Amazon Great Indian Festival: ಸ್ಯಾಮ್‌ಸಂಗ್‌ನ 5G ಸ್ಮಾರ್ಟ್‌ಫೋನ್‌ಗೆ ಸಿಗುತ್ತಿದೆ 38,000 ರೂ. ರಿಯಾಯಿತಿ

                       

Amazon Great Indian Festival: ಅಮೆಜಾನ್‌ನ ವಾರ್ಷಿಕ ಮಾರಾಟ, ಗ್ರೇಟ್ ಇಂಡಿಯನ್ ಫೆಸ್ಟಿವಲ್ ಅಕ್ಟೋಬರ್ 3 ರಿಂದ ಆರಂಭವಾಗಿದೆ. ಈ ತಿಂಗಳ ಅವಧಿಯ ಮಾರಾಟದಲ್ಲಿ, ಗ್ರಾಹಕರಿಗೆ ಪ್ರತಿ ಉತ್ಪನ್ನದ ಮೇಲೆ ಅದ್ಭುತ ಕೊಡುಗೆಗಳು ಲಭ್ಯವಾಗುತ್ತಿದೆ. ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೇಳುವುದಾದರೆ, ಉನ್ನತ ಬ್ರ್ಯಾಂಡ್‌ಗಳ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿಯಲ್ಲಿ ಲಭ್ಯವಿದೆ. ರಿಯಾಯಿತಿಗಳ ಜೊತೆಗೆ, ಬ್ಯಾಂಕ್ ಕೊಡುಗೆಗಳು ಮತ್ತು ಕ್ಯಾಶ್‌ಬ್ಯಾಕ್ ಅವಕಾಶಗಳನ್ನು ಸಹ ನೀಡಲಾಗುತ್ತಿದೆ. ಅಮೆಜಾನ್‌ನಲ್ಲಿ ನೀವು ಪಡೆಯಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್ ಡೀಲ್‌ಗಳ ಕುರಿತು ಇಲ್ಲಿದೆ ಮಾಹಿತಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

Samsung Galaxy S20 FE 5G: ನೀವು ಸ್ಯಾಮ್‌ಸಂಗ್‌ನ ಇತ್ತೀಚಿನ ಸ್ಮಾರ್ಟ್‌ಫೋನ್‌ Samsung Galaxy S20 FE 5G ಮೇಲೆ ಬಂಪರ್ ರಿಯಾಯಿತಿ ಪಡೆಯಬಹುದು. ಈ ಫೋನನ್ನು 74,999 ರೂ. ಆಗಿದ್ದು 51% ರಿಯಾಯಿತಿಯಲ್ಲಿ ಅಂದರೆ 36,990 ರೂ.ಗಳಿಗೆ ಖರೀದಿಸಬಹುದಾಗಿದೆ. ನೀವು ವಿನಿಮಯ ಕೊಡುಗೆಯ ಲಾಭವನ್ನು ಪಡೆದರೆ, ನೀವು 13,350 ರೂ. ವರೆಗೆ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ಇಲ್ಲಿ ನೀವು ಕ್ಯಾಶ್‌ಬ್ಯಾಕ್ ಮತ್ತು ಬ್ಯಾಂಕ್ ಕೊಡುಗೆಗಳನ್ನು ಸಹ ಪಡೆಯುತ್ತೀರಿ. 

2 /5

ರೆಡ್ಮಿ ನೋಟ್ 10 ಎಸ್: ಈ 64 ಜಿಬಿ ರೆಡ್ಮಿ ಫೋನಿನ ಬೆಲೆ 16,999 ರೂ. ಆದರೆ ಅಮೆಜಾನ್ ಮಾರಾಟದಲ್ಲಿ ನೀವು ಅದನ್ನು ಮನೆಗೆ 12,999 ರೂ.ಗಳಿಗೆ ಮನೆಗೆ ಕೊಂಡೊಯ್ಯಬಹುದು. ವಿನಿಮಯ ಕೊಡುಗೆಯೊಂದಿಗೆ, ನೀವು 12,100 ರೂ.ವರೆಗೆ ಉಳಿಸಬಹುದು ಮತ್ತು ಇದನ್ನು ರೂ. 612 ರ ಇಎಂಐನಲ್ಲಿ ಕೂಡ ಖರೀದಿಸಬಹುದು. 

