ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಕೈ ಸೇರುವುದು ದೊಡ್ಡ ಮೊತ್ತ

 5 ಸ್ಟಾರ್ ರೇಟಿಂಗ್‌ನೊಂದಿಗೆ  ಉತ್ತಮ ಆದಾಯ ನೀಡುವ 5 ಯೋಜನೆಗಳಮಾಹಿತಿ ಇಲ್ಲಿದೆ. 

ಬೆಂಗಳೂರು : ದೀರ್ಘಕಾಲದವರೆಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ, ಕಂಪೌಂಡಿಂಗ್ ನ  ಪ್ರಚಂಡ ಪ್ರಯೋಜನಗಳನ್ನು ಪಡೆಯಬಹುದು.  ವಿಶೇಷವಾಗಿ ಇಕ್ವಿಟಿ ಮ್ಯೂಚುವಲ್ ಫಂಡ್‌ಗಳು ಷೇರು ಮಾರುಕಟ್ಟೆಯಲ್ಲಿ ಏರಿಳಿತದ ನಡುವೆಯೂ ಉತ್ತಮ ಆದಾಯವನ್ನು ನೀಡಿವೆ. 5 ಸ್ಟಾರ್ ರೇಟಿಂಗ್‌ನೊಂದಿಗೆ  ಉತ್ತಮ ಆದಾಯ ನೀಡುವ 5 ಯೋಜನೆಗಳಮಾಹಿತಿ ಇಲ್ಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಈ ನಿಧಿಯು ಕ್ವಾಂಟ್ ಇನ್ಫ್ರಾಸ್ಟ್ರಕ್ಚರ್ ಫಂಡ್‌ಗೆ ಸೇರಿದೆ. ಮೂರು ವರ್ಷಗಳಲ್ಲಿ ವಾರ್ಷಿಕ ಸರಾಸರಿ 51.74% ಆದಾಯವನ್ನು ನೀಡುತ್ತಿದೆ. ಇದರಲ್ಲಿ ಹೂಡಿಕೆ ಮಾಡಲು ಬಯಸಿದರೆ, ಪ್ರತಿ ತಿಂಗಳು ಕನಿಷ್ಠ 1,000 ರೂ.ಗಳ SIP ಅನ್ನು ಮಾಡಬೇಕು. 

2 /5

ಕೆನರಾ ರೋಬೆಕೊ ಸ್ಮಾಲ್ ಕ್ಯಾಪ್ ಫಂಡ್ ವಾರ್ಷಿಕವಾಗಿ 46.52% ನಷ್ಟು ಲಾಭವನ್ನು ನೀಡುತ್ತಿದೆ. ಜುಲೈ 31, 2022 ರಂತೆ ನಿಧಿಯ ಒಟ್ಟು ಆಸ್ತಿ 3,074 ಕೋಟಿ ರೂ. ಇದರಲ್ಲಿ, 1,000 ರೂಪಾಯಿ  SIP ನೊಂದಿಗೆ ಹೂಡಿಕೆ ಪ್ರಾರಂಭಿಸಬಹುದು. 

3 /5

ಕ್ವಾಂಟ್ ಟ್ಯಾಕ್ಸ್ ಪ್ಲಾನ್ ವಾರ್ಷಿಕ ಸರಾಸರಿ 45.46% ಆದಾಯವನ್ನು ನೀಡಿದೆ. ಇದರಲ್ಲಿ ತಿಂಗಳಿಗೆ ಕನಿಷ್ಠ 500 ರೂಪಾಯಿ ಹೂಡಿಕೆ ಮಾಡಬೇಕು. 31 ಜುಲೈ 2022 ರಂತೆ ಇದರ ಒಟ್ಟು ಆಸ್ತಿ 1,584 ಕೋಟಿ ರೂ.   

4 /5

PGIM ಇಂಡಿಯಾ ಮಿಡ್‌ಕ್ಯಾಪ್ ಆಪರ್ಚುನಿಟೀಸ್ ಫಂಡ್ ವಾರ್ಷಿಕ ಸರಾಸರಿ 42.34% ಆದಾಯವನ್ನು ನೀಡಿದೆ. ಇಲ್ಲಿಯೂ ಕನಿಷ್ಠ 1000 ರೂ.ಗಳಿಂದ ಹೂಡಿಕೆ ಆರಂಭಿಸಬಹುದು. 31 ಜುಲೈ 2022 ರಂತೆ ಇದರ ಆಸ್ತಿ 6,023 ಕೋಟಿ ರೂ.

5 /5

ಬ್ಯಾಂಕ್ ಆಫ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್‌ನಲ್ಲಿ ಪ್ರತಿ ತಿಂಗಳು ಕನಿಷ್ಠ 1000 ರೂಪಾಯಿಗಳೊಂದಿಗೆ ಹೂಡಿಕೆಯನ್ನು ಪ್ರಾರಂಭಿಸಬಹುದು. ಇದರ ಒಟ್ಟು ಆಸ್ತಿ ರೂ 333 ಕೋಟಿ ಮತ್ತು ವೆಚ್ಚದ ಅನುಪಾತವು 1.18% ಆಗಿದೆ.