ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನಾಡಿ ಆಗಿರುವ ವಾಟ್ಸಾಪ್‌ನಲ್ಲಿ ಉತ್ತಮ ಅಪ್‌ಡೇಟ್ ಬರುತ್ತಿದೆ. ನೀವು ಇನ್ನು ಮುಂದೆ ಕಂಪ್ಯೂಟರ್‌ನಲ್ಲಿ ವಾಟ್ಸಾಪ್ ಚಾಲನೆಯಲ್ಲಿರುವಾಗ ಅದನ್ನು ಮತ್ತೆ ಮತ್ತೆ ಸಂಪರ್ಕಿಸಬೇಕಾಗಿಲ್ಲ. ನಿಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಒಮ್ಮೆ ನೀವು ಲಾಗಿನ್ ಮಾಡಿದ ನಂತರ ಯಾವುದೇ ಅಡಚಣೆ ಇಲ್ಲದೆ ಚಾಟಿಂಗ್ ಮಾಡಲು ನಿಮಗೆ ಸಾಧ್ಯವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನಮ್ಮ ಪಾಲುದಾರ ವೆಬ್‌ಸೈಟ್ zeenews.com ಪ್ರಕಾರ, ವಾಟ್ಸಾಪ್‌ನಲ್ಲಿ ಶೀಘ್ರದಲ್ಲೇ ಹೊಸ ವೈಶಿಷ್ಟ್ಯ ಬರಲಿದೆ. ಈ ವೈಶಿಷ್ಟ್ಯದ ಆಗಮನದ ನಂತರ ಕಂಪ್ಯೂಟರ್‌ನಲ್ಲಿ ಚಾಟ್ ಮಾಡುವಾಗ ನೀವು ಅದನ್ನು ಮತ್ತೆ ಮತ್ತೆ ಮೊಬೈಲ್‌ಗೆ ಸಂಪರ್ಕಿಸುವ ಅಗತ್ಯವಿರುವುದಿಲ್ಲ ಎಂದು ವರದಿಯಾಗಿದೆ.
ವರದಿಯ ಪ್ರಕಾರ, ಈ ಹೊಸ ವೈಶಿಷ್ಟ್ಯಕ್ಕಾಗಿ ವಾಟ್ಸಾಪ್ ಕಾರ್ಯನಿರ್ವಹಿಸುತ್ತಿದೆ. ಈ ಹೊಸ ವೈಶಿಷ್ಟ್ಯದ ಬೀಟಾ ಆವೃತ್ತಿ ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.
ಮಾಹಿತಿಯ ಪ್ರಕಾರ, ಬಳಕೆದಾರರು ಮೊಬೈಲ್‌ನಿಂದ ಕಂಪ್ಯೂಟರ್‌ಗೆ ವಾಟ್ಸಾಪ್‌ಗೆ (Whatsapp) ಲಾಗ್ ಇನ್ ಮಾಡಿದಾಗ ಹೊಸ ಸಾಧನವನ್ನು ಸೇರಿಸಲು ಕೇಳಲಾಗುತ್ತದೆ. ಆಗ ಒಮ್ಮೆ ಅಕ್ಸೆಪ್ಟ್ ಮಾಡಿದ ನಂತರ ಬಳಕೆದಾರರನ್ನು ಮತ್ತೆ ಮತ್ತೆ ಲಾಗಿನ್ ಮಾಡಲು ಕೇಳಲಾಗುವುದಿಲ್ಲ. ಇದರಿಂದಾಗಿ ಗ್ರಾಹಕರು ಪದೇ ಪದೇ ಲಾಗಿನ್ ಆಗುವ ತೊಂದರೆಗೆ ಸಿಲುಕುವುದಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ - WhatsAppನಲ್ಲಿ ಬರುವ ಈ ಲಿಂಕ್ ಅನ್ನು ಅಪ್ಪಿತಪ್ಪಿಯೂ ತೆರೆಯದಿರಿ, ಖಾಲಿಯಾಗುತ್ತೆ ಅಕೌಂಟ್
ಯಾವುದೇ ಹೊಸ ಸಾಧನದಿಂದ ವಾಟ್ಸಾಪ್ (WhatsApp) ಅನ್ನು ಪ್ರವೇಶಿಸಲು, ಸೆಟ್ಟಿಂಗ್‌ಗಳಲ್ಲಿ ವಿಶೇಷ ಆಯ್ಕೆಯನ್ನು ನೀಡಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ - WhatsApp: App ತೆರೆಯದೆಯೇ ವಾಟ್ಸಾಪ್‌ನಲ್ಲಿ ಆನ್‌ಲೈನ್‌ನಲ್ಲಿ ಯಾರಿದ್ದಾರೆಂದು ತಿಳಿಯಲು ಇದು ಸುಲಭ ಉಪಾಯ
ವಾಟ್ಸಾಪ್‌ನಲ್ಲಿ ಬಳಕೆದಾರರಿಗೆ ಏಕಕಾಲದಲ್ಲಿ 4 ಸಾಧನಗಳನ್ನು ಸಂಪರ್ಕಿಸುವ ಆಯ್ಕೆಯನ್ನು ನೀಡಲಾಗುತ್ತದೆ ಎಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.