Best Stocks to Buy: 1 ವರ್ಷದಲ್ಲಿ ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡಲಿರುವ 5 ಷೇರುಗಳು!

ಮುಂದಿನ 1 ವರ್ಷಗಳಲ್ಲಿ ಹೂಡಿಕೆದಾರರಿಗೆ ಬಂಪರ್ ಲಾಭ ನೀಡುವ 5 ಷೇರುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಇವು Fundamentally Strong ಷೇರುಗಳಾಗಿದ್ದು, ಈಗಿನಿಂದಲೇ ಹೂಡಿಕೆ ಮಾಡಬಹುದಾಗಿದೆ.

ಖರೀದಿಸಬಹುದಾದ ಉತ್ತಮ ಷೇರುಗಳು: ಫೆಡ್ ರಿಸರ್ವ್ ಬಡ್ಡಿದರವನ್ನು ಹೆಚ್ಚಿಸಿದ ನಂತರ ವಿಶ್ವದಾದ್ಯಂತ ಷೇರು ಮಾರುಕಟ್ಟೆಯಲ್ಲಿ ಒತ್ತಡ ಕಂಡುಬರುತ್ತಿದೆ. ಕಳೆದ ವಾರದ ವಹಿವಾಟಿನ ಏರಿಳಿತದ ನಂತರ ಸೋಮವಾರ ಆರಂಭವಾದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆ ಕುಸಿತ ಕಂಡಿತ್ತು. ಇಂದಿನ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೊಂಚ ಏರಿಕೆ ಕಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದ ಅಂಕಿಅಂಶಗಳನ್ನು ಕಂಪನಿಗಳು ಬಿಡುಗಡೆ ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ದೀರ್ಘಾವಧಿಯ ದೃಷ್ಟಿಕೋನದಿಂದ ಗುಣಮಟ್ಟದ ಸ್ಟಾಕ್‍ಗಳಲ್ಲಿ ಹಣ ಗಳಿಸಲು ಅವಕಾಶವಿದೆ. ದೀರ್ಘಾವಧಿಯ ದೃಷ್ಟಿಕೋನದಿಂದ ಕೆಲವು ಷೇರುಗಳಲ್ಲಿ ಹೂಡಿಕೆ ಮಾಡಲು ಬ್ರೋಕರೇಜ್ ಹೌಸ್‌ಗಳು ಹೂಡಿಕೆದಾರರಿಗೆ ಸಲಹೆ ನೀಡಿವೆ. ಈಗಾಗಲೇ ಹೂಡಿಕೆದಾರರಿಗೆ ಬಂಪರ್ ಲಾಭ ನೀಡಿರುವ 5 ಷೇರುಗಳು ಮುಂದಿನ 12 ತಿಂಗಳಲ್ಲಿ ಶೇ.49ವರೆಗೆ ಬಂಪರ್ ರಿಟರ್ನ್ಸ್ ನೀಡುವ ಸಾಧ‍್ಯತೆ ಇದೆ.

2 /5

ಬ್ರೋಕರೇಜ್ ಸಂಸ್ಥೆ ನುವಾಮಾ ವೆಲ್ತ್ HPCL ಷೇರುಗಳ ಖರೀದಿಸಲು ಸಲಹೆ ನೀಡಿದೆ. ಇದರ ಟಾರ್ಗೆಟ್ ಪ್ರೈಸ್ 302 ರೂ. ನೀಡಲಾಗಿದೆ. ನವೆಂಬರ್ 7ರಂದು ಈ ಷೇರಿನ ಬೆಲೆ 209.80 ರೂ.ನಂತೆ ವಹಿವಾಟು ನಡೆಸುತ್ತಿದೆ. ಇದರಲ್ಲಿ ಹೂಡಿಕೆ ಮಾಡಿದ್ರೆ ಮುಂದಿನ ದಿನಗಳಲ್ಲಿ ಪ್ರತಿ ಷೇರಿಗೆ 99 ರೂ. ಅಥವಾ ಸುಮಾರು ಶೇ.49ರಷ್ಟು ಲಾಭ ಪಡೆಯಬಹುದು ಎಂದು ಹೇಳಲಾಗಿದೆ.

3 /5

ನುವಾಮಾ ವೆಲ್ತ್ ಸಂಸ್ಥೆಯು Macrotech Developers ಷೇರುಗಳನ್ನು ಖರೀದಿಸಲು ಸಲಹೆ ನೀಡಿದೆ. ಈ ಷೇರಿನ ಟಾರ್ಗೆಟ್ ಪ್ರೈಸ್ 1,395 ರೂ. ನೀಡಲಾಗಿದೆ. ನವೆಂಬರ್ 7ರಂದು ಈ ಷೇರಿನ ಬೆಲೆ 926.65 ರೂ. ಇತ್ತು. ಹೂಡಿಕೆದಾರರು ಮುಂಬರುವ ಸಮಯದಲ್ಲಿ ಈ ಷೇರಿನ ಮೇಲೆ 443 ರೂ. ಅಥವಾ ಶೇ.46ರಷ್ಟು ಲಾಭ ಪಡೆಯಬಹುದು.

4 /5

Kansai Nerolac ಷೇರುಗಳ ಮೇಲೆ ಹಣ ಹೂಡಿಕೆ ಮಾಡಲು ಬ್ರೋಕರೇಜ್ ಸಂಸ್ಥೆ ಆನಂದ್ರಾತಿ ಸಲಹೆ ನೀಡಿದೆ. ಈ ಷೇರಿನ ಟಾರ್ಗೆಟ್ ಬೆಲೆಯನ್ನು 610 ರೂ.ಗೆ ನಿಗದಿಪಡಿಸಲಾಗಿದೆ. ನ.7ರಂದು ಈ ಸ್ಟಾಕ್ 455.45 ರೂ.ನಂತೆ ವಹಿವಾಟು ನಡೆಸಿದೆ. ಹೂಡಿಕೆದಾರರು ಮುಂಬರುವ ದಿನಗಳಲ್ಲಿ ಇದರ ಪ್ರತಿ ಷೇರಿಗೆ 162 ರೂ. ಅಥವಾ ಶೇ.36ರಷ್ಟು ಲಾಭ ಪಡೆಯುವ ಸಾಧ್ಯತೆಯಿದೆ.

5 /5

ಬ್ರೋಕರೇಜ್ ಸಂಸ್ಥೆ ಆನಂದ್ರಾತಿ Dalmia Bharat ಷೇರುಗಳ ಖರೀದಿಸಲು ಸಲಹೆಯನ್ನು ನೀಡಿದೆ. ನ.7ರಂದು ಈ ಷೇರು 1,763.80 ರೂ.ನಂತೆ ವಹಿವಾಟು ನಡೆಸುತ್ತಿತ್ತು. ಈ ಸ್ಟಾಕ್‌ನ ಟಾರ್ಗೆಟ್ ಪ್ರೈಸ್ 2160 ರೂ. ನೀಡಲಾಗಿದೆ. ಹೀಗಾಗಿ ಇದೀಗ ಹೂಡಿಕೆ ಮಾಡುವವರು ಪ್ರತಿ ಷೇರಿಗೆ 418 ರೂ. ಅಥವಾ ಶೇ.24ರವರೆಗೆ ಲಾಭ ಪಡೆಯುವ ಸಾಧ್ಯತೆಯಿದೆ.