ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station, ISS) ಭೂಮಿಯ ಅನೇಕ ಸುಂದರ ಚಿತ್ರಗಳನ್ನು ಹಂಚಿಕೊಂಡಿದೆ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station, ISS) ಭೂಮಿಯ ಅನೇಕ ಸುಂದರ ಚಿತ್ರಗಳನ್ನು ಹಂಚಿಕೊಂಡಿದೆ. ಈ ಫೋಟೋಗಳನ್ನು ಬಾಹ್ಯಾಕಾಶದಿಂದ (Space) ಕ್ಲಿಕ್ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ (Social Media) ಈ ಫೋಟೋಗಳನ್ನು ಪೋಸ್ಟ್ ಮಾಡಿದಾಗಿನಿಂದ, ಈ ಫೋಟೋಗಳು ವೈರಲ್ ಆಗಿವೆ. ಜನರು ಕೂಡಾ ಫೋಟೋಗೆ ಕಾಮೆಂಟ್ ಮಾಡುತ್ತಿದ್ದಾರೆ.
ಬಾಹ್ಯಾಕಾಶ ಅನ್ನುವುದು ಒಂದು ಅದ್ಭುತ.. ಬಾಹ್ಯಾಕಾಶ ವಿಜ್ಞಾನ (Space Science) ಮತ್ತು ಅದರ ರಹಸ್ಯಗಳ ಬಗ್ಗೆ ಜನರು ಬಹಳಷ್ಟುಆಸಕ್ತಿ ಹೊಂದಿರುತ್ತಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station, ISS) ಇತ್ತೀಚೆಗೆ ಅನೇಕ ಸುಂದರ ಚಿತ್ರಗಳನ್ನು ಹಂಚಿಕೊಂಡಿದೆ. ಬಾಹ್ಯಾಕಾಶದಿಂದ ಕ್ಲಿಕಿಸಿರುವ ಭೂಮಿಯ ಅನೇಕ ಸುಂದರ ಚಿತ್ರಗಳನ್ನು ಅದು ಹಂಚಿಕೊಂಡಿದೆ. ಈ ಚಿತ್ರಗಳು ಇದೀಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಐಎಸ್ಎಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಾಶಿಸುವ ಭೂಮಿಯ ಕೆಲವು ಫೋಟೋಗಳನ್ನು ಹಂಚಿಕೊಂಡಿದೆ. ಈ ಫೋಟೋಗಳನ್ನು ಇಕ್ವೇಟರ್ ನಿಂದ (Equator) 51.6 ಡಿಗ್ರಿಗಳಿಂದ ಕ್ಲಿಕ್ ಮಾಡಲಾಗಿದೆ. ಈ ಫೋಟೋಗಳಲ್ಲಿ ಭೂಮಿ ಅದ್ಭುತವಾಗಿ ಗೋಚರಿಸುತ್ತದೆ.
ಈ ಫೋಟೋಗಳು ಜನರಿಂದ ಭರ್ಜರಿ ಮೆಚ್ಚುಗೆ ಪಡೆದಿದೆ. ಜನರು ಕೂಡಾ ಈ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಈ ಫೋಟೋಗಳಿಗೆ ಸಾಕಷ್ಟು ಕಾಮೆಂಟ್ ಗಳನ್ನು ಕೂಡಾ ಮಾಡುತ್ತಿದ್ದಾರೆ. ಈ ಫೋಟೋಗಳು ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿವೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವವರನ್ನು ಈ ಚಿತ್ರಗಳು ಇನ್ನಷ್ಟು ಆಕರ್ಷಿಸುತ್ತಿವೆ.
ಜಗಮಗ ಹೊಳೆಯುವ ದೀಪಗಳು ಮತ್ತು ಮಿನುಗುವ ನಕ್ಷತ್ರಗಳ ನಡುವೆ' ಎಂಬ ಶೀರ್ಷಿಕೆಯಡಿಯಲ್ಲಿ ಐಎಸ್ಎಸ್ ಈ ಫೋಟೋಗಳನ್ನು ಶೇರ್ ಮಾಡಿದೆ. ಬಾಹ್ಯಾಕಾಶದಿಂದ ಗೋಚರಿಸುವ ಭೂಮಿಯ ಈ ಅದ್ಭುತ ನೋಟ ಎಂಥವರನ್ನು ಬೆರಗುಗೊಳಿಸುತ್ತದೆ.