Ugadi 2023: ಹಿಂದೂ ಹೊಸ ವರ್ಷ ವಿಕ್ರಮ್ ಸಂವತ್ಸರ 2080ಕ್ಕೆ ಬುಧ ರಾಜನಾದರೆ, ಶುಕ್ರ ಮಂತ್ರಿ, ದೇಶ-ಪ್ರಪಂಚದ ಮೇಲೆ ಇದರ ಪ್ರಭಾವ ಏನು?

Vikram Samvat 2080: ಜೋತಿಷ್ಯ ವಿದ್ವಾಂಸರ ಪ್ರಕಾರ ವಿಕ್ರಮ್ ಸಂವತ್ಸರ 2080ನ್ನು ಪಿಂಗಲ್ ಹೆಸರಿನಿಂದ ಗುರುತಿಸಲಾಗುವುದು. ಈ ನೂತನ ವರ್ಷಕ್ಕೆ ಬುಧ ರಾಜನಾದರೆ ಶುಕ್ರ ಮಂತ್ರಿಯಾಗಿರಲಿದ್ದಾನೆ. ಜೋತಿಷ್ಯ ಪಂಡಿತರ ಪ್ರಕಾರ ಈ ವರ್ಷ ರಾಜ ಹಾಗೂ ಮಂತ್ರಿ ಇಬ್ಬರ ಕಾರಣ ಸ್ಥಿತಿ ಅತ್ಯಲ್ಪ ಕಷ್ಟದಿಂದ ಕೂಡಿರುವ ಸಾಧ್ಯತೆ ಇದೆ.   

Written by - Nitin Tabib | Last Updated : Mar 19, 2023, 12:33 PM IST
  • ಈ ವರ್ಷ ನೂತನ ಸಂವತ್ಸರದ ಮಂತ್ರಿ ಶುಕ್ರನಾಗಿದ್ದಾನೆ.
  • ಇದು ಮಹಿಳೆಯರ ಮೇಲೆ ಪ್ರಭಾವ ಬೀರಲಿದೆ.
  • ಫ್ಯಾಶನ್, ಚಿತ್ರರಂಗ, ಮನರಂಜನೆಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಅಧಿಕ ಲಾಭ ಸಿಗಲಿದೆ.
Ugadi 2023: ಹಿಂದೂ ಹೊಸ ವರ್ಷ ವಿಕ್ರಮ್ ಸಂವತ್ಸರ 2080ಕ್ಕೆ ಬುಧ ರಾಜನಾದರೆ, ಶುಕ್ರ ಮಂತ್ರಿ, ದೇಶ-ಪ್ರಪಂಚದ ಮೇಲೆ ಇದರ ಪ್ರಭಾವ ಏನು? title=
ವಿಕ್ರಮ್ ಸಂವತ್ಸರ 2080 ಹೇಗಿರಲಿದೆ?

Hindu New Year 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿವರ್ಷದ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಿಂದ ಹೊಸ ವಿಕ್ರಮ ಸಂವತ್ಸರವನ್ನು ಸ್ವಾಗತಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ ಪರಬ್ರಹ್ಮ ಇದೆ ದಿನದಂದು ಈ ಸೃಷ್ಟಿಯ ನಿರ್ಮಾಣ ಮಾಡಿದ ಎಂದು ಹೇಳಲಾಗುತ್ತದೆ. ಹೀಗಾಗಿ ಪ್ರತಿವರ್ಷ ಹೊಸ ಸಂವತ್ಸರ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದೆಯಿಂದ ಆರಂಭವಾಗುತ್ತದೆ. ಈ ವರ್ಷ ಹಿಂದೂ ಹೊಸವರ್ಷ 'ವಿಕ್ರಮ ಸಂವತ್ಸರ 2080' ಮಾರ್ಚ್ 22 ರಿಂದ ಆರಂಭವಾಗುತ್ತಿದೆ. ಈ ನೂತನ ವರ್ಷದ ಮಾನತ್ವಪೂರ್ಣ ಸಂಗತಿಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,  

