Amazon Fab Phones Fest: 200 ರೂ.ಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ ಖರೀದಿಸುವ ಅವಕಾಶ- ಇಲ್ಲಿದೆ ಆಫರ್ಸ್

                          

Amazon Fab Phones Fest: ದೇಶದ ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ನಲ್ಲಿ ಅಮೆಜಾನ್ ಫ್ಯಾಬ್ ಫೋನ್‌ಗಳ ಫೆಸ್ಟ್  ಮಾರಾಟವು ಏಪ್ರಿಲ್ 10 ರಿಂದ ನಡೆಯುತ್ತಿದೆ, ಇದರಲ್ಲಿ ನಿಮಗೆ ಪ್ರತಿ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳು ಮತ್ತು ಅನೇಕ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಇಂದು ನಾವು ನಿಮಗೆ 200 ರೂಪಾಯಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಐದು ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೇಳಲಿದ್ದೇವೆ. ಈ ಅಮೆಜಾನ್ ಮಾರಾಟವು ಏಪ್ರಿಲ್ 14 ರವರೆಗೆ ಮಾತ್ರ ಲೈವ್ ಆಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಪ್ರಬಲ ಬ್ಯಾಟರಿ ಮತ್ತು ಅದ್ಭುತ ಡಿಸ್ಪ್ಲೇ ಹೊಂದಿರುವ ಈ ಲಾವಾ ಫೋನ್ ಅನ್ನು 7,999 ರೂ.ಗೆ ಬದಲಾಗಿ 6,998 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಎಚ್‌ಎಸ್‌ಬಿಸಿ ಕ್ಯಾಶ್‌ಬ್ಯಾಕ್ ಕಾರ್ಡ್ ಬಳಸುವ ಮೂಲಕ ನೀವು ರೂ. 350 ರ ರಿಯಾಯಿತಿಯನ್ನು ಪಡೆಯುತ್ತೀರಿ ಮತ್ತು ಎಕ್ಸ್‌ಚೇಂಜ್ ಆಫರ್‌ನೊಂದಿಗೆ ನೀವು ರೂ.6,600 ಉಳಿಸುತ್ತೀರಿ. ಎರಡೂ ಕೊಡುಗೆಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆದ ನಂತರ, ನೀವು Lava X2 ಅನ್ನು ರೂ.48 ಕ್ಕೆ ಖರೀದಿಸಲು ಸಾಧ್ಯವಾಗುತ್ತದೆ.

2 /5

ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಅನ್ನು 12,999 ರೂ. ಬದಲಿಗೆ 10,499 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. HSBC ಕ್ಯಾಶ್‌ಬ್ಯಾಕ್ ಕಾರ್ಡ್ ಬಳಕೆದಾರರು 5% ರಿಯಾಯಿತಿಯನ್ನು ಪಡೆಯುತ್ತಾರೆ ಮತ್ತು ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆಯುವಲ್ಲಿ ನೀವು ಯಶಸ್ವಿಯಾದರೆ ರೂ. 9,800 ಉಳಿಸಲು ಸಾಧ್ಯವಾಗುತ್ತದೆ. ನೀವು ರೂ. 174 ಕ್ಕೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ12 ಅನ್ನು ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ.

3 /5

5,000mAh ಬ್ಯಾಟರಿ ಮತ್ತು ಸ್ಟ್ರಾಂಗ್ ಡಿಸ್‌ಪ್ಲೇ ಹೊಂದಿರುವ ಈ ಸ್ಟೈಲಿಶ್ ಸ್ಮಾರ್ಟ್‌ಫೋನ್ ಬೆಲೆ 8,999 ರೂ. ಆದರೆ ಸೇಲ್‌ನಲ್ಲಿ ಇದನ್ನು 6,599 ರೂ.ಗೆ ಮಾರಾಟ ಮಾಡಲಾಗುತ್ತಿದೆ. HSBC ಬ್ಯಾಂಕ್‌ನ ಕ್ಯಾಶ್‌ಬ್ಯಾಕ್ ಕಾರ್ಡ್ ಅನ್ನು ಬಳಸುವುದರಿಂದ, ನೀವು 5% ರಷ್ಟು ಅಂದರೆ 330 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ ಮತ್ತು ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆಯುವಲ್ಲಿ ನೀವು 6,200 ರೂಪಾಯಿಗಳನ್ನು ಉಳಿಸಲು ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ, ನೀವು ಈ ಫೋನ್ ಅನ್ನು ರೂ. 69 ಕ್ಕೆ ಖರೀದಿಸಲು ಸಾಧ್ಯವಾಗುತ್ತದೆ.

4 /5

Redmi 9A Sport ಅಮೆಜಾನ್‌ನಲ್ಲಿ 6,999 ರೂಗಳಿಗೆ ಲಭ್ಯವಿದೆ. ವಾಸ್ತವವಾಗಿ ಅದರ ಮೂಲ ಬೆಲೆ 8,499 ರೂ. ನೀವು HSBC ಕ್ಯಾಶ್‌ಬ್ಯಾಕ್ ಕಾರ್ಡ್ ಬಳಸುವ ಮೂಲಕ 350 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ ಮತ್ತು ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಲಾಭವನ್ನು ಪಡೆಯುವಲ್ಲ ಯಶಸ್ವಿಯಾದರೆ ನೀವು 6,600 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. ನೀವು 49 ರೂಪಾಯಿಗೆ Redmi ಫೋನ್ ಅನ್ನು ಖರೀದಿಸಲು ಸಾಧ್ಯವಾಗುತ್ತದೆ.

5 /5

Oppo A15s: 64GB ಸ್ಟೋರೇಜ್ ಮತ್ತು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಹೊಂದಿರುವ ಈ Oppo ಫೋನ್ ಅನ್ನು ರೂ. 13,990 ಬದಲಿಗೆ ರೂ. 10,990 ಗೆ ಮಾರಾಟ ಮಾಡಲಾಗುತ್ತಿದೆ. HSBC ಕ್ಯಾಶ್‌ಬ್ಯಾಕ್ ಕಾರ್ಡ್ ಬಳಕೆದಾರರು 5% ರಿಯಾಯಿತಿಯನ್ನು ಪಡೆಯಬಹುದು. ಅಂದರೆ ರೂ.550 ಮತ್ತು ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನಗಳನ್ನು ಪಡೆಯುವ ಮೂಲಕ ರೂ.10,250 ಉಳಿಸಬಹುದು. ನೀವು Oppo A15s ಅನ್ನು ರೂ. 190 ಕ್ಕೆ ಖರೀದಿಸಬಹುದು.