ವಿಕ್ರಮ ಸಂವತ್ಸರ 2080ರ ಆರಂಭದಲ್ಲಿಯೇ ಮೂರು ಮಹಾ ರಾಜಯೋಗಗಳ ನಿರ್ಮಾಣ, 4 ರಾಶಿಗಳ ಜನರಿಗೆ ವರ್ಷವಿಡೀ ಧನಲಾಭ!

Vikram Samvat 2080: ಈ ಬಾರಿಯ ಹಿಂದೂ ಹೊಸ ವರ್ಷ ವಿಕ್ರಮ್ ಸಂವತ್ 2080 ಆರಂಭ ಮೂರು ಮಹಾ ರಾಜಯೋಗಗಳ ರೂಪುಗೊಳ್ಳುವಿಕೆಯಿಂದ ಆರಂಭಗೊಳ್ಳುತ್ತಿದೆ. ಹೀಗಾಗಿ ನೂತನ ವರ್ಷ ಕೆಲ ರಾಶಿಗಳ ಪಾಲಿಗೆ ಭಾರಿ ಅದೃಷ್ಟವನ್ನೇ ಹೊತ್ತು ತರಲಿದೆ. ಅದರಲ್ಲಿಯೂ ವಿಶೇಷವಾಗಿ ನಾಲ್ಕು ರಾಶಿಗಳ ಜನರಿಗೆ ಇದರಿಂದ ಒಳ್ಳೆಯ ದಿನಗಳು ಆರಂಭಗೊಳ್ಳುತ್ತಿದ್ದು, ವರ್ಷವಿಡೀ ಅವರಿಗೆ ಧನಲಾಭ ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋನ.
 

Hindu New Year 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಹಿಂದೂ ಹೊಸವರ್ಷ ಪಿಂಗಳ ನಾಮ ಸಂವತ್ಸರ ಮಾರ್ಚ್ 22 ರಿಂದ ಆರಂಭವಾಗುತ್ತಿದೆ. ಇದೇ ದಿನದಿಂದ ಚೈತ್ರ ನವರಾತ್ರಿಯ ಉತ್ಸವ ಕೂಡ ಆರಂಭಗೊಳ್ಳುತ್ತಿದೆ. ಹೊಸ ವರ್ಷದ ಆರಂಭದಲ್ಲಿ ಗ್ರಹಗಳ ನಡೆ ಅತ್ಯಂತ ಮಂಗಳಕರ ಸಂಕೇತಗಳನ್ನು ನೀಡುತ್ತಿದೆ. ಏಕೆಂದರೆ ಈ ದಿನ ಮೂರು ಮಹಾ ರಾಜಯೋಗಗಳು ರೂಪುಗೊಳ್ಳುತ್ತಿವೆ. ಹೌದು, ಈ ದಿನ ಶಶ, ಗಜಕೇಸರಿ ಹಾಗೂ ಬುದ್ಧಾದಿತ್ಯ ರಾಜಯೋಗಗಳು ನಿರ್ಮಾಣಗೊಳ್ಳುತ್ತಲಿವೆ. ಇನ್ನೊಂದೆಡೆ 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಕರ್ಮ ಫಲದಾತ ಶನಿ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲೇ ವಿರಾಜಮಾನನಾಗಿದ್ದಾನೆ. 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ದೇವಗುರು ಬೃಹಸ್ಪತಿ ತನ್ನ ಸ್ವರಾಶಿಯಾಗಿರುವ ಮೀನ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಈ ಕಾರಣದಿಂದ ಈ ವರ್ಷ 4 ರಾಶಿಗಳ ಜಾತಕದವರಿಗೆ ಅತ್ಯಂತ ಮಂಗಳಕರ ಸಾಬೀತಾಗಲಿದ್ದು, ವರ್ಷವಿಡೀ ಈ ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯಾಗಲಿದೆ.

