Laziness: ಆಡುವ ಮಕ್ಕಳು ಓದುವುದರಲ್ಲಿ ಆಸಕ್ತಿ ತೋರದೆ ಇರುವುದಕ್ಕೆ ಹಲವು ಕಾರಣಗಳಿರಬಹುದು. ಆದರೆ, ಕೆಲವು ಸಿಂಪಲ್ ಟಿಪ್ಸ್ ಅನುಸರಿಸುವ ಮೂಲಕ ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮಕ್ಕಳಲ್ಲಿ ಸೋಮಾರಿತನ: ಸಾಮಾನ್ಯವಾಗಿ ಮಕ್ಕಳು ಸದಾ ಆಟದ ಗುಂಗಿನಲ್ಲಿ ಇರುತ್ತಾರೆ. ಹಾಗಾಗಿ ಅವರು ಓದುವುದರಲ್ಲಿ ಸೋಮಾರಿತನವನ್ನು ತೋರಬಹುದು. ಸೋಮಾರಿತನದಿಂದ ಏಕಾಗ್ರತೆ ಕಡಿಮೆಯಾಗುತ್ತದೆ, ಇದರಿಂದ ಓದಲು ಮನಸ್ಸಾಗುವುದಿಲ್ಲ. ಆದರೆ, ಕೆಲವು ಸಿಂಪಲ್ ಸಲಹೆಗಳನ್ನು ಅನುಸರಿಸುವ ಮೂಲಕ ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಬಹುದು. ಅವುಗಳೆಂದರೆ...
ಮಕ್ಕಳು ಏಕಾಗ್ರತೆಯಿಂದ ಕುಳಿತು ಓದಲು ಅನುಕೂಲವಾಗುವಂತೆ ಗಿ ಶಾಂತ, ಸ್ವಚ್ಛ ಮತ್ತು ನಿಯಮಿತ ಸ್ಥಳವನ್ನು ಆಯ್ಕೆಮಾಡಿ. ಇಲ್ಲಿ ಮಕ್ಕಳಿಗೆ ಬೇರೆ ಯಾವುದೇ ಅಡೆತಡೆಗಳಿರಬಾರದು ಎಂಬುದನ್ನು ನೆನಪಿನಲ್ಲಿಡಿ.
ಮಕ್ಕಳನ್ನು ಓದಲು ಕೂರಿಸುವ ಮೊದಲು ಅವರಿಗೆ ಉತ್ತಮ ಭವಿಷ್ಯಕ್ಕಾಗಿ ಓದು ಎಷ್ಟು ಮುಖ್ಯ ಎಂಬುದರ ಕುರಿತು ಅವರನ್ನು ಪ್ರೇರೇಪಿಸಿ.
ಯಾವುದೇ ವಿಷಯವನ್ನು ಮಕ್ಕಳ ತಲೆಗೆ ಬಲವಂತವಾಗಿ ಹೇರುವ ಬದಲಿಗೆ, ಅವರಿಗೆ ಯಾವ ವಿಷಯ ಕಷ್ಟ ಎಂದೆನಿಸುತ್ತೋ ಅಂತಹ ವಿಷಯಗಳನ್ನು ಹೇಗೆ ಕಲಿಯಬೇಕು ಎಂಬುದರ ಸರಳ ಓದುವ ತಂತ್ರಗಳನ್ನು ಅವರಿಗೆ ಹೇಳಿಕೊಡಿ.
ದೀರ್ಘಕಾಲ ನಿರಂತರವಾಗಿ ಅಧ್ಯಯನ ಮಾಡುವುದರಿಂದ ಆಯಾಸ ಮತ್ತು ಸೋಮಾರಿತನ ಉಂಟಾಗುತ್ತದೆ. ಮಕ್ಕಳು ಓದುವುದು ಎಷ್ಟು ಮುಖ್ಯವೋ ಮೈಂಡ್ ಫ್ರೆಶ್ ಗಾಗಿ ನಿಯಮಿತವಾಗಿ ವಿರಾಮ ತೆಗೆದುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಹಾಗಾಗಿ, ಮಕ್ಕಳಿಗೆ ಓದುವ ಮಧ್ಯದಲ್ಲಿ ವಿರಾಮ ತೆಗೆದುಕೊಳ್ಳಲು ಅವಕಾಶ ಕೊಡಿ.
ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರವೇ ಏಕಾಗ್ರತೆಯಿಂದ ಓದಲು ಸಾಧ್ಯ. ಹಾಗಾಗಿ ಅವರ ಡಯಟ್ ನಲ್ಲಿ ಸಾಕಷ್ಟು ಪೌಷ್ಟಿಕವಾದ ಆಹಾರವನ್ನು ನೀಡಿ. ಅಷ್ಟೇ ಅಲ್ಲದೆ, ನಿತ್ಯ ಸಾಕಷ್ಟು ನಿದ್ರೆ ಮಾಡುತ್ತಾರೆ ಎಂಬುದನ್ನೂ ಖಚಿತಪಡಿಸಿಕೊಳ್ಳಿ. ಆರೋಗ್ಯಕರ ದೇಹ ಮತ್ತು ಮನಸ್ಸು ಮಕ್ಕಳ ಏಕಾಗ್ರತೆಯನ್ನು ವೃದ್ಧಿಸುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.