Black Thread: ಕಪ್ಪು ದಾರವನ್ನ ಧರಿಸಿದ್ರೆ ಈ ಎಲ್ಲಾ ಸಮಸ್ಯೆಗಳು ದೂರ.. ಅಪಾರ ಆರ್ಥಿಕ ಲಾಭವೂ ಸಿಗುತ್ತೆ..!!

Black thread benefits: ಶನಿಯ ಪ್ರಭಾವವು ನಕಾರಾತ್ಮಕವಾಗಿದ್ದರೆ ನಿಮ್ಮ ಜೀವನದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಣಿಕಟ್ಟಿಗೆ ಕಪ್ಪು ದಾರವನ್ನು ಕಟ್ಟಿಕೊಂಡರೆ ಶನಿದೇವನ ಕೃಪೆ ಸಿಗುತ್ತದೆ. ಈ ಕಾರಣದಿಂದ ಸಮಯಕ್ಕೆ ಸರಿಯಾಗಿ ನಿಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ನಿಮಗೆ ಯಶಸ್ಸು ದೊರೆಯುತ್ತದೆ. 

Amazing Benefits of Wearing Black Thread: ಜ್ಯೋತಿಷ್ಯದಲ್ಲಿ ಕಪ್ಪು ದಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮಣಿಕಟ್ಟಿನ ಮೇಲೆ ಕಪ್ಪು ದಾರವನ್ನು ಕಟ್ಟುವುದರಿಂದ ಅನೇಕ ಪ್ರಯೋಜನಗಳು ಲಭಿಸುತ್ತವೆ ಎಂದು ನಂಬಲಾಗಿದೆ. ನಮ್ಮ ಜೀವನದಲ್ಲಿ ಬರುವ ಅಡೆತಡೆಗಳನ್ನು ಇದರಿಂದ ನಿವಾರಿಸಬಹುದು ಎಂದು ಹೇಳಲಾಗುತ್ತದೆ. ಅನೇಕ ಜನರು ತಮ್ಮ ಕಾಲುಗಳಿಗೆ ಮತ್ತು ತೋಳುಗಳಿಗೆ ಕಪ್ಪು ದಾರವನ್ನು ಕಟ್ಟುತ್ತಾರೆ. ಕಪ್ಪು ದಾರವನ್ನು ಕಟ್ಟುವುದರಿಂದ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿಯಿರಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಅನೇಕರು ಬೇರೆಯವರ ಕಣ್ಣು ನಮ್ಮ ಮೇಲೆ ಬೀಳಬಾರದು, ದೃಷ್ಟಿ ನಮ್ಮ ಮೇಲೆ ಬೀಳಬಾರದು ಅಂತಾ ಕಪ್ಪು ದಾರವನ್ನು ಕಟ್ಟುತ್ತಾರೆ. ಈ ಉದ್ದೇಶಕ್ಕಾಗಿ ಕಪ್ಪು ದಾರವನ್ನು ಕಟ್ಟುವುದು ಸಹಜವಾಗಿದೆ. ಜ್ಯೋತಿಷ್ಯದಲ್ಲಿ ಈ ಕಪ್ಪು ದಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮಣಿಕಟ್ಟಿನ ಸುತ್ತಲೂ ಕಪ್ಪು ದಾರವನ್ನು ಕಟ್ಟುವುದರಿಂದ ಅನೇಕ ಪ್ರಯೋಜನಗಳಿವೆ. 

2 /7

ಜ್ಯೋತಿಷ್ಯದಲ್ಲಿ ಕಪ್ಪು ದಾರವನ್ನು ಅದೃಷ್ಟ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೈಯಲ್ಲಿ ಕಪ್ಪು ದಾರವನ್ನು ಧರಿಸುವುದರಿಂದ ಅದೃಷ್ಟ ಮತ್ತು ಸಂಪತ್ತು ಬರುತ್ತದೆ. ಎಷ್ಟೇ ಅಡೆತಡೆಗಳು ಬಂದರೂ ಕಪ್ಪು ದಾರ ಕಟ್ಟಿಕೊಂಡರೆ ತಕ್ಷಣವೇ ನಿಮಗೆ ಪರಿಹಾರ ಸಿಗುತ್ತದೆ ಎಂಬುದು ಹಲವರ ನಂಬಿಕೆ.