 

ಇದನ್ನೂ ಓದಿ-Bank ನಲ್ಲಿ FD ಖಾತೆ ಹೊಂದಿದವರಿಗೊಂದು ಭಾರಿ ಗುಡ್ ನ್ಯೂಸ್, ಅತಿ ಕಡಿಮೆ ಅವಧಿಯಲ್ಲಿ ನಿಮ್ಮ ಹಣ ಡಬಲ್!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಸಿಂಹ ರಾಶಿ- ವಿಕ್ರಮ ಸಂವತ್ಸರ 2080 ಅಂದರೆ ಪಿಂಗಳ ನಾಮ ಸಂವತ್ಸರ ಸಿಂಹ ರಾಶಿಯವರಿಗೆ ಅತ್ಯಂತ ಪ್ರಯೋಜನಕಾರಿ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಶನಿ ದೇವ ಸಪ್ತಮೇಷನಾಗಿ ವಿರಾಜಮಾನನಾಗಿದ್ದಾರೆ ಮತ್ತು ದೇವಗುರು ಅಷ್ಟಮೇಶನಾಗಿ ಸಂಚರಿಸುತ್ತಿದ್ದಾನೆ. ಹೀಗಾಗಿ, ಈ ಅವಧಿಯಲ್ಲಿ  ನಿಮಗೆ ನಿಮ್ಮ ಬಾಳ ಸಂಗಾತಿಯ ಬೆಂಬಲ ಸಿಗಲಿದೆ ಮತ್ತು ಅವರ ಪ್ರಗತಿಯೂ ಕೂಡ ಸಾಧ್ಯವಾಗಲಿದೆ. ಪಿತ್ರಾರ್ಜಿತ  ಆಸ್ತಿಯಿಂದ ನಿಮಗೆ ಲಾಭವಾಗಬಹುದು. ಆದಾಯದ ಸಾಧನಗಳು ಹೆಚ್ಚಾಗಲಿವೆ. ಇನ್ನೊಂದೆಡೆ ನಿಮಗೆ ಪಾರ್ಟ್ನರಶಿಪ್ ಕೆಲಸದಲ್ಲಿ ಭಾರಿ ಯಶಸ್ಸು ಸಿಗುವ ಸಾಧ್ಯತೆ ಇದೆ ಅಥವಾ ನೀವು ಪಾರ್ಟ್ನರ್ಶಿಪ್ ನಲ್ಲಿ ಕೆಲಸವನ್ನು ಪ್ರಾರಂಭಿಸಲು ಈ ಸಮಯ ಅನುಕೂಲಕರವಾಗಿದೆ.  

2 /4

ತುಲಾ ರಾಶಿ- ವಿಕ್ರಮ ಸಂವತ್ಸರ 2080 ಅಂದರೆ ಪಿಂಗಳ ನಾಮ ಸಂವತ್ಸರ  ತುಲಾ ರಾಶಿಯ ಜನರಿಗೆ ಅತ್ಯಂತ ಮಂಗಳಕರ ಮತ್ತು ಲಾಭದಾಯಕ . ಏಕೆಂದರೆ ಶನಿದೇವನು ನಿಮ್ಮ ಜಾತಕದ ಪಂಚಮ ಭಾವದಲ್ಲಿ ಕುಳಿತಿದ್ದಾನೆ ಮತ್ತು ಗುರುವು ನಿಮ್ಮ ರಾಶಿಯಿಂದ ಶಷ್ಟಮ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಈ ಸಮಯ ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಮಂಗಳಕರವಾಗಿದೆ ಮತ್ತು ಯಾವುದೇ ಉನ್ನತ ಸಂಸ್ಥೆಗೆ ಅವರು ಪ್ರವೇಶ ಪಡೆಯಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ಪ್ರೀತಿಯ ಸಂಬಂಧಗಳಲ್ಲಿ ಮಾಧುರ್ಯತೆಯನ್ನು ಕಾಣುವಿರಿ. ಪ್ರೇಮವಿವಾಹದ ಅವಕಾಶಗಳು ಸೃಷ್ಟಿಯಾಗಲಿವೆ. ಅಲ್ಲದೆ, ಸಂತಾನ ಭಾಗ್ಯದ ನಿರೀಕ್ಷೆಯಲ್ಲಿರುವವರಿಗೆ ಸಂತಾನ ಪ್ರಾಪ್ತಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ, ಇದಲ್ಲದೆ ನಿಮಗೆ ರೋಗಗಳಿಂದ ಮುಕ್ತಿ ಸಿಗಲಿದೆ. ಮತ್ತೊಂದೆಡೆ, ನೀವು ಆಧ್ಯಾತ್ಮಿಕತೆ, ಶಿಕ್ಷಣ, ಸಂಶೋಧನೆ ಮತ್ತು ಚಿಂತಕರಾಗಿದ್ದರೆ, ಈ ಸಮಯವು ನಿಮಗೆ ಅತ್ಯಂತ ಅನಕೂಲಕರ ಸಾಬೀತಾಗಲಿದೆ.  

