Brand value : ನಂಬರ್ ಒನ್ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ..!

ಬ್ರಾಂಡ್ ವ್ಯಾಲ್ಯೂ ವಿಚಾರದಲ್ಲಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳನ್ನು ಹಿಂದೆ ಹಾಕಿ ನಂಬರ್ ಒನ್ ಪಟ್ಟಕೇರಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ..

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ(Virat Kohli) ವಿಶ್ವದ ಪ್ರಸಿದ್ಧ ಕ್ರಿಕೆಟಿಗರಲ್ಲಿ ಒಬ್ಬರು. 2020 ರಲ್ಲಿ 23.77 ಮಿಲಿಯನ್ ಯುಎಸ್ ಡಾಲರ್ ಮೌಲ್ಯದೊಂದಿಗೆ ಕೊಹ್ಲಿ ಸತತ ನಾಲ್ಕನೇ ವರ್ಷವೂ ಅತ್ಯಂತ ದುಬಾರಿ ಭಾರತೀಯ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ. ಬಾಲಿವುಡ್ ತಾರೆಗಳಾದ ಅಕ್ಷಯ್ ಕುಮಾರ್ (Akshay Kumar) ಮತ್ತು ರಣವೀರ್ ಸಿಂಗ್ (Ranveer Singh) ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

1 /5

 2020 ರ ಟಾಪ್ 10 ವ್ಯಕ್ತಿಗಳ ಪಟ್ಟಿಯಲ್ಲಿ ಚಿತ್ರರಂಗವನ್ನು ಹೊರತುಪಡಿಸಿ, ಬೇರೆ ಕ್ಷೇತ್ರದಿಂದ ಸ್ಥಾನ ಪಡೆದಿರುವ ಏಕೈಕ ಸೆಲೆಬ್ರಿಟಿ   ವಿರಾಟ್ ಕೊಹ್ಲಿ. ಈ ಪಟ್ಟಿಯಲ್ಲಿ ಕೇವಲ ಬ್ಬರು ಮಹಿಳೆಯರು ಮಾತ್ರ ಸ್ಥಾನ ಪಡೆದಿದ್ದಾರೆ ಎಂದು,  ಬ್ರಾಂಡ್ ವಾಲ್ಯುದ ಉನ್ನತ ಕಂಪನಿಯಾದ ಡಫ್ & ಫೆಲ್ಪ್ಸ್ ಹೇಳಿಕೆಯಲ್ಲಿ ತಿಳಿಸಿದೆ.  

2 /5

 ಡಫ್ & ಫೆಲ್ಪ್ಸ್, ಪ್ರಕಾರ '2020 ರಲ್ಲಿ ಕೊಹ್ಲಿಯ ಬ್ರಾಂಡ್ ವ್ಯಾಲ್ಯೂನಲ್ಲಿ ಯಾವುದೇ ಬದಲಾವಣೆ ಇಲ್ಲ. ಅದು ಹಿಂದಿನಷ್ಟೇ ಇದೆ. ಆದರೆ ಬೇರೆ  20 ಸೆಲೆಬ್ರಿಟಿಗಳ ವ್ಯಾಲ್ಯೂ  ಐದು ಪ್ರತಿಶತದಷ್ಟು ಕುಸಿದಿದೆ ಎನ್ನಲಾಗಿದೆ.    

3 /5

ಕೊಹ್ಲಿ ಸತತ ನಾಲ್ಕನೇ ವರ್ಷವೂ ಅತ್ಯಮೂಲ್ಯ ಸೆಲೆಬ್ರಿಟಿ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಕರೋನಾ ಮಹಾಮಾರಿಯ ಹೊರತಾಗಿಯೂ ವಿರಾಟ್ ಕೊಹ್ಲಿ ಬ್ರಾಂಡ್ ವ್ಯಾಲ್ಯೂ  23.77 ಮಿಲಿಯನ್ ಆಗಿ ಉಳಿದಿದೆ

4 /5

ವಿರಾಟ್ ಕೊಹ್ಲಿ ನಂತರ ಅಕ್ಷಯ್ ಕುಮಾರ್  ಬ್ರಾಂಡ್ ವಾಲ್ಯು 13.8 ಶೇ ದಷ್ಟು ಏರಿಕೆಯಾಗಿದ್ದು, 11.89 ಕೋಟಿ ಅಮೆರಿಕನ್ ಡಾಲರ್ ನೊಂದಿಗೆ ಅವರು 2ನೇ ಸ್ಥಾನದಲ್ಲಿದ್ದಾರೆ. ರಣವೀರ್ ಸಿಂಗ್10.29 ಡಾಲರ್ ಜೊತೆ ಮೂರನೇ ಸ್ಥಾನದಲ್ಲಿದ್ದಾರೆ.    

5 /5

ಡಫ್ & ಫೆಲ್ಪ್ಸ್ ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನದ ಪ್ರಕಾರ, 2020 ರಲ್ಲಿ ಅಗ್ರ 20 ಸೆಲೆಬ್ರಿಟಿಗಳ ಒಟ್ಟು ಬ್ರಾಂಡ್ ಮೌಲ್ಯವು ಒಂದು ಅರಬ್ ಅಮೆರಿನ್ ಡಾಲರ್ ಆಗಿದ್ದು, ಇದು 2019 ಕ್ಕೆ ಹೋಲಿಸಿದರೆ ಐದು ಪ್ರತಿಶತ ಕಡಿಮೆಯಾಗಿದೆ.