Holi Lucky Zodiac sign: ವೈದಿಕ ಜ್ಯೋತಿಷ್ಯದ ಪ್ರಕಾರ, 2024 ರ ಹೋಳಿಯನ್ನು ಬಹಳ ವಿಶೇಷ ಮತ್ತು ಪ್ರಮುಖವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ದಿನ ಚಂದ್ರಗ್ರಹಣವೂ ಸಂಭವಿಸಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಜ್ಯೋತಿಷಿಗಳ ಪ್ರಕಾರ, ಸುಮಾರು 100 ವರ್ಷಗಳ ನಂತರ ಹೋಳಿಯಲ್ಲಿ ಚಂದ್ರಗ್ರಹಣ ಸಂಭವಿಸುತ್ತದೆ. ಹೋಳಿ ದಿನದಂದು ಕೆಲವು ವಿಶೇಷ ಯೋಗ ಕೂಡ ರೂಪುಗೊಳ್ಳುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸುಮಾರು 500 ವರ್ಷಗಳ ನಂತರ ಹೋಳಿ ದಿನದಂದು 6 ರೀತಿಯ ವಿಶೇಷ ಯೋಗಗಳು ರೂಪುಗೊಳ್ಳಲಿವೆ.
ಈ ಬಾರಿಯ ಹೋಳಿ ಹಬ್ಬ ಬಹಳ ವಿಶೇಷವಾಗಿರುತ್ತದೆ ಎಂದು ಜ್ಯೋತಿಷಿಗಳು ನಂಬಿದ್ದಾರೆ. ಏಕೆಂದರೆ ಹೋಳಿ ದಿನದಂದು ವೃದ್ಧಿ ಯೋಗ, ರವಿ ಯೋಗ, ಬುಧಾದಿತ್ಯ ಯೋಗ, ಧನ ಶಕ್ತಿ ಯೋಗ, ತ್ರಿಗ್ರಾಹಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗದಂತಹ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ಶುಭಯೋಗಗಳು ಯಾವ ರಾಶಿಯವರಿಗೆ ಲಾಭವನ್ನು ನೀಡಲಿದೆ ಎಂಬುದನ್ನು ತಿಳಿಯೋಣ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಈ ವರ್ಷದ ಹೋಳಿಯು ಅನೇಕ ಶುಭ ಫಲಗಳನ್ನು ತರುತ್ತಿದೆ. ಹೋಳಿ ದಿನದಂದು ವ್ಯಾಪಾರಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ವೃತ್ತಿಜೀವನದಲ್ಲಿ ಹಠಾತ್ ಬದಲಾವಣೆಗಳನ್ನು ನೋಡುತ್ತಾರೆ. ಕುಟುಂಬ ಸದಸ್ಯರಿಂದ ಒಳ್ಳೆಯ ಸುದ್ದಿ ಕೇಳಬಹುದು.
ಕಟಕ ರಾಶಿ: ಈ ವರ್ಷದ ಹೋಳಿಯು ಕರ್ಕ ರಾಶಿಯವರಿಗೆ ಲಾಭವನ್ನು ತರುತ್ತದೆ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಸಂಬಂಧಗಳಲ್ಲಿ ಮಧುರತೆ ಇರುತ್ತದೆ. ಸಂಗಾತಿಯಿಂದ ಬೆಂಬಲವನ್ನು ಪಡೆಯುತ್ತೀರಿ.
ವೃಶ್ಚಿಕ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭವಾಗಲಿದೆ. ಜೀವನದಲ್ಲಿ ಸಕಾರಾತ್ಮಕ ಆಲೋಚನೆಗಳು ಬರುತ್ತವೆ. ಇಡೀ ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗಲು ಯೋಜಿಸಬಹುದು. ಏಪ್ರಿಲ್ ಆರಂಭದಲ್ಲಿ ಈ ಯೋಜನೆ ಯಶಸ್ವಿಯಾಗಬಹುದು.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)