ʼಕಿಸ್‌ʼ ಮಾಡುವುದರಿಂದ ಹರಡುತ್ತೆ ಮಾರಕ ಕಾಯಿಲೆ; ಏನಿದು ʼಮಾನೋನ್ಯೂಕ್ಲಿಯೊಸಿಸ್‌'..?

Kissing disease: ಚುಂಬನದಿಂದ ಬ್ಯಾಕ್ಟೀರಿಯಾ ಹರಡಿ ಅದು ಕಾಯಿಲೆಗೆ ಕಾರಣವಾಗುತ್ತದೆ. ಮೊನೊನ್ಯೂಕ್ಲಿಯೊಸಿಸ್ ಅಥವಾ ಮೊನೊವನ್ನು ಚುಂಬನ ಕಾಯಿಲೆ ಅಂತಾ ಕರೆಯಲಾಗುತ್ತದೆ. ಇದಕ್ಕೆ ಕಾರಣವಾದ ವೈರಸ್ ಲಾಲಾರಸದ ಮೂಲಕ ಹರಡುತ್ತದಂತೆ.

Mononucleosis: ಕಿಸ್‌ ಮಾಡುವುದರಿಂದ ದೇಹದ ಹೆಚ್ಚಿನ ಕ್ಯಾಲೋರಿಗಳನ್ನು ಬರ್ನ್‌ ಮಾಡಬಹುದು ಎಂಬುದ ನಿಮಗೆ ತಿಳಿದಿರುತ್ತದೆ. ಪ್ರೀತಿಯ ಭಾವ ವ್ಯಕ್ತಪಡಿಸಲು ಇರುವ ಅತ್ಯುತ್ತಮ ವಿಧಾನವೆಂದರೆ ಅದು ಕಿಸ್‌ ಮಾಡುವುದು. ನಿಮ್ಮ ಸಂಗಾತಿಗೆ ಪ್ರೀತಿ, ವಾತ್ಸಲ್ಯದ ಭಾವನೆ ವ್ಯಕ್ತಪಡಿಸಲು ಕಿಸ್‌ ಮಾಡಬಹುದು. ಚುಂಬನವು ನಿಮ್ಮ ಜೀವನವನ್ನು ಮತ್ತಷ್ಟು ಸಂತೋಷಕರ, ಒತ್ತಡ ರಹಿತವಾಗಿಸಿ ದೀರ್ಘಾಯಸ್ಸು ಪಡೆಯಲು ನೆರವಾಗುತ್ತದೆ. ಕಿಸ್‌ ಮಾಡುವುದರಿಂದ ಒಂದಷ್ಟು ಮಾನಸಿಕ ನೆಮ್ಮದಿಯೂ ಸಿಗುತ್ತದೆ. ಆದರೆ ಈ ಚುಂಬನದಿಂದ ದುಷ್ಪರಿಣಾವೂ ಉಂಟಾಗಲಿದೆ.

ಚುಂಬನದಿಂದ ಬ್ಯಾಕ್ಟೀರಿಯಾ ಹರಡಿ ಅದು ಕಾಯಿಲೆಗೆ ಕಾರಣವಾಗುತ್ತದೆ. ಮೊನೊನ್ಯೂಕ್ಲಿಯೊಸಿಸ್ ಅಥವಾ ಮೊನೊವನ್ನು ಚುಂಬನ ಕಾಯಿಲೆ ಅಂತಾ ಕರೆಯಲಾಗುತ್ತದೆ. ಇದಕ್ಕೆ ಕಾರಣವಾದ ವೈರಸ್ ಲಾಲಾರಸದ ಮೂಲಕ ಹರಡುತ್ತದಂತೆ. ಇದು ವಿವಿಧ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು. ಇದು ಸಾಮಾನ್ಯವಾಗಿ ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಕಂಡುಬರುತ್ತದೆ. ಹಾಗಾದ್ರೆ ಈ ಮಾನೋನ್ಯೂಕ್ಲಿಯೊಸಿಸ್ ಎಂದರೇನು? ಇದು ಹೇಗೆ ಹರಡುತ್ತದೆ? ಇದರಿಂದ ಬರುವ ಕಾಯಿಲೆಗಳು ಯಾವುವು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಮಾನೋನ್ಯೂಕ್ಲಿಯೊಸಿಸ್ ಒಂದು ವೈರಲ್ ಸೋಂಕಾಗಿದ್ದು, ಇದು ಎಪ್ಸ್ಟೀನ್-ಬಾರ್ ವೈರಸ್ (EBV)ನಿಂದ ಉಂಟಾಗುತ್ತದೆ. ಇದು ಎಲ್ಲಾ ವಯೋಮಾನದವರಲ್ಲಿ ವ್ಯಾಪಕವಾಗಿ ಹರಡುತ್ತದೆ. 2023ರ ಸಂಶೋಧನೆಯ ಪ್ರಕಾರ 15 ಮತ್ತು 24ರ ನಡುವಿನ ವಯಸ್ಸಿನ ಜನರಲ್ಲಿ ಇದು ಹೆಚ್ಚಾಗಿ ಸಾಮಾನ್ಯವಾಗಿದೆ ಎಂದು ಹೇಳಲಾಗಿದೆ. 

