Bharata Hunnime 2024 Rashi Bhavishya: ಈ ಬಾರಿಯ ಮಾಘ ಮಾಸದ ಹುಣ್ಣಿಮೆಯ ದಿನ ಅತ್ಯಂತ ಅಪರೂಪದ ಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಗಳ ಜನರ ಮೇಲೆ ಅದೃಷ್ಟ ಲಕ್ಷ್ಮಿಯ ಭಾರಿ ಕೃಪೆ ಇರಲಿದ್ದು, ಈ ಜನರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ (Spiritual News In Kannada)
Magha Purnima 2024 Horoscope: ವೈದಿಕ ಪಂಚಾಂಗದ ಪ್ರಕಾರ ಮಾಘ ಮಾಸದ ಶುಕ್ಲ ಹುಣ್ಣಿಮೆ ಈ ಬಾರಿ ಫೆಬ್ರುವರಿ 24, 2024 ರಂದು ಬೀಳುತ್ತಿದೆ. ಹಿಂದೂ ಧರ್ಮಶಾಸ್ತ್ರಗಳಲ್ಲಿ ಈ ಹುಣ್ಣಿಮೆಗೆ ವಿಶೇಷ ಮಹತ್ವವಿದ್ದು, ಇದನ್ನು ಭಾರತ ಹುಣ್ಣಿಮೆ ಎಂದೂ ಕೂಡ ಕರೆಯಲಾಗುತ್ತದೆ. ಈ ದಿನ ಸ್ನಾನ ಹಾಗೂ ದಾನ ಮಾಡುವುದರಿಂದ ಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಈ ದಿನ ಹಲವು ಶುಭ ಯೋಗಗಳು ರಚನೆಯಾಗುತ್ತಿವೆ. ಈ ಅಪರೂಪದ ಶುಭಯೋಗ 13 ವರ್ಷಗಳ ಸುದೀರ್ಘ ಅವಧಿಯ ಬಳಿಕ ರಚನೆಯಾಗುತ್ತಿದೆ ಎನ್ನಲಾಗುತ್ತಿದೆ. ಪ್ರಸ್ತುತ ಮಕರ ರಾಶಿಯಲ್ಲಿ ಮಂಗಳ ಹಾಗೂ ಶುಕ್ರರು ವಿರಾಜಮಾನರಾಗಿದ್ದು, ಎರಡೂ ಗ್ರಹಗಳ ಮೈತ್ರಿಯಿಂದ ಮಕರ ರಾಶಿಯಲ್ಲಿ ಧನಶಕ್ತಿ ಯೋಗ ರೂಪುಗೊಳ್ಳಲಿದೆ. ಈ ಯೋಗ ಸುಮಾರು ಐದು ವರ್ಷಗಳ ಬಳಿಕ ರಚನೆಯಾಗುತ್ತಿದೆ. ಇದಲ್ಲದೆ ಮಂಗಳ ತನ್ನ ಉನ್ನತ ರಾಶಿಯಾಗಿರುವ ಮಕರ ರಾಶಿಯಲ್ಲಿರುವುದು ರುಚಕ ಯೋಗ ರಚಿಸುತ್ತಿದೆ. ಇನ್ನೊಂದೆಡೆ ಕುಂಭ ರಾಶಿಯಲ್ಲಿ ಸೂರ್ಯ ಹಾಗೂ ಬುಧರ ಮೈತ್ರಿಯಿಂದ ಬುದ್ಧಾದಿತ್ಯ ರಾಜಯೋಗ ರಚನೆಯಾಗುತ್ತಿದೆ. ಹೀಗಿರುವಾಗ ಮಾಘ ಹುಣ್ಣಿಮೆಯ ದಿನ ಸಿಂಹ ರಾಶಿಯಲ್ಲಿ ಚಂದ್ರ ನಿರಲಿದ್ದಾನೆ. ಹೀಗಾಗಿ ಭಾರತ ಹುಣ್ಣಿಮೆ ಅಥವಾ ಮಾಘಮಾಸದ ಹುಣ್ಣಿಮೆಯಲ್ಲಿ ಈ ಎಲ್ಲಾ ಅದ್ಭುತ ಯೋಗಗಳು ಏಕಕಾಲಕ್ಕೆ ರಚನೆಯಾಗುತ್ತಿರುವುದು ಹಲವು ರಾಶಿಗಳ ಜನರ ಜೀವನದಲ್ಲಿ ಖುಷಿಗಳೇ, ಖುಷಿಗಳ ಆಗಮವಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
Bharata Hunnime 2024 Rashi Bhavishya: ಈ ಬಾರಿಯ ಮಾಘ ಮಾಸದ ಹುಣ್ಣಿಮೆಯ ದಿನ ಅತ್ಯಂತ ಅಪರೂಪದ ಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಗಳ ಜನರ ಮೇಲೆ ಅದೃಷ್ಟ ಲಕ್ಷ್ಮಿಯ ಭಾರಿ ಕೃಪೆ ಇರಲಿದ್ದು, ಈ ಜನರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ (Spiritual News In Kannada)
