Deepika Padukone Birthday: ದೀಪಿಕಾ ಪಡುಕೋಣೆಯವರ ಅಪರೂಪದ & ಬಾಲ್ಯದ ಕ್ಯೂಟ್‌ ಫೋಟೋಗಳು

ನಾಳೆ ಅಂದರೆ ಬುಧವಾರ(ಜ.5) 36ನೇ ವಸಂತಕ್ಕೆ ಕಾಲಿಡಲಿರುವ ನಟಿ ದೀಪಿಕಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಬಾಲಿವುಡ್ ದಿವಾ, ರಣವೀರ್ ಸಿಂಗ್ ಮನದರಸಿ ದೀಪಿಕಾ ಪಡುಕೋಣೆ ಸದ್ಯ ಬ್ಯುಸಿ ನಟಿ. ಕೈಯಲ್ಲಿ ಹತ್ತಾರು ಚಿತ್ರಗಳ ಪ್ರಾಜೆಕ್ಟ್ ಗಳನ್ನಿಟ್ಟುಕೊಂಡಿರುವ ನಟಿಯ ಕಾಲ್ ಶೀಟ್ ಗಾಗಿ ನಿರ್ಮಾಪಕರೇ ಕಾಯುವಂತಾಗಿದೆ. ನಾಳೆ ಅಂದರೆ ಬುಧವಾರ(ಜ.5) 36ನೇ ವಸಂತಕ್ಕೆ ಕಾಲಿಡಲಿರುವ ನಟಿ ದೀಪಿಕಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೋಟ್ಯಂತರ ಅಭಿಮಾನಿಗಳು ಅವರ ಹುಟ್ಟುಹಬ್ಬಕ್ಕೆ ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸಲು ಕಾಯುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಪೋಸ್ಟ್ ಗಳನ್ನು ಹಾಕುತ್ತಾ ನಟಿ ತಮ್ಮ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ನೆಚ್ಚಿನ ನಟಿಯ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ದೀಪಿಕಾರ ಅಪರೂಪದ ಮತ್ತು ಬಾಲ್ಯದ ಕ್ಯೂಟ್ ಕ್ಯೂಟ್ ಫೋಟೋಗಳನ್ನು ಇಲ್ಲಿ ನೀಡಲಾಗಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮಂದಹಾಸಕ್ಕಿಂತ ಅದ್ಭುತ ಆಭರಣ ಜಗತ್ತಿನಲ್ಲಿ ಯಾವುದೂ ಇಲ್ಲವೆಂಬಂತೆ ಬಾಲ್ಯದಲ್ಲಿ ನಗುತ್ತಿರುವ ದೀಪಿಕಾ ಪಡುಕೋಣೆ.

2 /5

ಈ ಫೋಟೋದಲ್ಲಿ ದೀಪಿಕಾ ಪಡುಕೋಣೆ ಮತ್ತು ಅವರ ತಂದೆ ಪ್ರಕಾಶ್ ಪಡುಕೋಣೆಯವರನ್ನು ಕಾಣಬಹುದು. ಅಪ್ಪ-ಮಗಳು ಪರಸ್ಪರ ಸಂತೋಷದಿಂದ ಫೋಟೋಗೆ ಪೋಸ್ ನೀಡಿದ್ದು ಹೀಗೆ.

3 /5

ದೀಪಿಕಾ ಪಡುಕೋಣೆ ತನ್ನ ಕುಟುಂಬ ಸದಸ್ಯರೊಂದಿಗೆ ಪೋಸ್ ನೀಡುತ್ತಿರುವ ವೇಳೆ ತನ್ನ ಮುದ್ದಾದ ನಗುವಿನ ಮೂಲಕ ಕಂಡಿದ್ದು ಹೀಗೆ.

4 /5

ತಾಯಂದಿರ ದಿನದಂದು ದೀಪಿಕಾ ಅವರು ಶಾಲಾ ಸಮವಸ್ತ್ರವನ್ನು ಧರಿಸಿರುವ ಮತ್ತು ಕ್ರೀಡಾ ಆಟದಲ್ಲಿ ಗೆದ್ದ ಬಹುಮಾನಗಳನ್ನು ಹಿಡಿದಿರುವ ಫೋಟೋ ಇದಾಗಿದೆ.

5 /5

ಸುಂದರವಾದ ಸ್ನ್ಯಾಪ್‌ಶಾಟ್‌ನಲ್ಲಿ ದೀಪಿಕಾ ಪಡುಕೋಣೆ ಅವರು ಧರಿಸಿರುವ ನಕಲಿ ಮೀಸೆಯನ್ನು ಕಾಣಬಹುದು.