2 /7

ಮಾನೋನ್ಯೂಕ್ಲಿಯೊಸಿಸ್‌ನ ಪ್ರಮುಖ ಕಾರಣವೆಂದರೆ ಹರ್ಪಿಸ್ವೈರಸ್ ಎಂಬ ವೈರಸ್ ಕುಟುಂಬಕ್ಕೆ ಸೇರಿದ EBV. EBV ಹೆಚ್ಚು ಸಾಂಕ್ರಾಮಿಕವಾಗಿದ್ದು, ಲಾಲಾರಸ, ಲೋಳೆಯ ಮತ್ತು ಕೆಲವೊಮ್ಮೆ ಕಣ್ಣೀರಿನ ಮೂಲಕ ಹರಡುವ ಬ್ಯಾಕ್ಟೀರಿಯಾ ಆಗಿರುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ, ಅಂದರೆ ಚುಂಬನ ಅಥವಾ ಅವರ ಕೆಲ ವಸ್ತುಗಳನ್ನು ಮುಟ್ಟುವುದರಿಂದ ಇದು ಬರುತ್ತದೆ. ಈ ಬ್ಯಾಕ್ಟೀರಿಯಾ ಶೀತ, ಕೆಮ್ಮು ಸೇರಿ ಹಲವು ಸಮಸ್ಯೆಗೆ ಕಾರಣವಾಗಬಹುದು. ಈ ಬ್ಯಾಕ್ಟೀರಿಯಾ ತಗುಲಿದರೆ ಸತತ 6 ವಾರಗಳ ಕಾಲ ಅದರ ಲಕ್ಷಣಗಳು ನಿಮ್ಮನ್ನು ಕಾಡಬಹುದು ಅಂತಾ ಹೇಳಲಾಗಿದೆ. 

3 /7

ಮಾನೋನ್ಯೂಕ್ಲಿಯೊಸಿಸ್‌ ಬ್ಯಾಕ್ಟೀರಿಯಾದ ಸಾಮಾನ್ಯ ಲಕ್ಷಣವೆಂದರೆ ವಿಪರೀತ ಆಯಾಸವಾಗುವುದು. ಇದು ವಾರದಿಂದ ಹಿಡಿದು ತಿಂಗಳುಗಳ ಕಾಲ ಮುಂದುವರೆಯಬಹುದು. ನೀವು ಎಷ್ಟೆ ವಿಶ್ರಾಂತಿ ಪಡೆದರು ಈ ಆಯಾಸ ಕಡಿಮೆಯಾಗಲ್ಲ. ಇದೇ ಈ ಮೊನೊ ವೈರಸ್ ಅಥವಾ ಬ್ಯಾಕ್ಟೀರಿಯಾ ಹರಡಿರುವುದರ ಪ್ರಮುಖ ಲಕ್ಷಣ.

4 /7

ಮಾನೋನ್ಯೂಕ್ಲಿಯೊಸಿಸ್‌ ತೀವ್ರ ಗಂಟಲು ನೋವಿಗೆ ಕಾರಣವಾಗುತ್ತದೆ. ಗಂಟಲು ಕೆಂಪು ಮತ್ತು ಊದಿಕೊಂಡಂತೆ ಕಾಣಿಸಬಹುದು. ಟಾನ್ಸಿಲ್‌ಗಳ ಮೇಲೆ ಬಿಳಿ ಗುಳ್ಳೆಗಳು ಅಥವಾ ಕೀವು ಸಹ ಕಂಡುಬರಬಹುದು.

5 /7

ಮಾನೋನ್ಯೂಕ್ಲಿಯೊಸಿಸ್‌ ಬ್ಯಾಕ್ಟೀರಿಯಾ ಜನರಲ್ಲಿ ಜ್ವರಕ್ಕೂ ಸಹ ಕಾರಣವಾಗುತ್ತದೆ. ಆದರೆ ಈ ಜ್ವರವು ಸಾಮಾನ್ಯ ಸೀಸನಲ್ ಜ್ವರದಂತೆ ಕಂಡುಬರುತ್ತದೆ. ಈ ಕಾಯಿಲೆ ಬಂದರೆ ನಿಮಗೆ ಆಗಾಗ ಜ್ವರ ಕಾಡಬಹುದು.

6 /7

ಮಾನೋನ್ಯೂಕ್ಲಿಯೊಸಿಸ್‌ ಹೊಂದಿರುವ ಅನೇಕರು ತಲೆನೋವು ಹೊಂದಿರುತ್ತಾರೆ. ಇದು ಸೌಮ್ಯ ಅಥವಾ ತೀವ್ರವಾಗಿರಬಹುದು. ಈ ತಲೆನೋವು ಆಯಾಸ ಮತ್ತು ಸ್ನಾಯು ನೋವುಗಳಂತಹ ಇತರ ರೋಗಲಕ್ಷಣಗಳೊಂದಿಗೆ ಕಾಣಿಸಿಕೊಳ್ಳಬಹುದು. ತಲೆನೋವಿನ ಕಾರಣ ವಿಪರೀತ ಆಯಾಸ, ಕಣ್ಣು ಉರಿ ಕಾಣಿಸಿಕೊಳ್ಳುತ್ತದೆ.

7 /7

ಮಾನೋನ್ಯೂಕ್ಲಿಯೊಸಿಸ್‌ ದೇಹದಾದ್ಯಂತ ಸಾಮಾನ್ಯ ಸ್ನಾಯು ನೋವು ಮತ್ತು ದೌರ್ಬಲ್ಯ ಉಂಟುಮಾಡಬಹುದು. ಇದು ಬ್ಯಾಕ್ಟೀರಿಯಾ ಹರಡಿದ ಬಳಿಕ ತಿಂಗಳ ಕಾಲದವರೆಗೂ ಕಾಡಬಹುದು. ಕೀಲು, ಸ್ನಾಯು ಮತ್ತು ಮಾಂಸಖಂಡಗಳ ನೋವಿಗೂ ಕಾರಣವಾಗುತ್ತದೆ.