Flipkart Big Bachat Dhamaal ಸೇಲ್ ಇಂದಿನಿಂದ ಅಂದರೆ ಡಿಸೆಂಬರ್ 4 ರಿಂದ ಫ್ಲಿಪ್ಕಾರ್ಟ್ನಲ್ಲಿ ಪ್ರಾರಂಭವಾಗಿದೆ.
ನವದೆಹಲಿ : Flipkart Big Bachat Dhamaal ಸೇಲ್ ಇಂದಿನಿಂದ ಅಂದರೆ ಡಿಸೆಂಬರ್ 4 ರಿಂದ ಫ್ಲಿಪ್ಕಾರ್ಟ್ನಲ್ಲಿ ಪ್ರಾರಂಭವಾಗಿದೆ. ಇದು ಡಿಸೆಂಬರ್ 6 ರವರೆಗೆ ನಡೆಯಲಿದೆ. ಈ ಸೇಲ್ನಲ್ಲಿ, ಮನೆಯ ಪಡಿತರದಿಂದ ಹಿಡಿದು ಸ್ಮಾರ್ಟ್ ಟಿವಿಗಳು, ಲ್ಯಾಪ್ಟಾಪ್ಗಳು ಮತ್ತು ಸ್ಮಾರ್ಟ್ಫೋನ್ ಹೀಗೆ ಪ್ರತಿಯೊಂಡು ವಸ್ತುವಿನ ಮೇಲೆಯೂ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಐಫೋನ್ 12 ಸೇರಿದಂತೆ ಈ ಸೇಲ್ನಲ್ಲಿ ಲಭ್ಯವಿರುವ ಅಗ್ರ ಐದು ಸ್ಮಾರ್ಟ್ಫೋನ್ ಮಾಹಿತಿ ಇಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
iPhone 12 ರ 128GB ರೂಪಾಂತರವನ್ನು 70,900 ರೂಗಳ ಬದಲಿಗೆ 61,999 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, 3,100 ರೂಪಾಯಿಗಳ ಕ್ಯಾಶ್ ಬ್ಯಾಕ್ ಪಡೆಯಬಹುದು. ಅಲ್ಲದೆ, ಎಕ್ಸ್ಚೇಂಜ್ ಆಫರ್ನೊಂದಿಗೆ 16,050 ರೂಪಾಯಿಗಳ ರಿಯಾಯಿತಿ ಸಿಗಲಿದೆ. ಈ ರೀತಿಯಲ್ಲಿ ಕೇವಲ 42,849 ರೂ.ಗಳಲ್ಲಿ iPhone 12 ಅನ್ನು ಖರೀದಿಸಲು ಸಾಧ್ಯವಾಗುತ್ತದೆ.
ವಿವೋದ ಈ 5G ಸ್ಮಾರ್ಟ್ಫೋನ್ 128GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 27,990 ರೂ. ಆದರೆ ಇದನ್ನು 24,990 ರೂ.ಗೆ ಖರೀದಿಸಬಹುದು. ಯಾವುದೇ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೂ, 2 ಸಾವಿರ ರೂ. ಗಳ ರಿಯಾಯಿತಿ ಸಿಗಲಿದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 1,150 ರೂ. ಕ್ಯಾಶ್ಬ್ಯಾಕ್ ಪಡೆಯುತ್ತಾರೆ. ಅಲ್ಲದೆ, ಏಕ್ಸ್ ಚೇಂಜ್ ಆಫರ್ ಮೂಲಕ 16,050 ರೂ.ವರೆಗೆ ಉಳಿಸಬಹುದು. ಅಂದರೆ ಈ ಫೋನ್ ಅನ್ನು 5,790 ರೂ.ಗೆ ಖರೀದಿಸಬಹುದು.
ಕ್ವಾಡ್ ಕ್ಯಾಮೆರಾ ಸೆಟಪ್ ಮತ್ತು 128GB ಮೆಮೊರಿಯೊಂದಿಗೆ ಈ Poco ಸ್ಮಾರ್ಟ್ಫೋನ್ ಅನ್ನು 23,999 ಬದಲಿಗೆ 18,999 ಗೆ ಪಡೆಯಬಹುದು. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ 950 ರೂ ಕ್ಯಾಶ್ಬ್ಯಾಕ್ ಅನ್ನು ನೀಡುತ್ತದೆ. ಎಕ್ಸ್ಚೇಂಜ್ ಆಫರ್ ನಲ್ಲಿ ಮತ್ತೆ 16,050 ರೂ.ವರೆಗೆ ಉಳಿಸಬಹುದು. ನಂತರ ಈ ಫೋನ್ ಅನ್ನು 1,999 ರೂ.ಗೆ ಖರೀದಿ ಮಾಡುವುದು ಸಾಧ್ಯವಾಗುತ್ತದೆ.
Oppo ನ 128GB ಸ್ಟೋರೇಜ್ ಹೊಂದಿರುವ ಈ 5G ಫೋನ್ ಅನ್ನು17,990 ರೂ .ಗೆ ಖರೀದಿಸಬಹುದು .ಆದರೆ ಇದರ ಮೂಲ ಬೆಲೆ 18,990 ರೂ. ಆಗಿದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನೊಂದಿಗೆ 900 ರೂ. ಕ್ಯಾಶ್ ಬ್ಯಾಕ್ ಸಿಗಲಿದೆ. ಎಕ್ಸ್ಚೇಂಜ್ ಆಫರ್ನೊಂದಿಗೆ ಇದರ ಮೇಲೆ 16,050 ವರೆಗೆ ಉಳಿಸಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ನೀವು ಈ ಫೋನ್ ಅನ್ನು 1,040 ರೂ.ಗೆ ಖರೀದಿಸಬಹುದು.
128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ Motorola ಸ್ಮಾರ್ಟ್ಫೋನ್ ಅನ್ನು 21,999 ರೂಗಳ ಬದಲಿಗೆ 16,999 ರೂ. ಖರೀದಿಸಬಹುದು. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನೊಂದಿಗೆ, 850 ಅನ್ನು ಕ್ಯಾಶ್ ಬ್ಯಾಕ್ ಸಿಗಲಿದೆ. ಎಕ್ಸ್ಚೇಂಜ್ ಆಫರ್ ಮೂಲಕ 16,050 ರೂ ವರೆಗೆ ಉಳಿತಾಯ ಮಾಡಬಹುದು. ಹೀಗೆ ಈಲಾ ಆಫರ್ ಗಳು ಸೇರಿದರೆ ಈ ಫೋನ್ ಕೇವಲ 99ರೂ. ಗೆ ನಿಮ್ಮದಾಗುತ್ತದೆ.