Attention!: ಇದೇ ನೋಡಿ ವಿಶ್ವದ ಅತ್ಯಂತ ಅಪಾಯಕಾರಿ ಜೇಡ, 15 ನಿಮಿಷದಲ್ಲೇ ಜೀವ ತೆಗೆಯುತ್ತೆ..!

ವಿಶ್ವದ ಅತ್ಯಂತ ವಿಷಕಾರಿ ಜೇಡವಾಗಿರುವ ಇದು ವ್ಯಕ್ತಿಗೆ ಕಚ್ಚಿದರೆ ಆತ ಕೇವಲ 15 ನಿಮಿಷಗಳಲ್ಲಿ ಸಾವನ್ನಪ್ಪುತ್ತಾನಂತೆ.

ಹಾವು, ಚೇಳುಗಳಂತಹ ವಿಷಕಾರಿ ಜೀವಿಗಳ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ವಿಷಕಾರಿ ಜೇಡದ ಬಗ್ಗೆ. ಹೌದು, ಇದು ವಿಶ್ವದ ಅತ್ಯಂತ ಅಪಾಯಕಾರಿ ಜೇಡ. ಇದು ವ್ಯಕ್ತಿಗೆ ಕಚ್ಚಿದರೆ ಆತ ಕೇವಲ 15 ನಿಮಿಷಗಳಲ್ಲಿ ಸಾಯಬಹುದು. ಇದರ ಬಗ್ಗೆ ಮತ್ತಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ ನಲ್ಲಿ ಅತ್ಯಂತ ದೈತ್ಯ ಫನಲ್ ವೆಬ್ ಸ್ಪೈಡರ್(Giant Funnel Web Spider) ಪತ್ತೆಯಾಗಿದೆ. ಇದನ್ನು ಮೆಗಾ ಸ್ಪೈಡರ್ ಎಂದು ಕರೆಯಲಾಗುತ್ತದೆ. ಈ ಜೇಡವನ್ನು ಪತ್ತೆ ಮಾಡಿದ ವ್ಯಕ್ತಿ ಅದನ್ನು ಹಿಡಿದು ನ್ಯೂ ಸೌತ್ ವೇಲ್ಸ್‌ ನ ಆಸ್ಟ್ರೇಲಿಯನ್ ರೆಪ್ಟೈಲ್ ಪಾರ್ಕ್‌ಗೆ ನೀಡಿದ್ದಾರೆ.

2 /5

ಈ ಜೇಡವನ್ನು ನೋಡಿದ ತಜ್ಞರು ಕೂಡ ಆಶ್ಚರ್ಯಚಕಿತರಾಗಿದ್ದಾರೆ. ಈ ಜೇಡವು 5 ಇಂಚುಗಳಷ್ಟು ದೊಡ್ಡದಾಗಿದೆ. ಈ ಜೇಡದ ಕೋರೆಹಲ್ಲುಗಳು 0.8 ಇಂಚುಗಳಷ್ಟು ಉದ್ದವಾಗಿದ್ದು, ಇದು ಮನುಷ್ಯನ ಉಗುರುಗಳಂತೆ ಚುಚ್ಚುತ್ತದೆ ಎಂದು ಆಸ್ಟ್ರೇಲಿಯನ್ ರೆಪ್ಟೈಲ್ ಪಾರ್ಕ್ ಹೇಳಿಕೆಯಲ್ಲಿ ತಿಳಿಸಿದೆ.

3 /5

ಈ ಜೇಡಕ್ಕೆ ಮೆಗಾ ಸ್ಪೈಡರ್ ಎಂದು ಹೆಸರಿಡಲಾಗಿದೆ. ಈ ಜೇಡವು ತನ್ನ ವಿಷವನ್ನು ಮಾನವನ ದೇಹದಲ್ಲಿ ಬಿಟ್ಟರೆ ಆ ವ್ಯಕ್ತಿ 15 ನಿಮಿಷಗಳಲ್ಲಿ ಸಾಯಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

4 /5

ಪ್ರಸ್ತುತ ಈ ಜೇಡವನ್ನು ಅದರ ವಿಷವನ್ನು ಸಂಗ್ರಹಿಸಲು ಬಳಸಲಾಗುತ್ತಿದೆ. ಇದರಿಂದ ಔಷಧವನ್ನು ತಯಾರಿಸಬಹುದು. ಈ ಜೇಡದ ವಿಷಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೆಲೆಯಿದೆಯಂತೆ.

5 /5

ವರದಿಗಳ ಪ್ರಕಾರ ಈ ಜೇಡದ ಎಲ್ಲಿಂದ ಬಂತು? ಇದರ ಮೂಲ ಯಾವುದು?  ಎಂದು ವಿಜ್ಞಾನಿಗಳು ಅಧ್ಯಯನದಲ್ಲಿ ತೊಡಗಿದ್ದಾರೆ. ‘ಈ ಜೇಡದ ಮೂಲದ ಬಗ್ಗೆ ನಾವು ಕುತೂಹಲ ಹೊಂದಿದ್ದೇವೆ. ಒಂದು ವೇಳೆ ಇದರ ಮೂಲವೇನಾದರೂ ಪತ್ತೆಯಾದರೆ ಇನ್ನೂ ಹೆಚ್ಚಿನ ದೈತ್ಯ ಜೇಡಗಳನ್ನು ಕಂಡುಹಿಡಿಯಲು ನಮಗೆ ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದೇವೆ’ ಎಂದು ಆಸ್ಟ್ರೇಲಿಯನ್ ರೆಪ್ಟೈಲ್ ಪಾರ್ಕ್ ನ  ಶಿಕ್ಷಣ ಅಧಿಕಾರಿ ಮೈಕೆಲ್ ಟೇಟ್ ಹೇಳಿದ್ದಾರೆ.