Astrology On Strength And Weakness - ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಾಮರ್ಥ್ಯದ ಜೊತೆಗೆ ದೌರ್ಬಲ್ಯಗಳು (Strengths And Weaknesses) ಇರುತ್ತವೆ. ಅಷ್ಟೇ ಅಲ್ಲ ಜನರು ಪರಸ್ಪರರ ನ್ಯೂನತೆಗಳು ಮತ್ತು ಗುಣಗಳನ್ನು ಹುಡುಕುತ್ತಲೇ ಇರುತ್ತಾರೆ. ಆದರೆ ಕೆಲವು ಜನರು ನ್ಯೂನತೆಗಳನ್ನು ಕಂಡುಕೊಳ್ಳಲು ಮತ್ತು ಅವುಗಳ ಬಗ್ಗೆ ದೂರು (Complaint) ನೀಡಲು ಒಂದು ಕ್ಷಣ ಕೂಡ ಹಿಂದೆ ಮುಂದೆ ಯೋಚಿಸುವುದಿಲ್ಲ
Astrology On Strength And Weakness - ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಾಮರ್ಥ್ಯದ ಜೊತೆಗೆ ದೌರ್ಬಲ್ಯಗಳು (Strengths And Weaknesses) ಇರುತ್ತವೆ. ಅಷ್ಟೇ ಅಲ್ಲ ಜನರು ಪರಸ್ಪರರ ನ್ಯೂನತೆಗಳು ಮತ್ತು ಗುಣಗಳನ್ನು ಹುಡುಕುತ್ತಲೇ ಇರುತ್ತಾರೆ. ಆದರೆ ಕೆಲವು ಜನರು ನ್ಯೂನತೆಗಳನ್ನು ಕಂಡುಕೊಳ್ಳಲು ಮತ್ತು ಅವುಗಳ ಬಗ್ಗೆ ದೂರು (Complaint) ನೀಡಲು ಒಂದು ಕ್ಷಣ ಕೂಡ ಹಿಂದೆ ಮುಂದೆ ಯೋಚಿಸುವುದಿಲ್ಲ. ಪ್ರತಿ ಸಂದರ್ಭ- ಸನ್ನಿವೇಶಗಳಲ್ಲಿ ಅವರು ನ್ಯೂನತೆಗಳನ್ನು ಕಂಡೆ ಕಾಣುತ್ತಾರೆ. ಇಂತಹ ಕೆಲ ರಾಶಿಚಕ್ರದ (Zodiac Sign) ಜಾತಕದವರ ಕುರಿತು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ರಾಶಿಯ ಜಾತಕದ ಜನರು ಯಾವಾಗಲು ದೂರುವುದರಲ್ಲಿ ಮುಂದಿರುತ್ತಾರೆ ಹಾಗೂ ಪ್ರತಿ ಸಂದರ್ಭ - ಸನ್ನಿವೇಶಗಳಲ್ಲಿ ದೋಷವನ್ನು (Faults) ಕಂಡುಕೊಳ್ಳುತ್ತಾರೆ.
ಇದನ್ನೂ ಓದಿ-Guru Rashi Parivartan: ದೇವಗುರು ಬೃಹಸ್ಪತಿ ರಾಶಿ ಬದಲಾವಣೆ, ಇಂದಿನಿಂದ ಈ 6 ರಾಶಿಗಳಿಗೆ ಒಳ್ಳೆಯ ದಿನಗಳು ಆರಂಭ
(ಸೂಚನೆ - ಈ ಲೇಖನದಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ದೃಢಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಕರ್ಕ ರಾಶಿ - ಕರ್ಕ ರಾಶಿಯ ಜಾತಕದವರಿಗೆ ತಮ್ಮ ಕೋಪ ಹಾಗೂ ಭಾವನೆಗಳನ್ನು ತಡೆಹಿಡಿಯಲಾಗುವುದಿಲ್ಲ. ಇದೆ ರೀತಿ ವಸ್ತುಗಳ, ಸ್ಥಿತಿಗಳ ಹಾಗೂ ಜನರ ನ್ಯೂನ್ಯತೆಯನ್ನು ತಕ್ಷಣವೇ ಹೇಳುತ್ತಾರೆ. ಯಾವ ಸಂಗತಿ ಇವರಿಗೆ ಇಷ್ಟವಾಗುವುದಿಲ್ಲವೋ, ಇವರ ತಕ್ಷಣ ಆ ಕುರಿತು ದೂರು ನೀಡುತ್ತಾರೆ.
