Draupadi Murmu Z+ Security : ರಾಷ್ಟ್ರಪತಿ ಅಭ್ಯರ್ಥಿಯಾದ ದ್ರೌಪದಿ ಮುರ್ಮು ಅವರಿಗೆ 'ಝಡ್ ಪ್ಲಸ್' ಸೆಕ್ಯೂರಿಟಿ!

ವಿರೋಧ ಪಕ್ಷಗಳ ನಂತರ ಎನ್‌ಡಿಎ ಕೂಡ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯ ಹೆಸರನ್ನು ನಿನ್ನೆ ಪ್ರಕಟಿಸಿದೆ.

ವಿರೋಧ ಪಕ್ಷಗಳ ನಂತರ ಎನ್‌ಡಿಎ ಕೂಡ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯ ಹೆಸರನ್ನು ನಿನ್ನೆ ಪ್ರಕಟಿಸಿದೆ. ಎನ್‌ಡಿಎ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಿದ್ದು, ಬುಡಕಟ್ಟು ಜನಾಂಗದವರನ್ನು ಮುನ್ನೆಲೆಗೆ ತರುವ ಪಣತೊಟ್ಟಿದೆ. ದ್ರೌಪದಿ ಮುರ್ಮು ಜಾರ್ಖಂಡ್‌ನ ಮೊದಲ ಮಹಿಳಾ ಗವರ್ನರ್ ಆಗಿದ್ದಾರೆ.
 

1 /5

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯ 'ಝಡ್ ಪ್ಲಸ್' ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ. ಬುಧವಾರ ಮುಂಜಾನೆ ಸಶಸ್ತ್ರ ಪಡೆ ಮುರ್ಮು ಅವರ ಭದ್ರತೆಯನ್ನು ವಹಿಸಿಕೊಂಡಿದೆ.

2 /5

ದ್ರೌಪದಿ ಮುರ್ಮು ಜಗನ್ನಾಥ ದೇವಾಲಯದ ಸಂಕೀರ್ಣದಲ್ಲಿರುವ ನಂದಿಯ ಪ್ರತಿಮೆಯ ಮುಂದೆ ಪ್ರಾರ್ಥಿಸಿದರು. ಮಾಧ್ಯಮ ವರದಿಗಳ ಪ್ರಕಾರ, 2017 ರಲ್ಲಿಯೂ ದ್ರೌಪದಿ ಮುರ್ಮು ಅವರ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಗೆ ಪ್ರಸ್ತಾಪಿಸಲಾಗಿತ್ತು.

3 /5

ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ದೇವಸ್ಥಾನದ ಆವರಣವನ್ನು ಕಸಗುಡಿಸುವ ಮೂಲಕ ಸ್ವಚ್ಛಗೊಳಿಸಿದರು. 2015 ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು, ದ್ರೌಪದಿ ಮುರ್ಮು ಒಡಿಶಾದಲ್ಲಿ ಎರಡು ಬಾರಿ ಶಾಸಕರಾಗಿ ಮತ್ತು ಒಮ್ಮೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

4 /5

ದ್ರೌಪದಿ ಮುರ್ಮು ಬುಧವಾರ ಒಡಿಶಾದ ರಾಯರಂಗ್‌ಪುರದ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಸ್ಪರ್ಧಿಸಲಿರುವ ದೇಶದ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

5 /5

ದ್ರೌಪದಿ ಮುರ್ಮು 18 ಮೇ 2015 ರಿಂದ ಜಾರ್ಖಂಡ್ ರಾಜ್ಯಪಾಲರಾಗಿ ಆಯ್ಕೆ ಆಗಿದ್ದಾರೆ. ಇವರು ಮೂಲತಃ ಒಡಿಶಾದವರಾಗಿದ್ದರೆ. ರಾಷ್ಟ್ರಪತಿ  ಅಭ್ಯರ್ಥಿಯಾಗಿ ಘೋಷಣೆಯಾದ ಮೇಲೆ ಇಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.