ಜೋತಿಷ್ಯ ವಿದ್ವಾಂಸರ ಪ್ರಕಾರ ವಿಕ್ರಮ್ ಸಂವತ್ಸರ 2080ನ್ನು ಪಿಂಗಲ್ ಹೆಸರಿನಿಂದ ಗುರುತಿಸಲಾಗುವುದು. ಈ ನೂತನ ವರ್ಷಕ್ಕೆ ಬುಧ ರಾಜನಾದರೆ ಶುಕ್ರ ಮಂತ್ರಿಯಾಗಿರಲಿದ್ದಾನೆ. ಜೋತಿಷಿಗಳ ಪ್ರಕಾರ ಈ ವರ್ಷ ರಾಜ ಹಾಗೂ ಮಂತ್ರಿ ಸೇರಿ ಹಿಂದೂ ಹೊಸ ವರ್ಷವನ್ನು ಉತ್ತಮ ಮತ್ತು ಮಂಗಳಕಾರಿಯನ್ನಾಗಿ ಮಾಡಲಿದ್ದಾರೆ. ಆದರೆ, ಕೆಲ ವಿಷಯಗಳಲ್ಲಿ ಸಮಸ್ಯೆಗಳು ಇರುವ ಸಾಧ್ಯತೆಯನ್ನು ಕೂಡ ಅವರು ವರ್ತಿಸಿದ್ದಾರೆ.

ಸಂವತ್ಸರಕ್ಕೆ ಬುಧ ರಾಜ
ಸಂವತ್ಸರದ ರಾಜ ಬುದ್ಧನಾಗಿರುವ ಕಾರಣ ವ್ಯಾಪಾರ ವರ್ಗದ ಜನರಿಗೆ ಉನ್ನತಿ ಪ್ರಾಪ್ತಿಯಾಗಲಿದೆ. ಆದಾಯದಲ್ಲಿ ಹೆಚ್ಚಳ ಸಂಭವಿಸಲಿದೆ. ಹೊಸ ವ್ಯಾಪಾರಗಳು ಅಭಿವೃದ್ಧಿ ಹೊಂದಲಿವೆ. ಶಿಲ್ಪಕಾರ, ಲೇಖಕ ಹಾಗೂ ಚಿಕಿತ್ಸೆಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಅಪಾರ ಲಾಭ ಸಿಯಲಿದೆ. ಆದರೆ, ಬುದ್ಧನ ಪ್ರಭಾವದ ಕಾರಣ ಜನರಲ್ಲಿ ಅಪಾರ ಉತ್ಸಾಹ ಹಾಗೂ ಕ್ರೋಧ ಎರಡೂ ನಿಮಗೆ ನೋಡಲು ಸಿಗಲಿದೆ. ಜೀವರಾಶಿಯ ಜೊತೆಗೆ ಪ್ರಕೃತಿ ಕೂಡ ಪ್ರಭಾವಕ್ಕೆ ಒಳಗಾಗಲಿದೆ. ಭಾರಿ ಮಳೆ ಮತ್ತು ಚಂಡಮಾರುತದಂತಹ ಸ್ಥಿತಿ ನಿರ್ಮಾಣಗೊಳ್ಳುವುದನ್ನು ನೀವು ನೋಡಬಹುದು. ಪಶುಗಳಿಗೆ ಭಾರಿ ಹಾನಿ ಸಂಭವಿಸುವ ಸಾಧ್ಯತೆ ಇದೆ. 

ಸಂವತ್ಸರದ ಮಂತ್ರಿ ಶುಕ್ರ
ಈ ವರ್ಷ ನೂತನ ಸಂವತ್ಸರದ ಮಂತ್ರಿ ಶುಕ್ರನಾಗಿದ್ದಾನೆ. ಇದು ಮಹಿಳೆಯರ ಮೇಲೆ ಪ್ರಭಾವ ಬೀರಲಿದೆ. ಫ್ಯಾಶನ್, ಚಿತ್ರರಂಗ, ಮನರಂಜನೆಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಅಧಿಕ ಲಾಭ ಸಿಗಲಿದೆ. ಈ ಜನರ ಕಾರ್ಯಶೈಲಿಯಲ್ಲಿ ನಿಖರತೆಯನ್ನು ನೀವು ಕಾಣಬಹುದು. ನಿಂತುಹೋದ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ. ಈ ಅವಧಿಯಲ್ಲಿ ನಿಮಗೆ ನಿಶ್ಚಿತವಾಗಿ ಅದೃಷ್ಟದ ಬೆಂಬಲ ಸಿಗಲಿದೆ. ಭೌತಿಕ ಸುಖ-ಸೌಕರ್ಯಗಳ ವಿಷಯದಲ್ಲಿ ಹಗ್ಗಜಗ್ಗಾಟದ ಸ್ಥಿತಿ ಇರಲಿದೆ. ಜನ-ಧನ ಹಾನಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಕಾಯಿಲೆ-ರೋಗಗಳ ಹಿನ್ನೆಲೆ ಜನರಲ್ಲಿ ಭಯದ ವಾತಾವರಣ ನಿರ್ಮಾಣಗೊಳ್ಳಲಿದೆ.

