7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ! ಈ 4 ಭತ್ಯೆಗಳು ಹೆಚ್ಚಾಗುತ್ತವೆ, ಸಂಬಳದಲ್ಲಿ ಬಂಪರ್ ಹೆಚ್ಚಳ

ನೌಕರರ ಇತರೆ 4 ಭತ್ಯೆಗಳನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಭತ್ಯೆಗಳಿಗೆ ಮುದ್ರೆ ಬಿದ್ದರೆ, ಉದ್ಯೋಗಿಗಳ ಸಂಬಳದಲ್ಲಿ ಬಂಪರ್ ಹೆಚ್ಚಳವಾಗಲಿದೆ. ಈ ಸವಲತ್ತುಗಳ ಬಗ್ಗೆ ನಿಮಗಿ ಮಾಹಿತಿ ಇಲ್ಲಿದೆ..

ನೀವು ಸಹ ಕೇಂದ್ರ ಉದ್ಯೋಗಿಗಳಾಗಿದ್ದರೆ ಈ ಸುದ್ದಿ ನಿಮಗೆ ತುಂಬಾ ಉಪಯುಕ್ತವಾಗಿದೆ. ಕೇಂದ್ರ ಸರ್ಕಾರವು ಈ ಹಿಂದೆ ಶೇ.3 ರಷ್ಟು ಡಿಎ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಇದಾದ ಬಳಿಕ ಕೇಂದ್ರ ನೌಕರರ ತುಟ್ಟಿ ಭತ್ಯೆ ಶೇ.34ಕ್ಕೆ ಏರಿಕೆಯಾಗಿದೆ. ಇದಾದ ಬಳಿಕ ಇದೀಗ ಮತ್ತೆ ನೌಕರರ ವೇತನ ಹೆಚ್ಚಳವಾಗಲಿದೆ. ನೌಕರರ ಇತರೆ 4 ಭತ್ಯೆಗಳನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಭತ್ಯೆಗಳಿಗೆ ಮುದ್ರೆ ಬಿದ್ದರೆ, ಉದ್ಯೋಗಿಗಳ ಸಂಬಳದಲ್ಲಿ ಬಂಪರ್ ಹೆಚ್ಚಳವಾಗಲಿದೆ. ಈ ಸವಲತ್ತುಗಳ ಬಗ್ಗೆ ನಿಮಗಿ ಮಾಹಿತಿ ಇಲ್ಲಿದೆ..
 
 

1 /5

ಸರ್ಕಾರ ಹೊರೆ ಹೆಚ್ಚಾಗಲಿದೆ : ಸರ್ಕಾರದ ಈ ಘೋಷಣೆಯ ನಂತರ 50 ಲಕ್ಷ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಮತ್ತೊಂದೆಡೆ, ಇದು ಸರ್ಕಾರದ ಮೇಲೆ ವಾರ್ಷಿಕ 9455.50 ಕೋಟಿ ಹೊರೆಯನ್ನು ಹೆಚ್ಚಿಸುತ್ತದೆ. ಇದಲ್ಲದೇ ಕೇಂದ್ರ ನೌಕರರ ಸಂಘಟನೆ ಕೂಡ 18 ತಿಂಗಳ ಬಾಕಿ ನೀಡುವಂತೆ ಸರಕಾರದ ಮೇಲೆ ಒತ್ತಡ ಹೇರುತ್ತಿದೆ. ವೇತನ ಮತ್ತು ಭತ್ಯೆ ನೌಕರನ ಹಕ್ಕು ಎಂಬುದು ಸುಪ್ರೀಂ ಕೋರ್ಟ್‌ನ ತೀರ್ಪು ಎಂದು ನೌಕರರು ಹೇಳುತ್ತಾರೆ.

