ಮತ್ಸ್ಯಾವತಾರದಲ್ಲಿ ಮಿಂಚಿದ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ

ಸದ್ಯ ಬಾಲಿವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಕಿಯಾರಾ ಅದ್ವಾನಿ ಕೂಡ ಒಬ್ಬರು, ಕೇವಲ ನಟನೆ ಮಾತ್ರವಷ್ಟೇ ಅಲ್ಲದೆ ಆಗಾಗ ಅವರು ತಮ್ಮ ಫ್ಯಾಶನ್ ಸೆನ್ಸ್ ನಿಂದಾಗಿಯೂ ಕೂಡ ಅವರು ಗಮನ ಸೆಳೆಯುತ್ತಾರೆ.ಈಗ ಅವರ ಮತ್ಸ್ಯಾವತಾರವನ್ನು ಬಿಂಬಿಸುವ ಉಡುಗೆಯನ್ನು ಧರಿಸಿ ಫೋಟೋ ಶೂಟ್ ಮಾಡಿರುವುದು ಈಗ ಸಾಕಷ್ಟು ಸುದ್ದಿಯನ್ನು ಮಾಡಿದೆ.

ಇತ್ತೀಚಿಗೆ ಅವರಿಗೆ ವರ್ಷದ ಲೋಕಮಾತ್ ಪುರಸ್ಕಾರ ಲಭಿಸಿತ್ತು, ಈ ಕುರಿತಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಂತಸ ಹಂಚಿಕೊಂಡ ನಟಿ ಕಿಯಾರಾ “ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದ ನನ್ನ ಹೃದಯವು ನಮ್ಮ ಗೌರವಾನ್ವಿತ ನಾಯಕರಾದ ಶ್ರೀ ಏಕನಾಥ್ ಶಿಂಧೆ ಜಿ, ಶ್ರೀ ದೇವೇಂದ್ರ ಫಡ್ನವಿಸ್ ಜಿ ಮತ್ತು ಶ್ರೀ ಪ್ರಮೋದ್ ಸಾವಂತ್ ಜಿ ಅವರಿಂದ ವರ್ಷದ ಲೋಕಮಾತ್ ಮಹಾರಾಷ್ಟ್ರವನ್ನು ಸ್ವೀಕರಿಸುತ್ತಿರುವುದಕ್ಕೆ ನಾನು ಕೃತಜ್ಞಳಾಗಿದ್ದೇನೆ” ಎಂದು ಅವರು ಟ್ವೀಟ್ ಮಾಡಿದ್ದರು.

Photo Courtsey: Kiara Advani

1 /7

2 /7

3 /7

4 /7

5 /7

6 /7

7 /7