ದೀರ್ಘಕಾಲ ಕುಳಿತುಕೊಳ್ಳುವುದರಿಂದ ಕಾಲು ನೋವಿನ ಸಮಸ್ಯೆಯೇ? ಈ ಮನೆಮದ್ದುಗಳನ್ನು ಟ್ರೈ ಮಾಡಿ

                                     

ಕೆಲಸ ಹೆಚ್ಚಾದಾಗ ಆಯಾಸದಿಂದ ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ, ದೀರ್ಘ ಸಮಯ ಕುಳಿತುಕೊಳ್ಳುವುದರಿಂದ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದು ಹಲವು ರೀತಿಯ ಇತರ ಸಮಸ್ಯೆಗಳಿಗೂ ಕಾರಣವಾಗಬಹುದು. ಇದನ್ನು ತಪ್ಪಿಸಲು ಇಲ್ಲಿವೆ ಸುಲಭ ಮನೆಮದ್ದುಗಳು... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಇತ್ತೀಚಿನ ದಿನಗಳಲ್ಲಿ ದಿನವಿಡೀ ಕಚೇರಿಯಲ್ಲಿ ದೀರ್ಘ ಸಮಯದವರೆಗೆ ಕುಳಿತು ಕೆಲಸ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದಾಗಿ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಪದೇ ಪದೇ ಕಾಣಿಸಿಕೊಳ್ಳುವ ಈ ನೋವನ್ನು ನಿರ್ಲಕ್ಷಿಸುವುದರಿಂದ ಅದು ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಇದನ್ನು ತಪ್ಪಿಸಲು ಕೆಲವು ಮನೆಮದ್ದುಗಳು ತುಂಬಾ ಪ್ರಯೋಜನಕಾರಿ ಆಗಿದೆ. ಅಂತಹ ಮನೆಮದ್ದುಗಳೆಂದರೆ... 

2 /5

ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾದಾಗಲೂ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ಪರಿಹಾರ ಪಡೆಯಲು ಐಸ್ ಪ್ಯಾಕಿಂಗ್ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ನಿಮ್ಮ ಪಾದಗಳಲ್ಲಿ ನೋವಿನ ಜೊತೆಗೆ ಐಸ್ ಪ್ಯಾಕಿಂಗ್ ಬಳಸಿ. 

3 /5

ಇದಲ್ಲದೆ. ಒಂದು ಬಕೆಟ್ ನಲ್ಲಿ ನಿಮ್ಮ ಚರ್ಮ ತಡೆಯುವಷ್ಟು ಬಿಸಿ ನೀರು ತೆಗೆದುಕೊಂಡು ಅದರಲ್ಲಿ ಉಪ್ಪು, ಅರಿಶಿನ ಬೆರೆಸಿ ನಿಮ್ಮ ಪಾದಗಳನ್ನು ಆ ನೀರಿನಲ್ಲಿ ಕೆಲವು ನಿಮಿಷಗಳವರೆಗೆ ನೆನೆಸಿ. ಇದು ನಿಮ್ಮ ಕಾಲುಗಳ ಸ್ನಾಯುಗಳಲ್ಲಿನ ಆಯಾಸದಿಂದ ಪರಿಹಾರವನ್ನು ನೀಡುತ್ತದೆ.

4 /5

ರಕ್ತ ಪರಿಚಲನೆ ಸರಿಯಾಗಿ ಆಗದಿದ್ದಾಗಲೂ ಕೂಡ ಇಂತಹ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮಸಾಜ್ ಮಾಡುವುದು ಒಳ್ಳೆಯದು. ನೀವು ಆಲಿವ್ ಎಣ್ಣೆ ಅಥವಾ ಅರಳೆಣ್ಣೆಯನ್ನು ಬಳಸಿ ಮಸಾಜ್ ಮಾಡುವುದರಿಂದ ದೇಹದ ಎಲ್ಲಾ ನರಗಳನ್ನು ತೆರೆಯುತ್ತದೆ, ಇದು ನಿಮ್ಮ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. 

5 /5

ಶೀತ, ನೆಗಡಿಯಾದಾಗ ಇಲ್ಲವೇ ಗಂಟಲಿನ ನೋವಿನಿಂದ ಪರಿಹಾರ ಪಡೆಯಲು ಸಾಮಾನ್ಯವಾಗಿ ಅರಿಶಿನದ ಹಾಲನ್ನು ಸೇವಿಸುತ್ತೇವೆ. ಆದರೆ, ಅರಿಶಿನದ ಹಾಲಿನ ಸೇವನೆಯಿಂದ ಅದು ಪಾದಗಳಲ್ಲಿನ ನೋವಿನಿಂದಲೂ ಪರಿಯಾರವನ್ನು ನೀಡುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.