2. ಕನ್ಯಾ ರಾಶಿ - ಇವರಿಗೆ ಪ್ರತಿಯೊಂದು ಕೆಲಸದಲ್ಲಿ ಪರ್ಫೆಕ್ಷನ್ ಬೇಕಾಗಿರುತ್ತದೆ. ಆದರೆ, ಇವರಿಗೆ ಎಲ್ಲಿಯಾದರೂ ತಪ್ಪು ಅಥವಾ ಕೊರತೆ ಕಂಡುಬಂದರೆ, ತಕ್ಷಣ ಆ ಕುರಿತು ದೂರನ್ನು ದಾಖಲಿಸುತ್ತಾರೆ.
3. ವೃಶ್ಚಿಕ ರಾಶಿ - ಇವರಿಗೆ ಅವ್ಯವಸ್ಥೆ, ಹರಡಿ ಬಿದ್ದಿರುವ ವಸ್ತುಗಳನ್ನು ಕಿಂಚಿತ್ತು ಸಹಿಸುವುದಿಲ್ಲ. ಯಾವುದೇ ಒಂದು ಸಂಗತಿ ಇವರ ಮನಸ್ಸಿಗೆ ವಿರುದ್ಧವಾಗಿದ್ದರೆ ಅಥವಾ ಸರಿಯಾಗಿಲ್ಲ ಎಂದಾದರೆ. ಆ ಕುರಿತು ದೂರು ದಾಖಲಿಸಲು ಇವರು ಒಂದು ಕ್ಷಣ ಕೂಡ ಹಿಂದೆ ಮುಂದೆ ನೋಡುವುದಿಲ್ಲ.
4. ಧನು ರಾಶಿ - ಈ ರಾಶಿಯ ಜನರು ತುಂಬಾ ಪ್ರಾಮಾಣಿಕರಾಗಿರುತ್ತಾರೆ ಹಾಗೂ ತಮ್ಮ ಅನಿಸಿಕೆಗಳನ್ನು ನೇರವಾಗಿ ಹೇಳುತ್ತಾರೆ. ಯಾವುದೇ ಒಂದು ತಪ್ಪು ಕಾರ್ಯ ನಡೆಯುತ್ತಿದ್ದರೆ ಅದನ್ನು ಇವರು ಸಹಿಸುವುದಿಲ್ಲ ಮತ್ತು ತಕ್ಷಣ ಆ ಕುರಿತು ತಮ್ಮ ಆಕ್ಷೇಪಣೆಯನ್ನು ದಾಖಲಿಸುತ್ತಾರೆ.
5. ಕುಂಭ ರಾಶಿ - ಈ ರಾಶಿಯ ಜನರು ತುಂಬಾ ಬುದ್ಧಿಶಾಲಿಗಳಾಗಿರುತ್ತಾರೆ ಹಾಗೂ ಪ್ರತಿಯೊಂದು ಸಂಗತಿಗಳ ಮೇಲೆ ಇವರು ಸೂಕ್ಷ್ಮವಾಗಿ ಕಣ್ಣಿಡುತ್ತಾರೆ. ಸಣ್ಣ ತಪ್ಪು ಕೂಡ ಇವರ ದೃಷ್ಟಿಯಿಂದ ಬಚಾವಾಗಲು ಸಾಧ್ಯವಿಲ್ಲ ಹಾಗೂ ತಪ್ಪು ಕಾಣುತ್ತಲೇ ಆರೆಡೆಗೆ ಎಲ್ಲರ ಗಮನ ಸೆಳೆಯುತ್ತಾರೆ.