ಶುಭ ಯೋಗಗಳಿಂದ ಹಿಂದೂ ಹೊಸ ವರ್ಷಾರಂಭ
ಹಿಂದೂ ಹೊಸ ವರ್ಷದ ಆರಂಭದಲ್ಲಿ ಎರಡು ಅತ್ಯಂತ ಶುಭಯೋಗಗಳು ನಿರ್ಮಾಣಗೊಳ್ಳುತ್ತಿವೆ. ಚೈತ್ರ ಪ್ರತಿಪದೆ ಅಂದರೆ ಮಾರ್ಚ್ 22, 2023 ರಂದು ಶುಕ್ಲ ಯೋಗ ಹಾಗೂ ಬ್ರಹ್ಮ ಯೋಗಗಳು ನಿರ್ಮಾಣಗೊಳ್ಳಲಿವೆ. ಶುಕ್ಲ ಯೋಗ 21 ಮಾರ್ಚ್ ರಾತ್ರಿ 12 ಗಂಟೆ 42 ನಿಮಿಷದಿಂದ 22 ಮಾರ್ಚ್ ಬೆಳಗ್ಗೆ 9 ಗಂಟೆ 18 ನಿಮಿಷದವರೆಗೆ ಇರಲಿದೆ. ಈ ಯೋಗದಲ್ಲಿ ಆರಂಭಿಸಲಾಗುವ ಕಾರ್ಯಗಳಲ್ಲಿ ನಿಶ್ಚಿತವಾಗಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಇನ್ನೊಂದೆಡೆ ಬ್ರಹ್ಮಯೋಗ ಬೆಳಗ್ಗೆ 9 ಗಂಟೆ 18 ನಿಮಿಷದಿಂದ ಆರಂಭಗೊಂದು ಸಂಜೆ 6 ಗಂಟೆ 16 ನಿಮಿಷದವರೆಗೆ ಇರಲಿದೆ. ಜೋತಿಷ್ಯ ಪಂಡಿತರ ಪ್ರಕಾರ ಈ ಯೋಗದಲ್ಲಿ ವಾದ-ವಿವಾದ ಹಾಗೂ ವ್ಯಾಜ್ಯಗಳನ್ನು ಬಗೆಹರಿಸುವುದು ಉತ್ತಮ ಫಲಗಳನ್ನು ನೀಡಲಿದೆ.

ಇದನ್ನೂ ಓದಿ-ಸೂರ್ಯ-ಶನಿ ಮೈತ್ರಿ ಅಂತ್ಯ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ, ಅಪಾರ ಧನಾಗಮನದ ಯೋಗ!

ಹಿಂದೂ ಹೊಸವರ್ಷದಲ್ಲಿ ಗ್ರಹಗಳ ನಡೆ
ಹಿಂದೂ ಹೊಸವರ್ಷ ವಿಕ್ರಮ್ ಸಂವತ್ಸರ 2080 ರ ಆರಂಭ  ಗ್ರಹಗಳ ನಡೆಯ ವಿಷಯದಲ್ಲಿ ಅತ್ಯಂತ ಮಹತ್ವಪೂರ್ಣ ಎಂದು ಭಾವಿಸಲಾಗಿದೆ. ಈ ವಾರ್ಷ ಮೀನ ರಾಶಿಯಲ್ಲಿ ಸೂರ್ಯ, ಬುಧ ಹಾಗೂ ಗುರು ಇರಲಿದ್ದಾರೆ. ಕುಂಭ ರಾಶಿಯಲ್ಲಿ ಶನಿ ಹಾಗೂ ಮಿಥುನ ರಾಶಿಯಲ್ಲಿ ಮಂಗಳ ವಿರಾಜಮಾನರಾಗಿದ್ದಾರೆ. ಇನ್ನೊಂದೆಡೆ ಮೇಷರಾಶಿಯಲ್ಲಿ ರಾಹು ಶುಕ್ರರ ಮೈತ್ರಿ ಇದ್ದರೆ, ತುಲಾ ರಾಶಿಯಲ್ಲಿ ಕೇತು ಕುಳಿತಿದ್ದಾನೆ.

ಇದನ್ನೂ ಓದಿ-March 27 ರಂದು ಗ್ರಹಗಳ ರಾಜಕುಮಾರನ ಉದಯ, 3 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News