Shubh Navpancham Yog: 30 ವರ್ಷಗಳ ಬಳಿಕ ಶನಿ-ಶುಕ್ರರ ಯುತಿಯಿಂದ ನವಪಂಚಮ ರಾಜ ಯೋಗ, ಈ ರಾಶಿಗಳ ಭಾಗ್ಯೋದಯ ಪಕ್ಕಾ!

Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಶೀಘ್ರದಲ್ಲಿಯೇ ಶನಿ ಹಾಗೂ ಶುಕ್ರರ ಮೈತ್ರಿಯಿಂದ ನವಪಂಚಮ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ಯೋಗ ಮೂರು ರಾಶಿಗಳ ಜನರ ಜೀವನದಲ್ಲಿ ಭಾರಿ ಸಕಾರಾತ್ಮಕ ಬದಲಾವಣೆಯನ್ನು ತರಲಿದೆ. ಈ ಯೋಗವು 3 ರಾಶಿಗಳ ಜನರ ಜೀವನದಲ್ಲಿ ಆಕಸ್ಮಿಕ ಧನಲಾಭ ಹಾಗೂ ಉನ್ನತಿಯ ಯೋಗ ಸೃಷ್ಟಿಸಲಿದೆ,
 

Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ತಮ್ಮ ರಾಶಿಗಳನ್ನು ಪರಿವರ್ತಿಸುವ ಮೂಲಕ ಶುಭ ಹಾಗೂ ಅಶುಭ ಯೋಗಗಳನ್ನು ನಿರ್ಮಿಸುತ್ತವೆ. ಅವುಗಳ ಪ್ರಭಾವ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಉಂಟಾಗುತ್ತದೆ. ಬರುವ ಮೇ 6, 2023 ರಂದು ಶುಕ್ರ ಗ್ರಹ ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಇನ್ನೊಂದೆಡೆ ಶನಿ ಮಹಾರಾಜ ಇನ್ನೂ ಕುಂಭ ರಾಶಿಯಲ್ಲಿಯೇ ತನ್ನ ಸಂಚಾರ ಮುಂದುವರೆಸಿದ್ದಾನೆ. ಜೋತಿಷ್ಯಶಾಸ್ತ್ರದ ಪ್ರಕಾರ ಶನಿ ಹಾಗೂ ಶುಕ್ರನ ನಡುವೆ ಮಿತ್ರ ಭಾವದ ಸಂಬಂಧವಿದೆ.  ಇದರಿಂದ ನವಪಂಚಮ ರಾಜಯೋಗ ನಿರ್ಮಾಣಗೊಳ್ಳುತ್ತಿದೆ.ಈ ಯೋಗದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲಿರಲಿದೆ. ಅದರಲ್ಲಿಯೂ ವಿಶೇಷವಾಗಿ ಈ ನವಪಂಚಮ ರಾಜಯೋಗ 3 ರಾಶಿಗಳ ಜನರ ಜೀವನದಲ್ಲಿ ಆಕಸ್ಮಿಕ ಧನಲಾಭ ಹಾಗೂ ಉನ್ನತಿಗೆ ಕಾರಣ ವಾಗಲಿದೆ. ಬನ್ನಿ ತಿಳಿದುಕೊಳ್ಳೋಣ,

 

ಇದನ್ನೂ ಓದಿ-Mars Transit 2023: ಶೀಘ್ರದಲ್ಲೇ ತನ್ನ ನೀಚ ರಾಶಿಗೆ ಸಾಗಿ ಈ ಜನರಿಗೆ ಬಂಪರ್ ಲಾಭ ಕಲ್ಪಿಸಲಿದ್ದಾನೆ ಮಂಗಳ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /3

ಮೇಷ ರಾಶಿ: ಶುಕ್ರ-ಶನಿಯ ಈ ಮೈತ್ರಿಯ ಕಾರಣ ನಿರ್ಮಾಣಗೊಳ್ಳುತ್ತಿರುವ ಈ ನವಪಂಚಮ ರಾಜಯೋಗ, ಮೇಷ ರಾಶಿಯ ಜನರ ಪಾಲಿಗೆ ಅತ್ಯಂತ ಶುಭ ಫಲಪ್ರದಾಯಿ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದಲ್ಲಿ ಶನಿ ಲಾಭದ ಸ್ಥಾನದಲ್ಲಿದ್ದರೇ, ಶುಕ್ರ ತೃತೀಯ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಶುಕ್ರ ನಿಮ್ಮ ಗೋಚರ ಜಾತಕದ ಧನ, ದೈನಂದಿನ ಆದಾಯ ಹಾಗೂ ಪಾರ್ಟ್ನರ್ಶಿಪ್ ಸ್ಥಾನದ ಅಧಿಪತಿಯೂ ಹೌದು. ಈ ಅವಧಿಯಲ್ಲಿ ನಿಮಗೆ ಸಹೋದರ-ಸಹೋದರಿಯರ ಅಪಾರ ಬೆಂಬಲ ಸಿಗಲಿದೆ. ಹಳೆ ಹೂಡಿಕೆಗಳಿಂದ ನಿಮಗೆ ಲಾಭ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ, ಈ ಅವಧಿಯಲ್ಲಿ ನಿಮ್ಮ ಸಾಹಸ-ಪ್ರರಾಕ್ರಮದಲ್ಲಿ ವೃದ್ಧಿಯಾಗಲಿದೆ.   

