ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಟುಲಿಪ್ ಗಾರ್ಡನ್!

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಬೇಸಿಗೆ ರಾಜಧಾನಿಯಲ್ಲಿ ಹೊಸ ಪ್ರವಾಸೋದ್ಯಮ ಅಧಿವೇಶನವನ್ನು ಪರಿಚಯಿಸುವ ಮೂಲಕ ಸಾರ್ವಜನಿಕರಿಗೆ ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವನ್ನು ತೆರೆಯಲಾಯಿತು.

  • Apr 01, 2019, 14:19 PM IST

ಈ ವರ್ಷ ಉದ್ಘಾಟನೆಯ ಮೊದಲ ದಿನವೇ ಟುಲಿಪ್ ಗಾರ್ಡನ್ ಸ್ಥಳೀಯರು ಮತ್ತು ಪ್ರವಾಸಿಗರನ್ನು ಆಕರ್ಷಿಸಿದೆ. "ಟುಲಿಪ್ ಉದ್ಯಾನವನ್ನು ಇಂದು ಸಾರ್ವಜನಿಕರಿಗೆ ತೆರೆಯಲಾಗಿದೆ ಮತ್ತು ನಾವು ಈ ವರ್ಷ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆಯಿದೆ" ಎಂದು ಪುಷ್ಪ ಕೃಷಿ ನಿರ್ದೇಶಕರಾದ ನಿರ್ದೇಶಕ ಅಬ್ದುಲ್ ಹಫಿಜ್ ಶಾ ಹೇಳಿದರು. ಈ ಮೊದಲು ಇದನ್ನು ಸೂರಜ್ ಬಾಗ್ ಎಂದು ಕರೆಯಲಾಗುತ್ತಿತ್ತು. 2008 ರಲ್ಲಿ 'ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಉದ್ಯಾನ' ನಿರ್ಮಿಸಲಾಯಿತು. ಆ ಸಮಯದಲ್ಲಿ ಗುಲಾಮ್ ನಬಿ ಆಜಾದ್ ರಾಜ್ಯದ ಮುಖ್ಯಮಂತ್ರಿ ಆಗಿದ್ದರು.

1 /4

ಹಿಮಾವೃತ ಜಬರೋವಾನ್ ವ್ಯಾಪ್ತಿಯ ತಪ್ಪಲಿನಲ್ಲಿ ಸುಮಾರು 30 ಹೆಕ್ಟೇರುಗಳಷ್ಟು ಪ್ರದೇಶದಲ್ಲಿ ಟುಲಿಪ್ ಉದ್ಯಾನವನ ನಿರ್ಮಾಣಗೊಂಡಿದೆ.

2 /4

51 ಬಗೆಯ ಟುಲಿಪ್ ಗಿಡಗಳನ್ನು ಈ ವರ್ಷ ನೆಡಲಾಗಿದೆ ಎಂದು ಶಾ ಹೇಳಿದರು.

3 /4

ಗಾರ್ಡನ್ ನಲ್ಲಿರುವ ಹಲವು ಬಗೆಯ ತುಲಿಪ್ ಹೂವುಗಳು ಬರುವ ಜನರ ಮನಸೂರೆಗೊಳ್ಳಲಿದ್ದು, ಮನಮೋಹಕವಾದ ಈ ಹೂವುಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ಪ್ರವಾಸಿಗರು ಉತ್ಸುಕರಾಗಿರುತ್ತಾರೆ.

4 /4

ಈ ಟುಲಿಪ್ ಗಾರ್ಡನ್ ಅನ್ನು ವೀಕ್ಷಿಸಲು ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ ಎನ್ನಲಾಗಿದೆ. (Pic Courtesy: ANI)