ನಟಿ ರಶ್ಮಿಕಾ ಮಂದಣ್ಣಗೆ ಗಾಯ..! ಆತಂಕಗೊಂಡ ಕನ್ನಡ ಅಭಿಮಾನಿಗಳು.. ಏನಾಯ್ತು ಸುಂದರಿಗೆ..?

Rashmika Mandanna injury : ಟಾಲಿವುಡ್ ಸ್ಟಾರ್ ಹೀರೋಯಿನ್‌ ರಶ್ಮಿಕಾ ಮಂದಣ್ಣ ಗಾಯಗೊಂಡಿದ್ದಾರೆ. ಈ ಸುದ್ದಿ ತಿಳಿದ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಹಾಗಿದ್ರೆ ನಟಿಗೆ ಏನಾಯ್ತು.. ಈಗ ಅವರ ಆರೋಗ್ಯ ಹೇಗಿದೆ..? ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
 

1 /6

ಸ್ಯಾಂಡಲ್‌ವುಡ್‌ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಗಾಯಗೊಂಡಿದ್ದಾರೆ. ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಅವರ ಆರೋಗ್ಯದ ಬಗ್ಗೆ ತಿಳಿಯಲು ಕಾತುರರಾಗಿದ್ದಾರೆ..   

2 /6

ಪ್ರಸ್ತುತ ರಶ್ಮಿಕಾ ಕ್ರೇಜ್ ಭಾರತದಾದ್ಯಂತ ಹೆಚ್ಚಿದೆ. ಕಳೆದ ತಿಂಗಳು ತೆರೆಕಂಡ ಪುಷ್ಪ 2 ಚಿತ್ರದಿಂದ ರಶ್ಮಿಕಾ ಕ್ರೇಜ್ ಗಗನಕ್ಕೇರಿತ್ತು. ಶ್ರೀವಲ್ಲಿಯಾಗಿ ಸೀಕ್ವೆಲ್ ಭಾಗದಲ್ಲಿ ರಶ್ಮಿಕಾ ತೋರಿದ ಪ್ರಭಾವ ಅಷ್ಟಿಷ್ಟಲ್ಲ. ಈ ಚೆಲುವೆ ತೆರೆಯ ಮೇಲೆ ಕಾಣಿಸಿಕೊಂಡ ಪ್ರತಿಯೊಂದು ದೃಶ್ಯವೂ ಸೂಪರ್‌. ಇಡೀ ಚಿತ್ರ ಅವಳ ಪಾತ್ರದೊಂದಿಗೆ ಓಡಿತು ಅಂದ್ರೆ ತಪ್ಪಾಗಲ್ಲ..  

3 /6

ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್ ನಂತರ ಕಾಲಿವುಡ್ ಮತ್ತು ಈಗ ಬಾಲಿವುಡ್‌ಗೆ ಹೋಗಿದ್ದಾರೆ. ನ್ಯಾಶನಲ್ ಕ್ರಶ್ ಎಂದು ಖ್ಯಾತಿ ಪಡೆದಿರುವ ಸುಂದರಿ 'ಪುಷ್ಪಾ' ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಫ್ಯಾನ್ಸ್‌ ಪಾಲೋಯಿಂಗ್‌ ಹೆಚ್ಚಿಸಿಕೊಂಡಿದ್ದಾರೆ..   

4 /6

ಸದ್ಯ ರಶ್ಮಿಕಾ ಮಂದಣ್ಣ  ಕನ್ನಡ, ತೆಲುಗು, ತಮಿಳು, ಹಿಂದಿ ಹೀಗೆ ಎಲ್ಲಾ ಇಂಡಸ್ಟ್ರಿಗಳಲ್ಲೂ ತಮ್ಮ ಶಕ್ತಿ ಪ್ರದರ್ಶನ ತೋರುತ್ತಿದ್ದಾರೆ.. ಹಿಂದಿಯಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಮದಂಣ್ಣ.. ಈಗಾಗಲೇ ‘ಗುಡ್ ಬೈ’ ಮತ್ತು ‘ಮಿಷನ್ ಮಜ್ನು’ ಚಿತ್ರಗಳ ಮೂಲಕ ಅಲ್ಲಿನ ಪ್ರೇಕ್ಷಕರ ಮನ ಗೆದ್ದಿದ್ದಾರೆ.. ‘ಎನಿಮಲ್‌’ ಚಿತ್ರ ಬಾಲಿವುಡ್‌ನಲ್ಲಿ ರಶ್ಮಿಕಾ ಕ್ರೇಜ್‌ ನೀಡಿತು.    

5 /6

ಅದಾದ ನಂತರ ಪುಷ್ಪಾ 2 ಸಿನಿಮಾದ ಮೂಲಕ ರಶ್ಮಿಕಾ ಹೆಸರು ಭಾರತದಾದ್ಯಂತ ಜನಪ್ರಿಯವಾಯಿತು. ಇದಲ್ಲದೆ, ಕೇವಲ ಒಂದು ವರ್ಷದ ಅಂತರದಲ್ಲಿ, ಎರಡು ಪ್ಯಾನ್ ಇಂಡಿಯಾ ಹಿಟ್‌ಗಳನ್ನು ನೀಡಿ ಸಿನಿ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದಿದ್ದಾರೆ..  

6 /6

ಪ್ರಸ್ತುತ ಭಾರತದಲ್ಲಿ ನಂಬರ್ 1 ನಾಯಕಿಯಾಗಿ ಹೊರಹೊಮ್ಮುತ್ತಿರುವ ನಟಿ.. ಸದ್ಯ 5 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರಲ್ಲಿ ಸಲ್ಮಾನ್ ಖಾನ್ ಸಿಕಂದರ್, ಧನುಷ್ ಅಭಿನಯದ ತೆಲುಗು ಚಿತ್ರ ಕುಬೇರ ಪ್ರಮುಖವಾಗಿವೆ.. ಈ ವರ್ಷವೂ ರಶ್ಮಿಕಾ ಬ್ಯುಸಿಯಾಗಲಿದ್ದಾರೆ..