3 /7

ಪ್ರತಿಕೂಲ ಪರಿಸ್ಥಿತಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಮುಖ್ಯ. ಪ್ರತಿಕೂಲ ಸಂದರ್ಭಗಳು ಎದುರಾದಾಗ ನಾವು ಒತ್ತಡಕ್ಕೆ ಒಳಗಾಗುತ್ತೇವೆ. ಇದೆಲ್ಲವೂ ದುಷ್ಟ ಶಕ್ತಿಗಳಿಂದ ನಡೆಯುತ್ತದೆ. ಹೀಗಾಗಿ ದುಷ್ಟ ಶಕ್ತಿಗಳನ್ನು ದೂರವಿಡಲು ಮಣಿಕಟ್ಟಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ಲಾಭದಾಯಕವೆಂದು ಹೇಳಲಾಗಿದೆ. 

4 /7

ಮಣಿಕಟ್ಟಿನ ಮೇಲೆ ಕಪ್ಪು ದಾರವನ್ನು ಕಟ್ಟಿಕೊಂಡರೆ ಮನಸ್ಸು ಆಧ್ಯಾತ್ಮದತ್ತ ಹೊರಳುತ್ತದೆ. ಇದರಿಂದ ನಮ್ಮಲ್ಲಿ ಅಂತಃಪ್ರಜ್ಞೆ ಮತ್ತು ಅರಿವು ಹೆಚ್ಚಾಗುತ್ತದೆ. ಹೀಗಾಗಿ ನಾವು ಕಪ್ಪು ದಾರವನ್ನು ಕಟ್ಟಿಕೊಂಡರೆ ನಮ್ಮ ಮನಸ್ಸು ಶಾಂತ ಚಿತ್ತವಾಗಿರಲು ನೆರವಾಗುತ್ತದೆ ಎನ್ನಲಾಗಿದೆ. 

5 /7

ದುಡ್ಡು ಸಂಪಾದಿಸಿದರೂ, ಸಮಾಜದಲ್ಲಿ ಒಳ್ಳೆಯ ಹೆಸರು ಬಂದರೂ ಕೆಲವರಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಮನುಷ್ಯನ ದೃಷ್ಟಿಯು ಶನಿ ದೋಷದಿಂದ ಪ್ರಭಾವಿತವಾಗಿರುತ್ತದೆ. ನೀವು ಕಪ್ಪು ದಾರವನ್ನು ಕಟ್ಟಿದರೆ ಇತರರ ಕಣ್ಣುಗಳು ನಿಮ್ಮ ಮೇಲೆ ಬೀಳುವುದಿಲ್ಲ. ನಿಮ್ಮ ಕೆಲಸದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರಲು ನಿಮಗೆ ಇದು ಸಹಾಯ ಮಾಡುತ್ತದೆ.

6 /7

ಮಣಿಕಟ್ಟಿನ ಸುತ್ತಲೂ ಕಪ್ಪು ದಾರವನ್ನು ಧರಿಸಿದರೆ ಗ್ರಹಗಳ ಪ್ರಭಾವ ಕಡಿಮೆಯಾಗುತ್ತದೆ. ದುಷ್ಟ ಶಕ್ತಿಗಳು ನಿಮ್ಮ ಹತ್ತಿರ ಬರುವುದಿಲ್ಲ. ಇದಲ್ಲದೆ ಕಪ್ಪು ದಾರವು ನಿಮ್ಮನ್ನು ಕಾಸ್ಮಿಕ್ ಶಕ್ತಿಗಳೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ.

7 /7

ಶನಿಯ ಪ್ರಭಾವವು ನಕಾರಾತ್ಮಕವಾಗಿದ್ದರೆ ನಿಮ್ಮ ಜೀವನದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಣಿಕಟ್ಟಿಗೆ ಕಪ್ಪು ದಾರವನ್ನು ಕಟ್ಟಿಕೊಂಡರೆ ಶನಿದೇವನ ಕೃಪೆ ಸಿಗುತ್ತದೆ. ಈ ಕಾರಣದಿಂದ ಸಮಯಕ್ಕೆ ಸರಿಯಾಗಿ ನಿಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ನಿಮಗೆ ಯಶಸ್ಸು ದೊರೆಯುತ್ತದೆ.