BIGG BOSS 11 ಮನೆಯಲ್ಲಿದ್ದಾರೆ ಇಬ್ಬರು ಡಾನ್‌ಗಳು! ಜೈಲಿಗೆ ಹೋಗಿ ಬಂದಿರುವ ಆ ಸ್ಪರ್ಧಿಗಳು ಯಾರು ಗೊತ್ತಾ?

Bigg boss 11: ಕರುನಾಡು ಬಹನಿರೀಕ್ಷೆಯಿಂದ ಕಾಯುತ್ತಿದ್ದ ಬಿಗ್‌ ಬಾಸ್‌ ಸೀಸನ್‌ 11 ಶುರುವಾಗಿದೆ. ಮನೆಗೆ 17 ಸ್ಪರ್ಧಿಗಳು ಎಂಟಿಕೊಟ್ಟಿದ್ದು ಈಗಾಗಲೇ ಸ್ಪರ್ಧಿಗಳು ಡಬಲ್‌ ಗೇಮ್‌, ಜಗಳ, ಮನಸ್ಥಾಪ ಎಲ್ಲವೂ ಶುರುವಾಗಿದೆ. 
 

1 /7

Bigg boss 11: ಕರುನಾಡು ಬಹನಿರೀಕ್ಷೆಯಿಂದ ಕಾಯುತ್ತಿದ್ದ ಬಿಗ್‌ ಬಾಸ್‌ ಸೀಸನ್‌ 11 ಶುರುವಾಗಿದೆ. ಮನೆಗೆ 17 ಸ್ಪರ್ಧಿಗಳು ಎಂಟಿಕೊಟ್ಟಿದ್ದು ಈಗಾಗಲೇ ಸ್ಪರ್ಧಿಗಳು ಡಬಲ್‌ ಗೇಮ್‌, ಜಗಳ, ಮನಸ್ಥಾಪ ಎಲ್ಲವೂ ಶುರುವಾಗಿದೆ.   

2 /7

ಇನ್ನೂ ಮನೆಗೆ ಎಂಟ್ರಿ ಕೊಟ್ಟಿರುವ ಈ 17 ಜನರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಒಂದು ಗುಂಪಿನವರನ್ನು ಸ್ವರ್ಗಕ್ಕೆ ಮತ್ತೊಂದು ಗುಂಪಿನವರನ್ನು ನರಕಕ್ಕೆ ಕಳುಹಿಸಲಾಗಿದೆ.   

3 /7

ಸ್ವರ್ಗಕ್ಕೆ ಎಂಟ್ರಿ ಕೊಟ್ಟವರ ಪಟ್ಟಿಯಲ್ಲಿ  ಧನರಾಜ್​, ಭವ್ಯ, ಧರ್ಮ, ಯಮುನಾ, ತ್ರಿವಿಕ್ರಮ್​, ಐಶ್ವರ್ಯಾ, ಗೌತಮಿ, ಹಂಸಾ, ಜಗದೀಶ್​ ಮತ್ತು ಹಂಸಾ, ಇದ್ದಾರೆ.  

4 /7

ಇನ್ನೂ ನರಕಕ್ಕೆ ಸೇರಿಕೊಂಡಿರುವವರ ಪಟ್ಟಿಯಲ್ಲಿ, ಮಾನಸಾ, ಅನುಷಾ,  ರಂಜಿತ್​​​, ಚೈತ್ರಾ,  ಮಾನಸಾ, ಗೋಲ್ಡ್​​ ಸುರೇಶ್​ ಹಾಗೂ ಮೋಕ್ಷಿತಾ ಸೇರಿಕೊಂಡಿದ್ದಾರೆ.   

5 /7

ಹೀಗೆ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಮನೆಯ ಸದಸ್ಯರಾದ ಚೈತ್ರ ಕುಂದಾಪುರ ಹಾಗೂ ಲಾಯರ್‌ ಜಗದೀಶ್‌ ಅವರ ನಡುವೆ ಸಂಭಾಷಣೆ ನಡೆದಿತ್ತು, ಇದರಲ್ಲಿ ಚೈತ್ರಾ ಕುಂದಾಪುರ ಅವರ ಜೊತೆ ಮಾತನಾಡಿದ ಜಗದೀಶ್‌ ನಾನು ಕೂಡ ಡಾನ್‌ ಆದರೆ ಮೇಲ್‌ ಡಾನ್‌, ನೀವು ಫೀಮೇಲ್‌ ಡಾನ್‌ ಎಂದಿದ್ದಾರೆ.   

6 /7

ಚೈತ್ರ ಕುಂದಾಪುರ ಅವರ ಕುರಿತು ಹೇಳುವುದಾದರೆ. ಅವರು ಕರಾವಳಿ ಭಾಗದವು, ಈಕೆ ಹಿಂದೂ ಪರ ಭಾಷಣೆಗಳ ಮೂಲಕ ಹಾಗಾಗ ಸದ್ದು ಮಾಡುತ್ತಿರುತ್ತಾರೆ. ಕಳೆದ ವರ್ಷ ವಂಚನೆ ಆರೋಪದ ಅಡಿಯಲ್ಲಿ ಜೈಲು ಸೇರಿಕೊಂಡಿದ್ದ ಚೈತ್ರ ಕುಂದಾಪುರ, ಹಲವು ದಿನಗಳ ಕಾಲ ಜೈಲಿನಲ್ಲಿದ್ದು ಹೊರ ಬಂದಿದ್ದಾರೆ.   

7 /7

ಲಾಯರ್‌ ಜಗದೀಶ್‌ ತಮ್ಮ ಹೇಳಿಕೆಗಳ ಮೂಲಕ ಸದಾ ಚರ್ಚೆಯಲ್ಲಿರುವ ವ್ಯಕ್ತಿ ಈತ ಕೂಡ ಹಿಂದೆ ಒಂದು ವಿಡಿಯೋದಲ್ಲಿ ತಾನು ಜೈಲಿಗೆ ಹೋಗಿ ಬಂದಿರುವ ವಿಷಯವನ್ನು ಸ್ವತ್ಹ ತಾವೇ ಹೇಳಿಕೊಂಡಿದ್ದರು .