ATM: ಮಿಷನ್ ಒಂದು ಲಾಭ ಹಲವು, ಕ್ಯಾಶ್ ವಿತ್ ಡ್ರಾ ಹೊರತಾಗಿ ಸಿಗಲಿದೆ ಈ 5 ಪ್ರಯೋಜನ

            

ಸಾಮಾನ್ಯವಾಗಿ ಎಟಿಎಂ ಎಂದರೆ ಎಲ್ಲರಿಗೂ ಮೊದಲಿಗೆ ನೆನಪಾಗುವುದು ಹಣ ವಿತ್ ಡ್ರಾ ಮಾಡುವುದು. ಬಹುತೇಕ ಮಂದಿ ಎಟಿಎಂ ಅನ್ನು ನಗದು ಹಿಂಪಡೆಯಲು ಮಾತ್ರ ಬಳಸುತ್ತಾರೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ನಾವು ಎಟಿಎಂಗಳನ್ನು ಹಣ ಹಿಂಪಡೆಯಲು ಮಾತ್ರವಲ್ಲದೆ ನಗದು ಜಮಾ ಮಾಡಲು, ಮೊಬೈಲ್ ರೀಚಾರ್ಜ್ ಮಾಡಲು, ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ಮತ್ತು ಸಾಲಗಳನ್ನು ತೆಗೆದುಕೊಳ್ಳಲು ಸಹ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ? ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕ್‌ಗಳು ಗ್ರಾಹಕರಿಗೆ ತಮ್ಮ ಎಟಿಎಂನಿಂದ ವಿವಿಧ ಸೌಲಭ್ಯಗಳನ್ನು ನೀಡುತ್ತಿವೆ. ಎಟಿಎಂನಿಂದ ಪಡೆಯಬಹುದಾದ ಅಂತಹ 5 ಸೇವೆಗಳ ಬಗ್ಗೆ ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕುಗಳ ಎಟಿಎಂಗಳಲ್ಲಿ ನಗದು ಠೇವಣಿ (Cash Deposit) ಸೌಲಭ್ಯ ಲಭ್ಯವಿದೆ. ನೀವು ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡುವುದರ ಜೊತೆಗೆ ಕ್ಯಾಶ್ ಡೆಪಾಸಿಟ್ ಕೂಡ ಮಾಡಬಹುದು. ನೀವು ಎಟಿಎಂ ಯಂತ್ರದಲ್ಲಿ ಹಣ ಅಥವಾ ಚೆಕ್ ಮೂಲಕ ಹಣ ಜಮಾ ಮಾಡಬಹುದು.

2 /5

ನೀವು ಎಟಿಎಂ ಮೂಲಕ ಹಣವನ್ನು ವರ್ಗಾಯಿಸಬಹುದು. ಎಸ್‌ಬಿಐ ಎಟಿಎಮ್‌ಗಳಲ್ಲಿ ಒಂದು ಎಸ್‌ಬಿಐ ಡೆಬಿಟ್ ಕಾರ್ಡ್‌ನಿಂದ (Debit Card) ಇನ್ನೊಂದು ಎಸ್‌ಬಿಐ ಡೆಬಿಟ್ ಕಾರ್ಡ್‌ಗೆ ದಿನಕ್ಕೆ ರೂ 40,000 ವರೆಗೆ ಹಣ ವರ್ಗಾವಣೆಯನ್ನು ಮಾಡಬಹುದು.  

3 /5

ಎಟಿಎಂಗೆ ಭೇಟಿ ನೀಡುವ ಮೂಲಕ ನೀವು ವಿದ್ಯುತ್ ಬಿಲ್, ನೀರಿನ ಬಿಲ್ ನಂತಹ ಯುಟಿಲಿಟಿ ಬಿಲ್ ಗಳನ್ನು ಪಾವತಿಸಬಹುದು. ಎಸ್‌ಬಿಐ (SBI) ಸೇರಿದಂತೆ ಹಲವು ಬ್ಯಾಂಕುಗಳ ಎಟಿಎಂಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಎಟಿಎಂನಿಂದಲೂ ಪಾವತಿಸಬಹುದು. ಇದಕ್ಕಾಗಿ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ತಿಳಿದುಕೊಳ್ಳಬೇಕು. ಇದನ್ನೂ ಓದಿ- LPG Cylinder Booking: ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಲು ಈ ಸುಲಭ ಮಾರ್ಗಗಳನ್ನು ಅನುಸರಿಸಿ

4 /5

ನೀವು ಅಂತರ್ಜಾಲದ ಸಮಸ್ಯೆ ಇರುವ ಸ್ಥಳದಲ್ಲಿದ್ದರೆ, ಎಟಿಎಂಗೆ ಹೋಗುವ ಮೂಲಕ ನೀವು ಮೊಬೈಲ್ ರೀಚಾರ್ಜ್ (Mobile Recharge) ಮಾಡಬಹುದು. ಎಸ್‌ಬಿಐ ಸೇರಿದಂತೆ ಇತರ ಹಲವು ಬ್ಯಾಂಕುಗಳ ಎಟಿಎಂಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಇದನ್ನೂ ಓದಿ- Aadhaar Card Update: ಈಗ ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೂ ಚಿಂತಿಸಬೇಕಿಲ್ಲ

5 /5

ಎಟಿಎಂನಿಂದ ಸಾಲಕ್ಕಾಗಿ ಕೂಡ ಅರ್ಜಿ ಸಲ್ಲಿಸಬಹುದು. ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂಗಳಲ್ಲಿ ಈ ಸೌಲಭ್ಯ ಲಭ್ಯವಿದೆ.