ಸಮಂತಾ 10 ನೇ ತರಗತಿಯ ಅಂಕಪಟ್ಟಿ ವೈರಲ್‌! ನಟಿ SSLC ಅಲ್ಲಿ ಪಡೆದ ಅಂಕ ಎಷ್ಟು ಗೊತ್ತಾ?

Samantha tenth marksheet: ನಟಿ ಸಮಂತಾ ತನ್ನ ವೃತ್ತಿ ಜೀವನದ ಕುರಿತು ಅಷ್ಟೆ ಅಲ್ಲದೆ ತನ್ನ ವೈಯಕ್ತಿಕ ಜೀವನದ ಕುರಿತು ಕೂಡ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಹೀಗುರುವಾಗ ನಟಿಯ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಇನ್ಸ್ಟಾಗ್ರಾಂ ಅಕೌಂಟ್‌ ಪೇಜ್‌ನಲ್ಲಿ ಕಾಣಿಸಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

1 /7

ನಟಿ ಸಮಂತಾ ತನ್ನ ವೃತ್ತಿ ಜೀವನದ ಕುರಿತು ಅಷ್ಟೆ ಅಲ್ಲದೆ ತನ್ನ ವೈಯಕ್ತಿಕ ಜೀವನದ ಕುರಿತು ಕೂಡ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಹೀಗುರುವಾಗ ನಟಿಯ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಇನ್ಸ್ಟಾಗ್ರಾಂ ಅಕೌಂಟ್‌ ಪೇಜ್‌ನಲ್ಲಿ ಕಾಣಿಸಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

2 /7

ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿರುವ ಸಮಂತಾ ಬಗ್ಗೆ ವಿಶೇಷ ಪರಿಚಯ ಬೇಕಿಲ್ಲ. ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಸಿನಿಮಾ ಮಾಡುತ್ತಾ ನಟನೆಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈ ಕ್ಯೂಟ್‌ ಬ್ಯೂಟಿ ಹುಡುಗರ ಕನಸಿನ ಕನ್ಯೆ ಅಂತಲೇ ಹೇಳಬಹುದು.  

3 /7

ಆದರೆ ಸಮಂತಾ ಕೇವಲ ನಟನೆಯಲ್ಲಿ ಮಾತ್ರವಲ್ಲ, ಅಧ್ಯಯನದಲ್ಲಿಯೂ ಉತ್ತಮ. ಸಮಂತಾ ಯಾವುದೇ ಪಾತ್ರವನ್ನು ಬಹಳ ಸುಲಭವಾಗಿ ಮಾಡುತ್ತಾರೆ. ಹಾಗೆಯೇ ವಿದ್ಯಾಭ್ಯಾಸದಲ್ಲೂ ನಟಿ ಬಾಲ್ಯದಲ್ಲಿ ಒಳ್ಳೆ ಅಂಕ ಗಳಿಸಿದ್ದಾರೆ. ಇತ್ತೀಚೆಗೆ ಸಮಂತಾ ಅವರ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ವೈರಲ್‌ ಆಗಿದೆ.

4 /7

ಸಮಂತಾ ವಿದ್ಯಾಭ್ಯಾಸದಲ್ಲೂ ಮಿಂಚಿದ್ದಾರೆ ಎನ್ನುವುದನ್ನು ಶಾಲೆ ಮತ್ತು ಕಾಲೇಜಿನಲ್ಲಿ ನೀಡಿದ ಪ್ರಗತಿ ವರದಿಗಳು ಸ್ಪಷ್ಟಪಡಿಸುತ್ತವೆ. ಸಮಂತಾ 10 ಮತ್ತು 11 ನೇ ತರಗತಿಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದಾರೆ. ಅದರಲ್ಲಿ ಒಂದು ಮಾರ್ಕ್ ಲಿಸ್ಟ್ ವೈರಲ್ ಆಗಿದೆ.

5 /7

ಇದು ಅರ್ಧವಾರ್ಷಿಕ ಪರೀಕ್ಷೆಯ ವರದಿ.. ಇಂಗ್ಲಿಷ್ ಮತ್ತು ತಮಿಳು ಸೇರಿದಂತೆ ಎಲ್ಲಾ ವಿಷಯಗಳಲ್ಲಿ 80 ಪ್ಲಸ್ ಮತ್ತು 90 ಪ್ಲಸ್ ಅಂಕಗಳು ಆದರೆ ಗಣಿತದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾಳೆ. 1000ಕ್ಕೆ 887 ಅಂಕಗಳೊಂದಿಗೆ ತರಗತಿಯಲ್ಲಿ ಪ್ರಥಮ ರ‍್ಯಾಂಕ್.

6 /7

ಈ ಅಂಕಗಳನ್ನು ಕಂಡು ನೆಟ್ಟಿಗರು ವಾವ್ ಎನ್ನುತ್ತಿದ್ದಾರೆ. ಈ ಬ್ಯೂಟಿ ನಟನೆಯ ಜೊತೆಗೆ ಸ್ಟಡೀಸ್‌ನಲ್ಲೂ ಸೂಪರ್ ಎಂದು ಹೊಗಳುತ್ತಿದ್ದಾರೆ.  

7 /7

ಸದ್ಯ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರುವ ಮಾರ್ಕ್ಸ್ ಲಿಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದರೊಂದಿಗೆ ನೆಟ್ಟಿಗರು ಸಮಂತಾಗೆ ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ.