ಬೇಸಿಗೆಯಲ್ಲಿ ಈ ಹಣ್ಣು, ತರಕಾರಿ ಖರೀದಿಸುವ ವೇಳೆ ಆಗದಿರಲಿ ಇಂಥಹ ತಪ್ಪು ..!


ಕಲ್ಲಂಗಡಿ,  ಖರ್ಬೂಜ ಮುಂತಾದ ಕೆಲವು ಹಣ್ಣುಗಳು ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿರುತ್ತದೆ.  ಹಾಗೆಯೇ ಸೌತೆಕಾಯಿಯಂಥಹ ತರಕಾರಿಗಳು ಕೂಡಾ..  ಆದರೆ ಅವುಗಳನ್ನು ಕೊಂಡುಕೊಳ್ಳುವಲ್ಲಿ ಮಾಡುವ ತಪ್ಪಿನಿಂದ ಅವುಗಳನ್ನು ತಿಂದರೂ  ದೇಹಕ್ಕೆ ಪ್ರಯೋಜನವಾಗುವುದಿಲ್ಲ. 
 

ಬೆಂಗಳೂರು : ಬೇಸಿಗೆಯಲ್ಲಿ ಈ 5 ವಸ್ತುಗಳನ್ನು ಖರೀದಿಸುವಾಗ ಜನರು ಸಾಮಾನ್ಯವಾಗಿ ತಪ್ಪುಗಳನ್ನು ಮಾಡುತ್ತಾರೆ. ಬೇಸಿಗೆಯಲ್ಲಿ, ಸಾಮಾನ್ಯವಾಗಿ ತಂಪಾದ ಮತ್ತು ನೀರಿನಂಶವಿರುವ ವಸ್ತುಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಇದು ದೇಹದಲ್ಲಿ ನೀರಿನ ಕೊರತೆಯಾಗದಂತೆ ತಡೆಯುತ್ತದೆ. ಮಾತ್ರವಲ್ಲ,  ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಮುಖದಲ್ಲಿ ಹೊಳಪನ್ನು ಕಾಪಾಡಿಕೊಳ್ಳುತ್ತದೆ. ಆದರೆ ಬೇಸಿಗೆಯಲ್ಲಿ ಸಿಗುವ ಇವುಗಳನ್ನು ಕೊಳ್ಳುವುದರಲ್ಲಿ ನಾವು ಅನೇಕ ಬಾರಿ ತಪ್ಪು ಮಾಡುತ್ತೇವೆ. ಇದರಿಂದಾಗಿ ಈ ವಸ್ತುಗಳನ್ನು ತಿಂದರೂ ಪ್ರಯೋಜನವಾಗುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಸೌತೆಕಾಯಿಯನ್ನು ಖರೀದಿಸುವಾಗ ನಮ್ಮಲ್ಲಿ ಹೆಚ್ಚಿನವರು ತಪ್ಪು ಮಾಡುತ್ತಾರೆ. ದೊಡ್ಡದಾದ, ದಪ್ಪಗಿರುವ ಸೌತೆಕಾಯಿಯನ್ನು ಖರೀದಿಸುತ್ತೇವೆ.  ಆದರೆ ಹೀಗೆ ಮಾಡಬಾರದು. ತೆಳುವಾದ, ಹಸಿರಾಗಿರುವ ನೀರಿನಿಂದ ಸಮೃದ್ಧವಾಗಿರುವ ತಾಜಾ ಸೌತೆಕಾಯಿಗಳನ್ನು ಖರೀದಿಸಬೇಕು. ಇದಲ್ಲದೆ, ನಾವು ದೇಸಿ ಸೌತೆಕಾಯಿಯನ್ನು ಖರೀದಿಸಲು ಪ್ರಯತ್ನಿಸಬೇಕು. ದಪ್ಪ ಸೌತೆಕಾಯಿಗಳನ್ನು ಖರೀದಿಸಿದರೆ, ಅದರಲ್ಲಿ ಹೆಚ್ಚು ಬೀಜಗಳಿರುತ್ತವೆ. ಹಳದಿ ಸೌತೆಕಾಯಿಯಲ್ಲಿ ನೀರಿನ ಪ್ರಮಾಣವು ಕಡಿಮೆ ಇರುತ್ತದೆ.

2 /4

ಕಲ್ಲಂಗಡಿ ಹಣ್ಣಾದಾಗ ಗಾಢ ಬಣ್ಣವನ್ನು ಹೊಂದಿರುತ್ತದೆ. ಆದರೆ ಕಚ್ಚಾ ಕಲ್ಲಂಗಡಿ ಹೊಳೆಯುವ ಮೇಲ್ಮೈ ಮತ್ತು ಹಗುರವಾದ ಬಣ್ಣವನ್ನು ಹೊಂದಿರುತ್ತದೆ. ಇನ್ನು ಕಲ್ಲಂಗಡಿ ಖರೀದಿಸುವಾಗ ಯಾವುದೇ ರಂಧ್ರ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕಲ್ಲಂಗಡಿ ಗಾಢ ಬಣ್ಣವನ್ನು ಹೊಂದಿದ್ದು, ಹಗುರವಾಗಿದ್ದರೆ ಅದು ತಿನ್ನಲು ಬಲು ರುಚಿಯಾಗಿರುತ್ತದೆ. 

3 /4

ಖರ್ಬೂಜ   ಖರೀದಿಸಲು ಉತ್ತಮ ಮಾರ್ಗವೆಂದರೆ  ಮೊದಲನೆಯದಾಗಿ, ಖರ್ಬೂಜ  ಹಣ್ಣಿನ ಮೇಲಿನ ಭಾಗವನ್ನು ಒತ್ತಿ ನೋಡಿ. ಹೀಗೆ ಮಾಡುವಾಗ ಖರ್ಬೂಜ ಹಣ್ಣಾಗಿದೆಯೇ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.  ಈ ಹಣ್ಣಿನ ಮೇಲೆ ಹೆಚ್ಚು ರಂಧ್ರಗಳಿದ್ದರೆ, ಅಥವಾ ಒತ್ತಿ ನೋಡುವಾಗ ಕೊಳೆತಂತೆ ಅನಿಸಿದರೆ  ಅದನ್ನು ಖರೀದಿಸಬೇಡಿ.   

4 /4

ಜಾಮೂನ್  ಅಥವಾ ನೇರಳೆ ಹಣ್ಣನ್ನು  ಮಾರಾಟ ಮಾಡುವವರು ಅದನ್ನು ನೀರಿನಿಂದ ತೇವಗೊಳಿಸುವುದನ್ನು ನೋಡಿರಬೇಕು. ಅಂತಹ ಜಾಮೂನ್ ಗಳನ್ನೂ ಯಾವುದೇ ಕಾರಣಕ್ಕೂ ಖರೀದಿಸಬೇಡಿ.   ಇದು ದೀರ್ಘಕಾಲದವರೆಗೆ ನೀರಿನಲ್ಲಿರುವುದರಿಂದ ಅವುಗಳ ಸಾರಗಳು ಸಹ ಹೊರಬರುತ್ತವೆ.