ಅಲಿಯಾ ಭಟ್ ಸೊಸೆ ನೋಡಲು ಸುಂದರ: ಸೌಂದರ್ಯದ ವಿಷಯದಲ್ಲಿ ಬಾಲಿವುಡ್ ನಟಿಯರಿಗೆ ಸ್ಪರ್ಧೆ..!

ಸದ್ಯ ರಣಬೀರ್ ಕಪೂರ್ ಅವರ ಕಿರಿಯ ಚಿಕ್ಕಮ್ಮ ರಿಮಾ ಜೈನ್ ಅವರ ಪುತ್ರ ಆದರ್ ಜೈನ್ ಜೊತೆ ತಾರಾ ಸುತಾರಿಯಾ ಡೇಟಿಂಗ್ ಮಾಡುತ್ತಿದ್ದಾರೆ.

ಸುಂದರ ನಟಿ ತಾರಾ ಸುತಾರಿಯಾ ಶೀಘ್ರದಲ್ಲೇ ವಧು ಆಗಲಿದ್ದಾರೆ. ಆಲಿಯಾ ಭಟ್ ಸೊಸೆಯಾಗಿರುವ ಸುತಾರಿಯಾ ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ಸದ್ಯ ರಣಬೀರ್ ಕಪೂರ್ ಅವರ ಕಿರಿಯ ಚಿಕ್ಕಮ್ಮ ರಿಮಾ ಜೈನ್ ಅವರ ಪುತ್ರ ಆದರ್ ಜೈನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿಯ ಮದುವೆಗೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಸುತಾರಿಯಾ ಯಾವ ಬಾಲಿವುಡ್ ನಟಿಗೂ ಕಮ್ಮಿ ಇಲ್ಲ. ಸೌಂದರ್ಯದಲ್ಲಿ ಅವರು ಬಾಲಿವುಡ್ ನಟಿಯರಿಗೆ ಪೈಪೋಟಿ ನೀಡುತ್ತಾರೆ. ಇವರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬಾಲಿವುಡ್ ನಟಿ ತಾರಾ ಸುತಾರಿಯಾ ತನ್ನ ಮದುವೆಯ ಸುದ್ದಿಯಿಂದ ಇತ್ತೀಚಿನ ದಿನಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ವರದಿಗಳ ಪ್ರಕಾರ ಸುತಾರಿಯಾ ಶೀಘ್ರದಲ್ಲೇ ತನ್ನ ಗೆಳೆಯ ಆದಾರ್ ಜೈನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

2 /5

ಕಳೆದ ವರ್ಷ ಆಗಸ್ಟ್‌ ನಲ್ಲಿ ತಾರಾ ಮತ್ತು ಆಧಾರ್ ಜೈನ್ ತಮ್ಮ ಸಂಬಂಧವನ್ನು Instagram ನಲ್ಲಿ ಅಧಿಕೃತಗೊಳಿಸಿದ್ದರು. ಅಂದು ಆದಾರ್ ಜೈನ್  ಹುಟ್ಟುಹಬ್ಬದಂದು ತಾರಾ ಫೋಟೋವನ್ನು ಹಂಚಿಕೊಂಡಿದ್ದರು. ಆದಾರ್ ನನ್ನ ಸ್ವಂತ ಅಂತಾ ಅಭಿಮಾನಿಗಳಿಗೆ ತಿಳಿಸಿದ್ದರು.

3 /5

ಆಧಾರ್ ಜೈನ್ ಅವರು ಬಾಲಿವುಡ್ ನಟರಾದ ರಣಬೀರ್ ಕಪೂರ್ ಮತ್ತು ಕರೀನಾ ಕಪೂರ್ ಅವರ ಕಿರಿಯ ಚಿಕ್ಕಮ್ಮ ರೀಮಾ ಜೈನ್-ಮನೋಜ್ ಜೈನ್ ಅವರ ಪುತ್ರ.  ರಣಬೀರ್ ಮತ್ತು ಕರೀನಾ ಅವರ ಸೋದರಸಂಬಂಧಿ. ಆಧಾರ್‌ ಜೈನ್ 2017ರಲ್ಲಿ ‘ಕೈದಿ ಬ್ಯಾಂಡ್’ ಚಿತ್ರದಲ್ಲಿ ನಾಯಕ ನಟನಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.

4 /5

ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಆಲಿಯಾ ಭಟ್ ಮತ್ತು  ರಣಬೀರ್ ಕಪೂರ್ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಣಬೀರ್ ಅವರನ್ನು ಮದುವೆಯಾದರೆ ಸಂಬಂಧದಲ್ಲಿ ಆಲಿಯಾರಿಗೆ ಸುತಾರಿಯಾ ಸೊಸೆಯಾಗಲಿದ್ದಾರೆ. ಆದರೆ ಆಲಿಯಾ ಮತ್ತು ತಾರಾ ಇತ್ತೀಚೆಗೆ ಒಟ್ಟಿಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇವರಿಬ್ಬರೂ ತಮ್ಮ ವೃತ್ತಿಜೀವನವನ್ನು ‘ಸ್ಟೂಡೆಂಟ್ ಆಫ್ ದಿ ಇಯರ್’ ಮೂಲಕ ಪ್ರಾರಂಭಿಸಿದ್ದರು.

5 /5

ತಾರಾ ಸುತಾರಿಯಾ ಶೀಘ್ರದಲ್ಲೇ ‘ತಡಪ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ‘ತಡಪ್’ ಚಿತ್ರದ ಪೋಸ್ಟರ್‌ಗೆ ಪೋಸ್ ನೀಡುತ್ತಿದ್ದಾರೆ. ತಾರಾ ಅವರು  ಅಹಾನ್ ಶೆಟ್ಟಿಯೊಂದಿಗೆ ಬೈಕ್‌ನಲ್ಲಿ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ.