾಂಕಿನ ಗೃಹ ಸಾಲದ ಬಡ್ಡಿ ದರ ಶೇಕಡಾ 7.25 ರ ಪ್ರಕಾರ, ಮಾಸಿಕ ಇಎಂಐ ರೂ 23,711 ಸಂದಾಯ ಮಾಡಬೇಕಾಗುತ್ತದೆ. ಒಟ್ಟು ಬಡ್ಡಿ ರೂ 26,90,707 ಪಾವತಿಸಬೇಕು.   

4 /4

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 25 ವರ್ಷಗಳವರೆಗೆ 30 ಲಕ್ಷ ಗೃಹ ಸಾಲವನ್ನು ಪಡೆದರೆ ಬ್ಯಾಂಕಿನ ಗೃಹ ಸಾಲದ ಬಡ್ಡಿ ದರ ಶೇ .7 ರ ಪ್ರಕಾರ, ಮಾಸಿಕ 22,259  ಇಎಂಐ ಕಟ್ಟಬೇಕಾಗುತ್ತದೆ. ಹಾಗಾದಾಗ ಒಟ್ಟು ಬಡ್ಡಿ ಸೇರಿದರೆ ರೂ .25,82,152 ಆಗಿರುತ್ತದೆ.