3 /5

OnePlus 9 5G: ನೀವು OnePlus 9 5G ಅನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈ ಸೇಲ್‌ನಲ್ಲಿ ನೀವು ಈ ಫೋನ್ ಅನ್ನು 46,999 ರೂ.ಗಳಿಗೆ ಖರೀದಿಸಬಹುದಾಗಿದೆ. ನಿಮ್ಮ ಹಳೆಯ ಫೋನ್‌ಗೆ ಬದಲಾಗಿ ನೀವು ಅದನ್ನು ಖರೀದಿಸಿದರೆ, ನೀವು 20,137 ರೂ.ವರೆಗೆ ಉಳಿಸಬಹುದು. ಇದರಲ್ಲಿ ನೀವು ಇಎಂಐ, ಬ್ಯಾಂಕ್ ಕೊಡುಗೆಗಳು ಮತ್ತು ಕ್ಯಾಶ್‌ಬ್ಯಾಕ್ ಅವಕಾಶಗಳನ್ನು ಪಡೆಯುತ್ತೀರಿ.  ಇದನ್ನೂ ಓದಿ- Mobile Virus : ನಿಮ್ಮ ಮೊಬೈಲ್ ಗೆ ಈ ಮೆಸೇಜ್ ಬಂದಿದೆಯಾ? ಹಾಗಿದ್ರೆ ಎಚ್ಚರ - ಇದು ವೈರಸ್ ಆಗಿರಬಹುದು!

4 /5

ಐಫೋನ್ XR: 64 ಜಿಬಿ ಆಪಲ್ ಐಫೋನ್ ಎಕ್ಸ್ ಆರ್ (Apple iPhone XR) ಬೆಲೆ 47,900 ರೂ. ಆಗಿದೆ. ಈ ಕೊಡುಗೆಯಲ್ಲಿ ನೀವು ಈ ಆಪಲ್ ಪೋನ್ ಅನ್ನು 32,999 ರೂ.ಗಳಿಗೆ ಖರೀದಿಸಬಹುದಾಗಿದೆ. ಇದಲ್ಲದೆ ವಿನಿಮಯ ಕೊಡುಗೆಯೊಂದಿಗೆ, ನೀವು ರೂ 13,350 ವರೆಗೆ ಉಳಿಸಬಹುದು ಮತ್ತು ಈ ಫೋನ್ ಖರೀದಿಯ ಮೇಲೆ ಬ್ಯಾಂಕ್ ಆಫರ್‌ಗಳು ಮತ್ತು ಕ್ಯಾಶ್‌ಬ್ಯಾಕ್‌ ಕೂಡ ಲಭ್ಯವಿದೆ. ಇದನ್ನೂ ಓದಿ- New Telecom Reforms : ಈಗ ಈ ಗ್ರಾಹಕರಿಗೆ ಹೊಸ SIM ಖರೀದಿಸಲು ಸಾಧ್ಯವಿಲ್ಲ : ಸರ್ಕಾರದಿಂದ ಹೊಸ ನಿಯಮ ಜಾರಿ

5 /5

ವಿವೋ ವೈ 12 ಜಿ (Vivo Y12 G): ನೀವು ಈ ವಿವೋ ಸ್ಮಾರ್ಟ್ ಫೋನ್ ಅನ್ನು 13,990 ರೂ.ರ ಬದಲಿಗೆ 10,990ರೂ.ಗಳಿಗೆ ಪಡೆಯುತ್ತೀರಿ. ನೀವು ವಿನಿಮಯ ಕೊಡುಗೆಗಳೊಂದಿಗೆ 10,200 ರೂ.ವರೆಗೆ ಉಳಿಸಬಹುದು ಮತ್ತು ವಿವಿಧ ಬ್ಯಾಂಕ್ ಕೊಡುಗೆಗಳು ಮತ್ತು ಕ್ಯಾಶ್‌ಬ್ಯಾಕ್ ಅವಕಾಶಗಳು ಕೂಡ ಈ ಖರೀದಿಯ ಮೇಲೆ ಲಭ್ಯವಿದೆ.