3 /4

ಧನು ರಾಶಿ- ವಿಕ್ರಮ ಸಂವತ್ಸರ 2080 ನಿಮಗೆ ಆರ್ಥಿಕವಾಗಿ ಮಂಗಳಕರವಾಗಿರುತ್ತದೆ. ಏಕೆಂದರೆ ನಿಮಗೆ ಜನವರಿ 17 ರಿಂದ ಶನಿ ಮಹಾರಾಜನ ಸಾಡೇಸಾತಿಯಿಂದ ಮುಕ್ತಿ ಸಿಕ್ಕಿದೆ. ಮತ್ತೊಂದೆಡೆ, ಶನಿದೇವನು ನಿಮ್ಮ ರಾಶಿಯಿಂದ ತೃತೀಯ ಭಾವದಲ್ಲಿ ಮತ್ತು ಗುರು ಚತುರ್ಥ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಈ ಸಮಯದಲ್ಲಿ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಅಲ್ಲದೆ ಬೇರೆ ಯಾವುದೇ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ಈ ಅವಧಿಯಲ್ಲಿ ನೀವು ನಿಮ್ಮ ಧೈರ್ಯ ಮತ್ತು ಶೌರ್ಯದಲ್ಲಿ ಹೆಚ್ಚಳವನ್ನು ಗಮನಿಸಬಹುದು. ಮತ್ತೊಂದೆಡೆ, ನಿಮ್ಮ ವ್ಯವಹಾರವು ವಿದೇಶಗಳಿಗೆ ಸಂಬಂಧಿಸಿದ್ದರೆ, ಈ ಸಮಯವು ನಿಮಗೆ ಮಂಗಳಕರವಾಗಿರುತ್ತದೆ. ಈ ಅವಧಿಯಲ್ಲಿ ನೀವು ಸಹೋದರ ಸಹೋದರಿಯರ ಬೆಂಬಲವನ್ನು ಸಹ ಪಡೆಯುತ್ತೀರಿ.  

4 /4

ಮಕರ ರಾಶಿ- ಪಿಂಗಳ ನಾಮ ಸಂವತ್ಸರ  ನಿಮಗೆ ಅತ್ಯಂತ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಏಕೆಂದರೆ ಶನಿದೇವನು ನಿಮ್ಮ ಜಾತಕದ ಸಂಪತ್ತಿನ ಭಾವದಲ್ಲಿದ್ದಾನೆ ಮತ್ತು ಗುರು ತೃತೀಯ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಆದ್ದರಿಂದ, ಈ ಸಮಯದಲ್ಲಿ ಉದ್ಯೋಗದಲ್ಲಿರುವ ಜನರಿಗೆ ಸಾಕಷ್ಟು ಅನುಕೂಲಕರವಾಗಿದೆ. ಕೆಲಸದ ಸ್ಥಳದಲ್ಲಿ ಕಿರಿಯರು ಮತ್ತು ಹಿರಿಯರ ಬೆಂಬಲ ಸಿಗಲಿದೆ. ಪ್ರಮೋಷನ್ ಭಾಗ್ಯ ಕೂಡ ಕಾರ್ಡ್ ಮೇಲಿದೆ. ಇದರೊಂದಿಗೆ ನೀವು ನಿಮ್ಮ ವ್ಯಕ್ತಿತ್ವದಲ್ಲಿ ಆಕರ್ಷಣೆಯನ್ನು ಗಮನಿಸಬಹುದು. ಇದೇ ವೇಳೆ ಈ ಅವಧಿಯಲ್ಲಿ ನೀವು ಒಡಹುಟ್ಟಿದವರ ಬೆಂಬಲವನ್ನು ಪಡೆಯಬಹುದು. ಅಲ್ಲದೆ, ಅವಿವಾಹಿತರು ತಮ್ಮ ವಿವಾಹ ಸಂಬಂಧವನ್ನು ಧೃಢೀಕರಿಸಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)