2 /5

ಉದ್ಯೋಗಿಗಳಿಗೆ ದುಪ್ಪಟ್ಟು ಲಾಭವಾಗಲಿದೆ : ಡಿಎ ಹೆಚ್ಚಳದಿಂದಾಗಿ ಕೇಂದ್ರ ನೌಕರರ ಮನೆ ಬಾಡಿಗೆ ಭತ್ಯೆ ಮತ್ತು ಪ್ರಯಾಣ ಭತ್ಯೆಯಲ್ಲಿ ಖಚಿತ ಹೆಚ್ಚಳವಾಗಿದೆ. ನೌಕರರು ಏಕಕಾಲದಲ್ಲಿ ನಾಲ್ಕು ಭತ್ಯೆಗಳ ಹೆಚ್ಚಳದ ಪ್ರಯೋಜನವನ್ನು ಪಡೆಯಬಹುದು. ಸರ್ಕಾರಿ ನೌಕರರ ಡಿಎ ಕೇವಲ 9 ತಿಂಗಳಲ್ಲಿ ದುಪ್ಪಟ್ಟಾಗಿದೆ. ಈಗ ನೌಕರರ ಜೊತೆಗೆ ಪಿಂಚಣಿದಾರರು 34% ದರದಲ್ಲಿ ಡಿಎ ಮತ್ತು ಡಿಆರ್ ಪಡೆಯುತ್ತಾರೆ.

3 /5

ಗ್ರಾಚ್ಯುಟಿ ಹೆಚ್ಚಾಗುತ್ತದೆ : ಇದಲ್ಲದೇ ಪ್ರಾವಿಡೆಂಟ್ ಫಂಡ್ ಮತ್ತು ಗ್ರಾಚ್ಯುಟಿ ಕೂಡ ಹೆಚ್ಚಾಗಲಿದೆ. ಕೇಂದ್ರ ನೌಕರರ ಮಾಸಿಕ ಪಿಎಫ್ ಮತ್ತು ಗ್ರಾಚ್ಯುಟಿಯನ್ನು ಮೂಲ ವೇತನ ಮತ್ತು ಡಿಎಯಿಂದ ಲೆಕ್ಕ ಹಾಕಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತುಟ್ಟಿಭತ್ಯೆ ಹೆಚ್ಚಳದಿಂದಾಗಿ, ಪಿಎಫ್ ಮತ್ತು ಗ್ರಾಚ್ಯುಟಿ ಹೆಚ್ಚಾಗುವುದು ಖಚಿತ.

4 /5

ಟಿಎ ಮತ್ತು ಸಿಎ ಹೆಚ್ಚಳ : ತುಟ್ಟಿಭತ್ಯೆಯನ್ನು ಹೆಚ್ಚಿಸಿದ ನಂತರ, ಉದ್ಯೋಗಿಗಳ ಪ್ರಯಾಣ ಭತ್ಯೆ ಮತ್ತು ನಗರ ಭತ್ಯೆ ಕೂಡ ಹೆಚ್ಚಾಗುತ್ತದೆ. ವಾಸ್ತವವಾಗಿ, ಡಿಎ ಹೆಚ್ಚಳದ ನಂತರ, ಟಿಎ ಮತ್ತು ಸಿಎ ಹೆಚ್ಚಳಕ್ಕೆ ಹಾದಿ ಸುಗಮವಾಗಿದೆ.

5 /5

ಕೇಂದ್ರ ನೌಕರರಿಗೆ ಸಂತಸದ ಸುದ್ದಿ : ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇ.5ರಷ್ಟು ಹೆಚ್ಚಿಸುವುದು ಬಹುತೇಕ ಖಚಿತವಾಗಿದೆ. ಇದರ ನಂತರ, ಇತರ ಭತ್ಯೆಗಳು ಸಹ ಹೆಚ್ಚಾಗಲಿವೆ. ಮುಂದಿನ ತಿಂಗಳು ನೌಕರರ ವೇತನ ಹೆಚ್ಚಳವಾಗಲಿದೆ. ಇದರೊಂದಿಗೆ ನೌಕರರಿಗೆ ಬಾಕಿ ವೇತನವೂ ಸಿಗಲಿದೆ. ಆಗಸ್ಟ್ ಮೊದಲ ವಾರದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.