2 /3

ವೃಷಭ ರಾಶಿ: ಶುಕ್ರ-ಶನಿಯ ಮೈತ್ರಿಯ ಕಾರಣ ನಿರ್ಮಾಣಗೊಳ್ಳುತ್ತಿರುವ ಈ ನವಪಂಚಮ ರಾಜಯೋಗ ವೃಷಭ ರಾಶಿಯ ಜಾತಕದವರ ಪಾಲಿಗೆ ಉತ್ತಮ ಸಾಬೀತಾಗಲಿದೆ. ಏಕೆಂದರೆ ಶನಿ ನಿಮ್ಮ ಗೋಚರ ಚಾಟಕದ ಕರ್ಮಭಾವದಲ್ಲಿ ಹಾಗೂ ಶುಕ್ರ ನಿಮ್ಮ ಜಾತಕದ ಧನ ಭಾವದಲ್ಲಿ ವಿರಾಜಮಾನರಾಗಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನದ ಸಂಪನ್ನೂಲಗಳಲ್ಲಿ ವೃದ್ಧಿಯಾಗಲಿದೆ. ಆಕಸ್ಮಿಕ ಧನಲಾಭದ ಸಂಕೇತಗಳೂ ಕೂಡ ಗೋಚರಿಸುತ್ತಿವೆ. ನಿಮ್ಮ ಗೋಚರ ಜಾತಕದಲ್ಲಿ ಶನಿ, ಮಂಗಳ ಹಾಗೂ ಶುಕ್ರರ ನವಪಂಚಮ ರಾಜಯೋಗ ಕೂಡ ರೂಪುಗೊಳ್ಳಲಿದೆ. ನಿರುದ್ಯೋಗಿಗಳಿಗೆ ನೌಕರಿಯ ಪ್ರಸ್ತಾಪ ಸಿಗುವ ಸಾಧ್ಯತೆ ಇದೆ. ನಿಮ್ಮ ಮಾತಿನಲ್ಲಿ ಪ್ರಭಾವ ಇರಲಿದೆ. ಜನರು ಇದರಿಂದ ಇಂಪ್ರೆಸ್ ಆಗಲಿದ್ದಾರೆ. ಚಲನ ಚಿತ್ರೋದ್ಯಮ, ಕಲೆ, ಮಾಧ್ಯಮ, ಸಂಗೀತ, ಐಷಾರಾಮಿ ವಸ್ತುಗಳ ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಸಮಯ ಅತ್ಯಂತ ಅದ್ಭುತವಾಗಿರಲಿದೆ.  

3 /3

ಮಿಥುನ ರಾಶಿ: ಶುಕ್ರ-ಶನಿ ಮೈತ್ರಿಯ ಕಾರಣ ರೂಪುಗೊಳ್ಳುತ್ತಿರುವ ನವಪಂಚಮ ರಾಜಯೋಗ ನಿಮ್ಮ ಪಾಲಿಗೆ ಅದ್ಭುತ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ, ಈ ಅವಧಿಯಲ್ಲಿ ಶುಕ್ರ ಗ್ರಹ ನಿಮ್ಮ ಜಾತಕದ ಲಗ್ನ ಭಾವದಲ್ಲಿದ್ದರೇ, ಶನಿ ಅದೃಷ್ಟ ಭಾವದಲ್ಲಿರಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಜೊತೆಗೆ ಲಗ್ನ ಭಾವದಲ್ಲಿ ಶುಕ್ರ ಇರುವ ಕಾರಣ ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಅಪಾರ ಮೆರಗು ಕಾಣಿಸಲಿದೆ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ ವಿದ್ಯಾರ್ಥಿಗಳು ಈ ಅವಧಿಯಲ್ಲಿ ತಮ್ಮ ವಿದ್ಯಾಭ್ಯಾಸದಲ್ಲಿ ಹಾಗೂ ಸರ್ಧಾತ್ಮಕ ಪರೀಕ್ಷೆಗಳಲ್ಲಿ ಮುಂದಿರಲಿದ್ದಾರೆ. ವೈವಾಹಿಕ ಮತ್ತು ಕೌಟುಂಬಿಕ ಜೀವನ ಸುಖಮಯವಾಗಲಿದೆ. ಹೊಸ ಸಂಪರ್ಕಗಳು ಸೃಷ್ಟಿಯಾಗಲಿದ್ದು, ಅದರಿಂದ ನಿಮಗೆ ಲಾಭ ಉಂಟಾಗಲಿದೆ. ಈ ಅವಧಿಯಲ್ಲಿ ನಿಮ್ಮ ಬಾಳಸಂಗಾತಿ ಅಭಿವೃದ್ಧಿ ಕೂಡ ನೆರವೇರಲಿದೆ (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)