ಕಷ್ಟಗಳನ್ನು ಮೆಟ್ಟಿ ನಿಂತರೇ ಎಂತಹ ಯಶಸ್ಸು ಕೂಡ ನಮ್ಮನ್ನು ಹಿಂಬಾಲಿಸುತ್ತದೆ ಎನ್ನುವುದಕ್ಕೆ ಅನುಶ್ರೀ ಅವರೇ ಒಂದು ನಿದರ್ಶನ ಎಂದರೇ ಅತಿಶಯೋಕ್ತಿಯಲ್ಲ.. ಸ್ಟಾರ್ ಹಿರೋಯಿನ್‌ಗಳ ರೇಂಜ್‌ಗೆ ಜನಪ್ರಿಯತೆ ಗಳಿಸಿದ ಅನುಶ್ರೀ ಅವರ ಕುರಿತಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.. ಅದೇನೆಂದರೇ...
ಜಿರೋದಿಂದ ಜೀವನವನ್ನು ಶುರುಮಾಡಿದ ಆಂಕರ್ ಅನುಶ್ರೀ ಇಂದು ಎಲ್ಲರೂ ತಿರುಗಿ ನೋಡುವ ಮಟ್ಟಿಗೆ ಬೆಳೆದು ನಿಂತಿದ್ದಾರೆ.. ಇದಕ್ಕೆಲ್ಲ ಕಾರಣ ಅವರು ಪಟ್ಟ ಕಷ್ಟ. ಇಷ್ಟೆಲ್ಲ ಖ್ಯಾತಿ ಗಳಿಸಿರುವ ಈ ಮಂಗಳೂರು ಚೆಲುವೆ ಇನ್ನು ಯಾಕೆ ಮದುವೆಯಾಗಿಲ್ಲ ಎನ್ನುವುದು ಅವರ ಫ್ಯಾನ್ಸ್ ಪ್ರಶ್ನೆ..
ಅನುಶ್ರೀ ಅವರಿಗೆ ಈಗ 36 ವರ್ಷ ವಯಸ್ಸು.. ತಾಯಿ ಪಟ್ಟ ಕಷ್ಟ ನೋಡಿದಕ್ಕಾಗಿ ಇವರು ಇಷ್ಟು ದಿನವಾದ್ರೂ ಮದುವೆ ಯೋಚನೆ ಮಾಡಿರಲಿಲ್ಲ.. ಆದರೆ ಇತ್ತೀಚೆಗೆ ಜೀ ಕನ್ನಡ ಅವಾರ್ಡ್ ಕಾರ್ಯಕ್ರಮದಲ್ಲಿ ಮುಂದಿನ ವರ್ಷ ಮದುವೆಯಾಗುವುದಾಗಿ ಹೇಳಿದ್ದರು.
ಆದರೆ ಇದೀಗ ಅನುಶ್ರೀ ಅವರ ಮದುವೆ ಗುಟ್ಟಾಗಿ ನಡೆದೇ ಹೋಗಿದೆ ಎನ್ನುವ ಸುದ್ದಿ ಹಾಗೂ ಕೆಲವು ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ.. ಆದರೆ ಅವೆಲ್ಲವನ್ನು ಯಾರೋ ಕಿಡಿಗೇಡಿಗಳು ಎಡಿಟ್ ಮಾಡಿ ವೈರಲ್ ಮಾಡುತ್ತಿದ್ದಾರೆ ಎನ್ನಲಾಗಿದೆ..
ಅಲ್ಲದೇ ವೈರಲ್ ಆಗಿರುವ ಅನುಶ್ರೀ ಮದುವೆ ಸುದ್ದಿ ಹಾಗೂ ಪೋಟೋಗಳು ಸತ್ಯವಲ್ಲ.. ಅವು ಬರೀ ವದಂತಿಗಳೇ ಆಗಿವೆ ಎಂದು ಹೇಳಲಾಗ್ತಿದೆ.. ಇದರೊಂದಿಗೆ ಅನುಶ್ರೀ ಸಹ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.. ಹೀಗಾಗಿ ಅವರ ಫ್ಯಾನ್ಸ್ ಕೂಡ ಇವೆಲ್ಲವೂ ಸುಳ್ಳು ಸುದ್ದಿ ಎಂದು ತಳ್ಳಿಹಾಕಿದ್ದಾರೆ..
ಇನ್ನು ಕನ್ನಡದ ಚೆಂದದ ಚೆಲುವೆ ಅನುಶ್ರೀ ಆಂಕರಿಂಗ್‌ನಲ್ಲಿ ಎಲ್ಲರನ್ನೂ ಮೀರಿಸಿದ್ದಾರೆ.. ಅವರಿಲ್ಲವಾದರೇ ಶೋಗಳೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ.. ಇದಲ್ಲದೇ ಅನು ತಮ್ಮದೇ ಆದ ಸ್ವಂತ ಯ್ಯೂಟೂಬ್ ಚಾನೆಲ್‌ನ್ನು ಸಹ ಹೊಂದಿದ್ದಾರೆ..
ಇನ್ನು ಅನುಶ್ರೀ ಅವರ ಮದುವೆ ಸಂಬಂಧಿಸಿದ ಹಲವಾರು ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ.. ಆದರೆ ಇದದ್ಯಾವುದಕ್ಕೂ ಅನುಶ್ರೀ ಪ್ರತಿಕ್ರಿಯೆ ನೀಡಿಲ್ಲ.. ಹೀಗಾಗಿ ಅವೆಲ್ಲವೂ ಬರೀ ವದಂತಿಗಳಾಗಿ ಉಳಿದಿದ್ದು ಸತ್ಯಕ್ಕೆ ಸಮೀಪಿಸಿಲ್ಲ..