Assembly elections Results 2023: ಭಾನುವಾರ-ಸೋಮವಾರದ ಜನಾದೇಶದೊಂದಿಗೆ 2024ರ ಲೋಕಸಭಾ ಚುನಾವಣೆಯ ಸಂದೇಶವು ಸ್ಪಷ್ಟವಾಗುತ್ತದೆಯೇ ಅಥವಾ ಈ ಚುನಾವಣೆಯ ಚಿತ್ರಣವನ್ನು ಅರ್ಥಮಾಡಿಕೊಳ್ಳಲು ನಾವು ಸ್ವಲ್ಪ ಸಮಯ ಕಾಯಬೇಕೇ? ಕಾದು ನೋಡಬೇಕಿದೆ.
Assembly Election Results 2023: ಡಿಸೆಂಬರ್ 3ರಂದು ದೇಶದಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ತೆಲಂಗಾಣ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈ ಬಗ್ಗೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ಎದೆಬಡಿತ ಹೆಚ್ಚಾಗಿದೆ. ಈ ಚುನಾವಣಾ ಫಲಿತಾಂಶವನ್ನು 2024ರ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದು ಪರಿಗಣಿಸಲಾಗಿದೆ. ಹೀಗಾಗಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ? ಅನ್ನೋ ಕುತೂಹಲ ಮೂಡಿದೆ. ಮತದಾರ ಯಾರಿಗೆ ವಿಜಯಮಾಲೆ ಹಾಕುತ್ತಾನೆ ಅನ್ನೋದು ನಾಳೆ ತಿಳಿದುಬರಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಗುರುವಾರ ಹೊರಬಿದ್ದ 4 ರಾಜ್ಯಗಳ ಎಕ್ಸಿಟ್ ಪೋಲ್ ಭವಿಷ್ಯವಾಣಿ ನಂಬಿದರೆ, ಕಾಂಗ್ರೆಸ್ 2 ಮತ್ತು ಬಿಜೆಪಿ 2 ರಾಜ್ಯಗಳಲ್ಲಿ ಗೆಲುವು ಸಾಧಿಸುತ್ತವೆ ಎನ್ನಲಾಗಿದೆ. ಆದರೆ ಸದ್ಯ ಎಲ್ಲರೂ ಎಕ್ಸಿಟ್ ಪೋಲ್ನ ಫಲಿತಾಂಶವನ್ನು ನಿರಾಕರಿಸಿ, ಯಾವ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಅನ್ನೋದರ ಬಗ್ಗೆ ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ, ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಅವರು ರಾಜಸ್ಥಾನದಲ್ಲಿ ಅಧಿಕಾರಕ್ಕೆ ಮರಳಬಹುದು. ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆಯಂತೆ. ತೆಲಂಗಾಣದಲ್ಲೂ ಕಾಂಗ್ರೆಸ್ ಕೆಸಿಆರ್ ಅವರನ್ನು ಅಧಿಕಾರದಿಂದ ಕಿತ್ತೊಗೆಯುತ್ತಿರುವಂತೆ ಕಾಣುತ್ತಿದೆ. ಅಂದರೆ 2 ರಾಜ್ಯದಲ್ಲಿ ಬಿಜೆಪಿ ಮತ್ತು ಇನ್ನೆರಡು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಬಹುದು.
ಪ್ರತಿಯೊಂದು ಪಕ್ಷವೂ ತನ್ನದೇ ಆದ ಗೆಲುವಿನ ಹಕ್ಕು ಸಾಧಿಸುತ್ತಿದೆ. ಡಿಸೆಂಬರ್ 4ರಂದು ಮಿಜೋರಾಂನಲ್ಲಿ ಮತ ಎಣಿಕೆಗೂ ಮುನ್ನವೇ ಅಲ್ಲಿ ಕಾಂಗ್ರೆಸ್ ತನ್ನ ಗೆಲುವನ್ನು ಸಾರುತ್ತಿದೆ. ಪ್ರಮುಖ ರಾಜಕೀಯ ಪಕ್ಷಗಳು ಎಕ್ಸಿಟ್ ಪೋಲ್ಗಳಲ್ಲಿ ಎಲ್ಲಿ ಗೆಲುವು ಕಾಣುತ್ತಿವೆಯೋ ಅಲ್ಲಿ ಸಂಭ್ರಮಿಸುತ್ತಿವೆ. ಆದರೆ ಯಾರು ಗೆಲುವು ಸಾಧಿಸುತ್ತಾರೆ ಮತ್ತು ಯಾರು ಸೋಲುತ್ತಾರೆ? ಮತದಾರ ಯಾರ ಕೈಹಿಡಿಯುತ್ತಾನೆ ಅನ್ನೋದರ ಬಗ್ಗೆ ತೀವ್ರ ಕುತೂಹಲ ಮೂಡಿದೆ.
ಡಿಸೆಂಬರ್ 3ರ ಸೂಪರ್ ಸಂಡೆಗೆ ಜಯಭೇರಿ ಬಾರಿಸಲಿರುವ ಅಭ್ಯರ್ಥಿಗಳ ಭವಿಷ್ಯ ಛಿದ್ರವಾಗುವ ಭೀತಿಯೂ ಕಾಂಗ್ರೆಸ್ಗೆ ಇದೆ. ತೆಲಂಗಾಣದಲ್ಲಿ ಕೆಸಿಆರ್ಗೆ ಮಣ್ಣುಮುಕ್ಕಿಸಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ಸಾಧ್ಯತೆ ಇದೆ ಅಂತಾ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ವಿಭಜನೆಯ ಪ್ರಶ್ನೆಗೆ ದಿಗ್ವಿಜಯ್ ಸಿಂಗ್ ಉತ್ತರಿಸಿದ್ದು, ‘ಈಗ ಕಾಂಗ್ರೆಸ್ನಲ್ಲಿ ಸಿಂಧಿಯಾ ಇಲ್ಲ, ಆದ್ದರಿಂದ ಯಾರ ದ್ರೋಹಕ್ಕೆ ಹೆದರುವುದಿಲ್ಲ’ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಚುನಾವಣೆಯ ರಂಗು ರಂಗೇರುತ್ತಿದೆ. ಆದರೆ ಭಾನುವಾರ ಬರಲಿರುವ ಫಲಿತಾಂಶದಿಂದ 2024ರ ಚುನಾವಣೆಯ ಫಲಿತಾಂಶ ಸ್ಪಷ್ಟವಾಗುವುದೇ ಎಂಬ ದೊಡ್ಡ ಪ್ರಶ್ನೆಯೂ ಕಾಡುತ್ತಿದೆ. ಭಾನುವಾರ-ಸೋಮವಾರದ ಜನಾದೇಶದೊಂದಿಗೆ 2024ರ ಲೋಕಸಭಾ ಚುನಾವಣೆಯ ಸಂದೇಶವು ಸ್ಪಷ್ಟವಾಗುತ್ತದೆಯೇ ಅಥವಾ ಈ ಚುನಾವಣೆಯ ಚಿತ್ರಣವನ್ನು ಅರ್ಥಮಾಡಿಕೊಳ್ಳಲು ನಾವು ಸ್ವಲ್ಪ ಸಮಯ ಕಾಯಬೇಕೇ? ಕಾದು ನೋಡಬೇಕಿದೆ.