ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ರಮೇಶ್ ಪುತ್ರಿ ನಿಹಾರಿಕಾ

ತನ್ನ ಸಹದ್ಯೋಗಿ ಅಕ್ಷಯ್ ಜೊತೆ ಸಪ್ತಪದಿ ತುಳಿದ ನಟ ರಮೇಶ್ ಪುತ್ರಿ ನಿಹಾರಿಕಾ. ಕರೋನಾ ಹಿನ್ನೆಲೆಯಲ್ಲಿ ಸರಳ ಸಮಾರಂಭ ಆಯೋಜಿಸಲಾಗಿತ್ತಾದರೂ ಸಂಭ್ರಮಕ್ಕೆ ಕೊರತೆಯಿರಲಿಲ್ಲ.

ಬೆಂಗಳೂರು : ನಟ ರಮೇಶ್ ಅರವಿಂದ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಕಳೆ ಕಟ್ಟಿತ್ತು. ರಮೇಶ್ ಪುತ್ರಿ ನಿಹಾರಿಕಾ ಅಕ್ಷಯ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿಹಾರಿಕಾ ಹಾಗೂ ಅಕ್ಷಯ್ ಒಂದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಈ ವಿವಾಹ ನೆರವೇರಿತು. ಕೊರೊನಾ ಸಾಂಕ್ರಾಮದ ಕಾರಣ ಎರಡು ಕುಟುಂಬದ ಸಮ್ಮುಖದಲ್ಲಿ ಸರಳ ವಿವಾಹ ನಡೆಸಲಾಯಿತು. ಕೋವಿಡ್-19 ನಿಯಮಾನುಸಾರ ವಿವಾಹ ನಡೆದಿದ್ದು ಕುಟುಂಬ ಸದಸ್ಯರು ಮತ್ತು ಆಪ್ತರಷ್ಟೇ ಭಾಗವಹಿಸಿದ್ದರು.

1 /4

1. ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್ ಮಗಳ ಪುತ್ರಿ ನಿಹಾರಿಕಾ ಅಕ್ಷಯ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ಇರುವ ಖಾಸಗಿ ರೆಸಾರ್ಟ್‌ನಲ್ಲಿ ಬೆಳಿಗ್ಗೆ 11ರಿಂದ 11.30ರ ಶುಭ ಲಗ್ನದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದೆ.  

2 /4

2. ನಿಹಾರಿಕಾ ಮತ್ತು ಅಕ್ಷಯ್ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡೂ ಕುಟುಂಬದವರ ಸಮ್ಮತಿ ಮೇರೆಗೆ ಈ ವಿವಾಹ ಸಮಾರಂಭ ನೆರವೇರಿದೆ.  ನಿಹಾರಿಕಾ ಗುಲಾಬಿ ಬಣ್ಣದ ಸೀರೆಯಲ್ಲಿ ಮಿರ ಮಿರ ಮಿಂಚುತ್ತಿದ್ದರು.

3 /4

3. ಕರೋನಾ ಆತಂಕದ ಹಿನ್ನೆಲೆಯಲ್ಲಿ ಆಪ್ತರು ಮತ್ತು ಕುಟುಂಬ ಸದಸ್ಯರಿಗಷ್ಟೇ ಆಹ್ವಾನವಿತ್ತು. ಹಾಗಾಗಿ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. 

4 /4

4. ಜನವರಿ 16ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಅಂದು ಚಿತ್ರರಂಗ ಸೇರಿದಂತೆ ಎಲ್ಲಾ ಕ್ಷೇತ್ರಗಳ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.