ಎದೆಯಲ್ಲಿ ಸಂಗ್ರಹವಾದ ಕಫದ ಸಮಸ್ಯೆಯನ್ನು ಕಡಿಮೆ ಮಾಡಲು,ಉಗುರು ಬೆಚ್ಚಗಿನ ನೀರಿಗೆ ಉಪ್ಪನ್ನು ಬೆರೆಸಿ ಕುಡಿಯಬಹುದು.ಇದು ಕಫವನ್ನು ಕರಗಿಸಿ ಬಾಯಿಯಿಂದ ಹೊರಹಾಕುವುದಕ್ಕೆ ಅನುವು ಮಾಡಿಕೊಡುತ್ತದೆ.1 ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಉಪ್ಪು ಮಿಶ್ರಣ ಮಾಡಿ ಸೇವಿಸುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಸ್ಟೀಮ್ ತೆಗೆದುಕೊಳ್ಳುವುದರಿಂದ ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ತೆಗೆದುಹಾಕಬಹುದು. ಸ್ಟೀಮ್ ತೆಗೆದುಕೊಳ್ಳುವಾಗ ಪುದೀನಾ ಎಣ್ಣೆಯನ್ನು ಬೆರೆಸಿದೆ ಕಫ ಬೇಗನೆ ಕರಗುತ್ತದೆ.
ಶುಂಠಿ ಚಹಾದ ಸೇವನೆಯಿಂದ ಎದೆಯಲ್ಲಿ ಸಂಗ್ರಹವಾದ ಕಫವನ್ನು ತೆಗೆದುಹಾಕಬಹುದು. ಇದು ಅನೇಕ ರೀತಿಯ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು,ಕಫ ಕರಗಿಸಲು ಸಹಾಯ ಮಾಡುತ್ತದೆ.
ಕಫದ ಸಮಸ್ಯೆ ಬಾಧಿಸುತ್ತಿದ್ದರೆ ನೀಲಗಿರಿ ಎಣ್ಣೆಯನ್ನು ಬಳಸಬಹುದು. ನೀಲಗಿರಿ ಎಣ್ಣೆಯಲ್ಲಿರುವ ಗುಣಲಕ್ಷಣಗಳು ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ತೆಗೆದುಹಾಕುವುದಕ್ಕೆ ಸಹಾಯ ಮಾಡುತ್ತದೆ. ಸ್ಟೀಮ್ ತೆಗೆದುಕೊಳ್ಳುವ ನೀರಿಗೆ ಈ ಎಣ್ಣೆಯನ್ನು ಸೇರಿಸಬಹುದು ಅಥವಾ ಮೂಗು ಮತ್ತು ಎದೆಗೆ ಇದನ್ನು ಹಚ್ಚಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ZEE NEWS ಅದನ್ನು ಖಚಿತಪಡಿಸುವುದಿಲ್ಲ.