Amazon Great Indian Festival 2022: ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ 5G ಸ್ಮಾರ್ಟ್‌ಫೋನ್‌ಗಳು, ಮತ್ತೆ ಸಿಗಲ್ಲ ಇಂತಹ ಆಫರ್

ನೀವೂ ಸಹ ಹೊಸ 5ಜಿ ಸ್ಮಾರ್ಟ್‌ಫೋನ್‌ ಖರೀದಿಸಲು ಚಿಂತಿಸುತ್ತಿದ್ದರೆ, ಇಲ್ಲಿದೆ ಅದ್ಭುತ ಆಫರ್.  ಇಂದಿನಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2022 ಆರಂಭವಾಗಿದ್ದು, ಈ ಮಾರಾಟದಲ್ಲಿ ಅತ್ಯಂತ ದುಬಾರಿ 5G ಸ್ಮಾರ್ಟ್‌ಫೋನ್‌ಗಳು ಅತ್ಯಂತ ಅಗ್ಗದ ದರದಲ್ಲಿ  ಲಭ್ಯವಾಗಲಿವೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2022: ಜನಪ್ರಿಯ ಇ-ಕಾಮರ್ಸ್ ಸೈಟ್ ಅಮೇಜಾನ್‌ನಲ್ಲಿ ಇಂದಿನಿಂದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಯುತ್ತಿದೆ. ಈ ಸೇಲ್‌ನಲ್ಲಿ ನೀವು ಸ್ಮಾರ್ಟ್‌ಫೋನ್‌ಗಳ ಮೇಲೆ ಅದ್ಭುತವಾದ ರಿಯಾಯಿತಿಗಳನ್ನು ಪಡೆಯಬಹುದಾಗಿದೆ. ವಾಸ್ತವವಾಗಿ, ಭಾರತದಲ್ಲಿ ಶೀಘ್ರದಲ್ಲೇ ಬಹುನಿರೀಕ್ಷಿತ 5G ಸೇವೆ  ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಹಲವು ಕಂಪನಿಗಳು ತಮ್ಮ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಇದೀಗ ಆ ದುಬಾರಿ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಈ ಸೇಲ್‌ನಲ್ಲಿ ಸಾವಿರ  ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ನಿಮ್ಮದಾಗಿಸಬಹುದು.  ಈ ಪಟ್ಟಿಯಲ್ಲಿ Samsung, Redmi, iQOO, OnePlus ಮತ್ತು Realme ಸ್ಮಾರ್ಟ್‌ಫೋನ್‌ಗಳು ಸೇರಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

OnePlus Nord CE 2 Lite 5G 6GB+128GB ರೂಪಾಂತರದ ಬೆಲೆ 19,999 ರೂ. ಆದರೆ ಅಮೇಜಾನ್‌ನಲ್ಲಿ 18,999 ರೂ.ಗೆ ಲಭ್ಯವಿದೆ. ಇದಲ್ಲದೆ ಫೋನ್ ಮೇಲೆ 18 ಸಾವಿರ ರೂಪಾಯಿಗಳ ಎಕ್ಸ್ ಚೇಂಜ್ ಆಫರ್  ಕೂಡ ಸಿಗುತ್ತಿದ್ದು ನೀವು ಇದರ ಸಂಪೂರ್ಣ ಕೊಡುಗೆ ಲಾಭವನ್ನು ಪಡೆಯಲು ಯಶಸ್ವಿಯಾದರೆ ಈ 5ಜಿ ಫೋನ್ ಅನ್ನು ಕೇವಲ 999 ರೂ.ಗಳಿಗೆ ನಿಮ್ಮದಾಗಿಸಬಹುದು.

