ಹಾರ್ದಿಕ್ ಪಾಂಡ್ಯ ಲವ್ ಸ್ಟೋರಿಗೆ ಟ್ವಿಸ್ಟ್..‌ ʼʼನಾನು ಅವರನ್ನು ಪ್ರೀತಿಸುತ್ತಿದ್ದೇನೆʼʼ ಎಂದು ಬಹಿರಂಗ ಹೇಳಿಕೆ ಕೊಟ್ಟ ಸ್ಟಾರ್ ನಟಿ!

 bollywood actress About Hardik Pandya: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ಬದುಕಿನಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮದುವೆಯಾಗಿ 4 ವರ್ಷಗಳ ಬಳಿಕ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾಗೆ ವಿಚ್ಛೇದನ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯರಿಂದ ವಿಚ್ಛೇದನದ ನಂತರ, ನತಾಶಾ ಕೂಡ ಮಗುವಿನೊಂದಿಗೆ ತನ್ನ ತಾಯ್ನಾಡಿಗೆ ತೆರಳಿದ್ದಾರೆ..

1 /6

ವಾಸ್ತವವಾಗಿ ವಿಚ್ಛೇದನದ ನಂತರ, ಹಾರ್ದಿಕ್ ಹೆಸರು ನಟಿ ಅನನ್ಯಾ ಪಾಂಡ್ಯ ಅವರೊಂದಿಗೆ ತಳುಕುಹಾಕಿಕೊಂಡಿತ್ತು.. ಇತ್ತೀಚೆಗಷ್ಟೇ ಹಾರ್ದಿಕ್ ನಟಿ ಮತ್ತು ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು..   

2 /6

ಆದರೆ ಈಗ ಹಾರ್ದಿಕ್ ಪಾಂಡ್ಯ , ಅನನ್ಯಾ ಪಾಂಡೆ ಅಥವಾ ಜಾಸ್ಮಿನ್ ವಾಲಿಯಾ ಅಲ್ಲ.. ಆದರೆ ಬಾಲಿವುಡ್‌ನ ಪ್ರಸಿದ್ಧ ನಟಿಯೊಬ್ಬರು ಹಾರ್ದಿಕ್‌ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.. ಅವರು ಹಾರ್ದಿಕ್ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.   

3 /6

ಸದ್ಯ ಹಾರ್ದಿಕ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ ನಟಿ ಬೇರೆ ಯಾರೂ ಅಲ್ಲ ನಟಿ ಇಶಿತಾ ರಾಜ್. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಇಶಿತಾಗೆ ಹಾರ್ದಿಕ್ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.   

4 /6

ಅದಕ್ಕೆ ಉತ್ತರಿಸಿದ ನಟಿ 'ಹಾರ್ದಿಕ್‌ ಬಹುಮುಖ ಕ್ರಿಕೆಟಿಗ. ಬ್ಯಾಟಿಂಗ್ ಮಾಡುವಾಗ ಹಾರ್ದಿಕ್ ಅವರನ್ನು ನೋಡುವುದೇ ಒಂದು ಥ್ರಿಲ್. ನಾನು ಅವರನ್ನು ಪ್ರೀತಿಸುತ್ತೇನೆ... ವಾಸ್ತವವಾಗಿ ಅವನು ನನ್ನ ನೆಚ್ಚಿನ ಆಟಗಾರ. ಹಾರ್ದಿಕ್ ಪಾಂಡ್ಯ ನನ್ನ ಕ್ರಶ್ ಮತ್ತು ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ…' ಎಂದು ಇಶಿತಾ ರಾಜ್ ಹೇಳಿದ್ದಾರೆ.   

5 /6

ನಟಿ ಇಶಿತಾ ರಾಜ್ ಅವರ ಸಿನಿಮಾಗಳ ಬಗ್ಗೆ ಮಾತನಾಡುವುದಾದರೇ ನಟಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ದೇಶಕ ಲವ್ ರಂಜನ್ ನಿರ್ದೇಶನದ 'ಪ್ಯಾರ್ ಕಾ ಪಂಚನಾಮ' ಚಿತ್ರದಲ್ಲಿ ನಟಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ‘ವೈಲ್ಡ್ ವೈಲ್ಡ್’ ಸಿನಿಮಾದಲ್ಲೂ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.    

6 /6

ಇನ್ನು ಹಾರ್ದಿಕ್ - ನತಾಶಾ ಜನವರಿ 2020 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅದರ ನಂತರ 2023 ರಲ್ಲಿ, ನತಾಶಾ - ಹಾರ್ದಿಕ್ ಅದ್ಧೂರಿಯಾಗಿ ವಿವಾಹವಾದರು. ಆದರೆ ಅವರ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ.