ಕೆಲವು ರಾಶಿಯವರು ಚಿನ್ನದ ಉಂಗುರವನ್ನು ಹಾಕಿದರೆ ಮಾತ್ರ ಅದೃಷ್ಟ ಅವರ ಕೈ ಹಿಡಿಯುವುದು.
ಬೆಂಗಳೂರು :ಜ್ಯೋತಿಷ್ಯ ಶಾಸ್ತ್ರದಲ್ಲಿ ಚಿನ್ನವನ್ನು ಧರಿಸುವುದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.ರಾಶಿಗನುಗುಣವಾಗಿ ಯಾರು ಯಾವ ಲೋಹವನ್ನು ಧರಿಸಿದರೆ ಅದೃಷ್ಟ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜ್ಯೋತಿಷ್ಯದಲ್ಲಿ ಬೇರೆ ಬೇರೆ ಲೋಹಗಳಿಗೆ ತನ್ನದೇ ಆದ ಮಹತ್ವವಿದೆ.ರಾಶಿಗನುಗುಣವಾಗಿ ಯಾರು ಯಾವ ಲೋಹವನ್ನು ಧರಿಸಿದರೆ ಅದೃಷ್ಟ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಅದೇ ರೀತಿ ಕೆಲವು ರಾಶಿಯವರು ಚಿನ್ನದ ಉಂಗುರವನ್ನು ಹಾಕಿದರೆ ಮಾತ್ರ ಅದೃಷ್ಟ ಅವರ ಕೈ ಹಿಡಿಯುವುದು.
ಸಿಂಹ ರಾಶಿ :ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸಿಂಹ ರಾಶಿಯು ಬೆಂಕಿಯ ಅಂಶದ ಸಂಕೇತವಾಗಿದೆ. ಈ ರಾಶಿಯ ಅಧಿಪತಿ ಸೂರ್ಯ.ಆದ್ದರಿಂದ,ಈ ರಾಶಿಯವರು ಚಿನ್ನದ ಉಂಗುರವನ್ನು ಧರಿಸಲೇಬೇಕು. ಚಿನ್ನದ ಉಂಗುರ ಧರಿಸಿದಾಗ ಮಾತ್ರ ಇವರ ಪಾಲಿನ ಅದೃಷ್ಟದ ಫಲ ಇವರಿಗೆ ಸಿಗುವುದು.
ಕನ್ಯಾ ರಾಶಿ : ಈ ರಾಶಿಯ ಜನರು ಸುಖ ಸಮೃದ್ದಿಯ ಜೀವನವನ್ನು ಇಷ್ಟ ಪಡಿಸುತ್ತಾರೆ. ಕನ್ಯಾ ರಾಶಿಯ ಜನರು ಚಿನ್ನದ ಉಂಗುರ,ಚೈನ್ ಹೀಗೆ ಚಿನ್ನದಿಂದ ಮಾಡಿದ ಯಾವುದಾದರೂ ಆಭರಣವನ್ನು ಧರಿಸಿದರೆ ಇವರ ಜೀವನದಲ್ಲಿ ಎಲವೂ ಶುಭ. ಒಟ್ಟಿನಲ್ಲಿ ಚಿನ್ನವೇ ಇವರ ಪಾಲಿನ ಅದೃಷ್ಟ.
ತುಲಾ ರಾಶಿ : ತುಲಾ ರಾಶಿಯವರ ಅದೃಷ್ಟ ಬದಲಾಯಿಸುವುದು ಕೂಡಾ ಚಿನ್ನ. ಇವರು ಚಿನ್ನದ ಉಂಗುರ ಹಾಕಿದ ಕೂಡಲೇ ಅದೃಷ್ಟ ಇವರನ್ನು ಹಿಂಬಾಲಿಸಲು ಶುರು ಮಾಡುತ್ತದೆ. ಈ ರಾಶಿಯ ಅಧಿಪತಿ ಶುಕ್ರ ಗ್ರಹ. ಹಾಗಾಗಿ ನಿಮ್ಮ ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಚಿನ್ನದ ಉಂಗುರು ಧರಿಸಬೇಕು.
ಧನು ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನವನ್ನು ಧರಿಸುವುದು ಧನು ರಾಶಿಯವರಿಗೆ ಅತ್ಯಂತ ಶುಭ.ಚಿನ್ನವನ್ನು ಧರಿಸುವುದು ಈ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.