2 /5

Samsung Galaxy M33 5G 8GB + 128GB ರೂಪಾಂತರದ ಪ್ರಾರಂಭಿಕ ಬೆಲೆ 25,999 ರೂಪಾಯಿಗಳು, ಆದರೆ ಅಮೇಜಾನ್‌ನಲ್ಲಿ  ಈ ಫೋನ್ 15,999 ರೂಪಾಯಿಗಳಿಗೆ ಲಭ್ಯವಿದೆ. ಅಂದರೆ ಫೋನ್ ಮೇಲೆ 10 ಸಾವಿರ ರಿಯಾಯಿತಿ ನೀಡಲಾಗುತ್ತಿದೆ. ಇದಾದ ನಂತರ 15 ಸಾವಿರ ರೂಪಾಯಿ ರಿಯಾಯಿತಿ ಕೂಡ ಇದೆ. ನೀವು ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ನಿಮಗೆ ಈ ರಿಯಾಯಿತಿ ಸಿಗುತ್ತದೆ.ನೀವು ಇದರ ಸಂಪೂರ್ಣ ಕೊಡುಗೆ ಲಾಭವನ್ನು ಪಡೆಯಲು ಯಶಸ್ವಿಯಾದರೆ ಫೋನ್‌ ಅನ್ನು ಕೇವಲ 999 ರೂ.ಗಳಿಗೆ ಖರೀದಿಸಬಹುದು.

3 /5

Redmi Note 11T 5G 6GB+128GB ರೂಪಾಂತರದ ಬೆಲೆ 20,999.  ಆದರೆ ಅಮೇಜಾನ್‌ನಲ್ಲಿ  14,999 ರೂ.ಗೆ ಲಭ್ಯವಿದೆ. ಅಂದರೆ ಫೋನ್ ಮೇಲೆ 6 ಸಾವಿರ ರಿಯಾಯಿತಿ ನೀಡಲಾಗುತ್ತಿದೆ. ಇದಾದ ನಂತರ 14,200 ರೂ.ಗಳ ಎಕ್ಸ್ ಚೇಂಜ್ ಆಫರ್ ಕೂಡ ಇದರಲ್ಲಿ ಲಭ್ಯವಿದೆ. ಇದರ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾದರೆ ಫೋನ್‌ನ ಬೆಲೆ 799 ರೂ.ಗಳಿಗೆ ಇಳಿಕೆ ಆಗಲಿದೆ. 

4 /5

Redmi 11 Prime 5G 4GB + 64GB ರೂಪಾಂತರದ ಬೆಲೆ 15,999 ರೂ. ಅಮೇಜಾನ್‌ನಲ್ಲಿ ಈ ಫೋನ್ ರೂ.12,999ಕ್ಕೆ ಲಭ್ಯವಿದೆ. ಫೋನ್ ಮೇಲೆ 3 ಸಾವಿರ ರೂಪಾಯಿ ರಿಯಾಯಿತಿ ಇದೆ. ಫೋನ್‌ನಲ್ಲಿ 12,200 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಇದೆ. ನೀವು ಪೂರ್ಣ ಆಫ್ ಮಾಡಲು ಸಾಧ್ಯವಾದರೆ, ಫೋನ್‌ ಅನ್ನು ಕೇವಲ 799 ರೂ.ಗಳಿಗೆ ಖರೀದಿಸಬಹುದು.

5 /5

Realme narzo 30 5G 6GB + 128GB ರೂಪಾಂತರದ ಬೆಲೆ 17,999 ರೂ. ಅಮೇಜಾನ್‌ನಲ್ಲಿ ರೂ.16,999 ಕ್ಕೆ ಲಭ್ಯವಿದೆ. ಇದಲ್ಲದೆ ಫೋನ್‌ನಲ್ಲಿ 15,600 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಇದೆ. ನೀವು ಪೂರ್ಣ ಆಫ್ ಪಡೆಯಲು ಸಾಧ್ಯವಾದರೆ ಫೋನ್‌ನ ಬೆಲೆ 1,399 ರೂ.ಗಳಿಗೆ ಇಳಿಯಲಿದೆ.