ಜಿಯೋ ಗ್ರಾಹಕರಿಗೆ ಬಂಪರ್:‌ ಕೇವಲ 153 ರೂ. ರೀಚಾರ್ಜ್‌ಗೆ ದೊರೆಯಲಿದೆ ಇಷ್ಟೊಂದು ಪ್ರಯೋಜನಗಳು

Written ByPuttaraj K Alur
Published: Oct 26, 2024, 10:41 PM IST|Updated: Oct 26, 2024, 10:41 PM IST

Best Jio Prepaid Recharge Plans: ರಿಲಯನ್ಸ್‌ ಜಿಯೋ ₹75, ₹91, ₹125, ₹186, ₹223 ಮತ್ತು ₹895 ಸೇರಿದಂತೆ ಹಲವು ಆಕರ್ಷಕ ಯೋಜನೆಗಳನ್ನು ಹೊಂದಿದೆ. ₹152 ಯೋಜನೆಯಲ್ಲಿ ಜಿಯೋ ಬಳಕೆದಾರರಿಗೆ ಅನಿಯಮಿತ ಕರೆ ಮತ್ತು ಉಚಿತ ಡೇಟಾ ಸೌಲಭ್ಯವನ್ನು ಒದಗಿಸುತ್ತಿದೆ.

Best Jio Prepaid Recharge Plans: ರಿಲಯನ್ಸ್‌ ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್‌ ನ್ಯೂಸ್‌ ಸಿಕ್ಕಿದೆ. ಬೆಳಕಿನ ಹಬ್ಬ ದೀಪಾವಳಿಗೆ ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಟೆಲಿಕಾಂ ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆ ಪ್ರಾರಂಭಿಸಿದೆ. ಕೇವಲ 153 ರೂ.ನ ಮೂಲ ಬೆಲೆಯಲ್ಲಿ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ 28 ​​ದಿನಗಳಲ್ಲಿ ಒಟ್ಟು 14 GB ಡೇಟಾವನ್ನು ನೀಡುತ್ತಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Best Jio Prepaid Recharge Plans1/5

ಅನಿಯಮಿತ ಕರೆ

ಜಿಯೋದ ಕಡಿಮೆ ಬೆಲೆಯ ಈ ಯೋಜನೆಯಲ್ಲಿ ಪ್ರತಿದಿನ ಗ್ರಾಹಕರಿಗೆ 300 SMSಗಳನ್ನು ನೀಡಲಾಗುತ್ತಿದೆ. ಇದಲ್ಲದೆ ಈ ಯೋಜನೆಯು ಪ್ರತಿ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆಯನ್ನು ಸಹ ನೀಡುತ್ತದೆ.

Best Jio Prepaid Recharge Plans2/5

ಈ ಪ್ಲ್ಯಾನ್‌ನಿಂದ ಭಾರೀ ಲಾಭ

ಕ್ರಿಕೆಟ್ ಮತ್ತು ಸಿನಿಮಾ ಪ್ರಿಯರಿಗೆ ಈ ಯೋಜನೆಯಿಂದ ಭಾರೀ ಲಾಭವಿದೆ. ಇದು ಜಿಯೋ ಟಿವಿ, ಜಿಯೋ ಸಿನಿಮಾದ ಉಚಿತ ಚಂದಾದಾರಿಕೆಯನ್ನು ಒಳಗೊಂಡಿದೆ. ಬಳಕೆದಾರರು ಈ ವರ್ಷದ ಐಪಿಎಲ್ ಪ್ರಸಾರವನ್ನು ವೀಕ್ಷಿಸಬಹುದು. ಈ ರೀಚಾರ್ಜ್‌ನಲ್ಲಿನ ಇಂಟರ್ನೆಟ್ ಪ್ಲಾನ್ ನಿಮಗೆ 500 MB ಅಂದರೆ 0.5GB ಯ ಬ್ರೌಸಿಂಗ್ ಮತ್ತು ಡೌನ್‌ಲೋಡ್ ಅನ್ನು 28 ದಿನಗಳ ವ್ಯಾಲಿಡಿಟಿಗೆ ನೀಡುತ್ತದೆ.

Best Jio Prepaid Recharge Plans3/5

ಯಾರಿಗೆ ಉತ್ತಮ?

ಈ ಯೋಜನೆಯು ಗಮನ ಸೆಳೆಯುತ್ತಿದ್ದು, ಅನೇಕ ಬಳಕೆದಾರರು ತಮ್ಮ ಮನೆ ಅಥವಾ ಕಚೇರಿಗಳಲ್ಲಿ ವೈಫೈ ಸೇವೆಗೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕರೆ ಮಾಡುವ ವೈಶಿಷ್ಟ್ಯಗಳೊಂದಿಗೆ ಮೂಲ ರೀಚಾರ್ಜ್ ಅಗತ್ಯವಿರುತ್ತದೆ. ದಿನನಿತ್ಯ ಕಡಿಮೆ ಡೇಟಾ ಬಳಸುವ ಬಳಕೆದಾರರಲ್ಲಿ ನೀವೂ ಒಬ್ಬರಾಗಿದ್ದರೆ ಈ ಜಿಯೋ ಯೋಜನೆ ನಿಮಗೆ ಉತ್ತಮವಾಗಿರುತ್ತದೆ.

Best Jio Prepaid Recharge Plans4/5

ರಿಲಯನ್ಸ್‌ ಜಿಯೋ ರಿಚಾರ್ಜ್‌ ಯೋಜನೆಗಳು

ರಿಲಯನ್ಸ್‌ ಜಿಯೋ ₹75, ₹91, ₹125, ₹186, ₹223 ಮತ್ತು ₹895 ಸೇರಿದಂತೆ ಹಲವು ಆಕರ್ಷಕ ಯೋಜನೆಗಳನ್ನು ಹೊಂದಿದೆ. ₹152 ಯೋಜನೆಯಲ್ಲಿ ಜಿಯೋ ಬಳಕೆದಾರರಿಗೆ ಅನಿಯಮಿತ ಕರೆ ಮತ್ತು ಉಚಿತ ಡೇಟಾ ಸೌಲಭ್ಯವನ್ನು ಒದಗಿಸುತ್ತಿದೆ.

Best Jio Prepaid Recharge Plans5/5

ಕಡಿಮೆ ಬೆಲೆಗೆ ಹಲವು ಲಾಭ

ಈ ಯೋಜನೆಯು ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಅನ್ವಯವಾಗಲಿದೆ. ನೀವು ಜಿಯೋ ಫೋನ್ ಬಳಕೆದಾರರಾಗಿದ್ದರೆ, ಈ ರೀಚಾರ್ಜ್ ಯೋಜನೆಯ ಲಾಭ ಪಡೆಯಬಹುದು. ಕೈಗೆಟುಕುವ ದರ ಮತ್ತು ಹಲವಾರು ಪ್ರಯೋಜನಗಳಿಂದ ಹೊಸ ಜಿಯೋ ಯೋಜನೆಯು ಗಮನಾರ್ಹ ಸಂಖ್ಯೆಯ ಚಂದಾದಾರರನ್ನು ಆಕರ್ಷಿಸುತ್ತಿದೆ.