ಮೇಷ ರಾಶಿ: ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ಧನಶಕ್ತಿ ಯೋಗ ಹಾಗೂ ಏಕಾದಶ ಭಾವದಲ್ಲಿ ಶಶ ಹಾಗೂ ಬುದ್ಧಾದಿತ್ಯ ಯೋಗಗಳ ರಚನೆಯಾಗುತ್ತಿದೆ. ಇದರಿಂದ ನಿಮಗೆ ಅಪಾರ ಧನಸಂಪತ್ತು ಪ್ರಾಪ್ತಿಯಾಗಲಿದೆ. ಘನತೆ-ಗೌರವ ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ಸಂಪೂರ್ಣ ಫೋಕಸ್ ಆಗಿರುವಿರಿ. ಇಂತಹ ಸನ್ನಿವೇಶದಲಿ ಹೊಸ ನೌಕರಿ ಕೂಡ ಸಿಗುವ ಸಾಧ್ಯತೆ ಇದೆ. ಇದಲ್ಲದೆ ಪ್ರಸ್ತುತ ಇರುವ ನೌಕರಿಯಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ದೊರೆತು ನಿಮಗೆ ಪ್ರಮೋಷನ್ ಭಾಗ್ಯ ಕೂಡ ಪ್ರಾಪ್ತಿಯಾಗುವ ಸಾಧ್ಯತೆಗಳಿವೆ. ಶಿಕ್ಷಣದ ಕ್ಷೇತ್ರದಲ್ಲಿ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಕುಟುಂಬದ ಬೆಂಬಲದಿಂದ ನೀವು ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಸಾಧಿಸುವಿರಿ. ಮಾತಿನ ಬಲದಿಂದ ಇತರರನ್ನು ನಿಮ್ಮತ್ತ ಆಕರ್ಷಿಸುವಿರಿ. ಕೆಲಸದ ನಿಮಿತ್ತ ಹಲವು ರೀತಿಯ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಆದರೆ, ಈ ಯಾತ್ರೆಗಳು ನಿಮಗೆ ಮುಂಬರುವ ದಿನಗಳಲ್ಲಿ ಭಾರಿ ಲಾಭವನ್ನೇ ನೀಡಲಿವೆ. ಒಟ್ಟಾರೆಯಾಗಿ ಹೇಳುವುದಾದರೆ ಈ ಅವಧಿ ನಿಮ್ಮ ಪಾಲಿಗೆ ವರದಾನ ಎಂದರೆ ತಪ್ಪಾಗಲಾರದು.
ಕನ್ಯಾ ರಾಶಿ: ಮಾಘ ಮಾಸದ ಹುಣ್ಣಿಮೆಯ ದಿನ ನಿರ್ಮಾಣಗೊಳ್ಳುತ್ತಿರುವ ರಾಜಯೋಗಗಳು ಕನ್ಯಾ ರಾಶಿಯ ಜಾತಕದವರಿಗೆ ಸಂಪೂರ್ಣ ಲಾಭಗಳನ್ನು ನೀಡಲಿವೆ. ಆಧ್ಯಾತ್ಮದತ್ತ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಇದರ ಜೊತೆಗೆ ಜೀವನದಲ್ಲಿ ಹಲವು ಖುಷಿಗಳ ಆಗಮನವಾಗಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಜೀವನದಲ್ಲಿ ಸುಖ ಸಮೃದ್ಧಿ ವೃತ್ತಿಯಾಗಲಿದೆ ಹಾಗೂ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಮಕ್ಕಳ ಕುರಿತು ನಿಮಗೆ ಸಂತಸದ ಸುದ್ದಿ ಕೇಳಲು ಸಿಗಲಿದೆ. ಕುಟುಂಬದ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ವೃತ್ತಿಗೆ ಸಂಬಂಧಿಸಿದಂತೆ ಯಾವುದಾದರೊಂದು ನಿರ್ಣಯ ಕೈಗೊಂಡರೆ, ಭವಿಷ್ಯದಲ್ಲಿ ಅದರಿಂದ ನಿಮಗೆ ಸಾಕಷ್ಟು ಧನಾಲಾಭ ಸಿಗಲಿದೆ. ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರಲಿದೆ.
ಸಿಂಹ ರಾಶಿ: ಮಾಘ ಮಾಸದ ಹುಣ್ಣಿಮೆಯ ದಿನ ಚಂದ್ರನ ಸಂಚಾರ ನಿಮ್ಮ ರಾಶಿಯಲ್ಲಿಯೇ ಇರಲಿದೆ. ಇದರಿಂದ ನಿಮಗೆ ಅಪಾರ ಲಾಭ ಸಿಗಲಿದೆ. ಧನಶಕ್ತಿ ಯೋಗ ಸಿಂಹ ರಾಶಿಯ ಜಾತಕದವರ ಧನ ಐಶ್ವರ್ಯಾ ಪ್ರಾಪ್ತಿಯಾಗಲಿದೆ. ವೃತ್ತಿ ಹಾಗೂ ಶಿಕ್ಷಣದ ಕ್ಷೇತ್ರದಲಿ ನಿಮಗೆ ಭಾರಿ ಲಾಭ ಸಿಗಲಿದೆ. ಆರೋಗ್ಯ ಕೂಡ ಉತ್ತಮವಾಗಿರಲಿದೆ. ಬುದ್ಧಿಯ ಬಲದಿಂದ ಯಾವುದಾದರೊಂದು ದೊಡ್ಡ ಡೀಲ್ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಪಿತ್ರಾರ್ಜಿತ ಸಂಪತ್ತು ನಿಮಗೆ ಸಿಗುವ ಸಾಧ್ಯತೆ ಇದೆ. ಬಿಸ್ನೆಸ್ ಮಾಡುವವರಿಗೂ ಕೂಡ ಸಾಕಷ್ಟು ಲಾಭ ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)