Deadly Diseases: ನೀವು ವಾರದಲ್ಲಿ 3 ದಿನಗಳಿಗಿಂತ ಹೆಚ್ಚು ಮಾಂಸಾಹಾರ ಸೇವಿಸುತ್ತಿದ್ದರೆ ಎಚ್ಚರ

                         

ವಾರದಲ್ಲಿ 3 ದಿನ ಅಥವಾ ಅದಕ್ಕಿಂತ ಹೆಚ್ಚು ದಿನ ಚಿಕನ್, ಮಟನ್ ತಿನ್ನಲು ಇಷ್ಟಪಡುವವರಲ್ಲಿ ನೀವು ಕೂಡ ಇದ್ದರೆ ಈ ವರದಿಯನ್ನು ತಪ್ಪದೇ ಓದಿ. ವಾರದಲ್ಲಿ ಮೂರು ದಿನಗಳಿಗಿಂತ ಹೆಚ್ಚು ಮಾಂಸಾಹಾರ ಸೇವನೆ ನಿಮಗೆ ಹೃದ್ರೋಗ ಮತ್ತು ಮಧುಮೇಹ ಸೇರಿದಂತೆ 9 ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.

1 /4

ಬೆಂಗಳೂರು : ನೀವು ಮಾಂಸಾಹಾರ ಪ್ರಿಯರಾಗಿದ್ದರೆ ಈ ಸುದ್ದಿ ನಿಮಗಾಗಿ ಆಗಿದೆ. ಮಾಂಸಾಹಾರ ಇಷ್ಟಪಡುವವರು ಮನೆಯಲ್ಲಿಯೇ ಆಗಲಿ ಅಥವಾ ಹೊರಗೆ ಎಲ್ಲೇ ಹೋದರು ಕೇವಲ ಮಾಂಸಾಹಾರವನ್ನು ತಿನ್ನಲು ಮಾತ್ರ ಇಚ್ಚಿಸುತ್ತಾರೆ. ಮಾಂಸವು ಪ್ರೋಟೀನ್‌ನ ಉತ್ತಮ ಮೂಲವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ, ಇದು ಮೂಳೆಗಳನ್ನು ಬಲಪಡಿಸುವ ಜೊತೆಗೆ ಕಬ್ಬಿಣ, ಸತು, ಜೀವಸತ್ವಗಳು ಮತ್ತು ಅಗತ್ಯವಾದ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ ಮತ್ತು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಆದರೆ ನೀವು ಪ್ರತಿದಿನ ಮಾಂಸವನ್ನು ತಿನ್ನುವ ಜನರಲ್ಲಿ ಒಬ್ಬರಾಗಿದ್ದರೆ, ಇಂದೇ ಈ ಅಭ್ಯಾಸವನ್ನು ಬದಲಾಯಿಸಿ, ಇಲ್ಲದಿದ್ದರೆ ನೀವು ಹೃದ್ರೋಗ, ಮಧುಮೇಹ ಮತ್ತು ನ್ಯುಮೋನಿಯಾದಂತಹ 9 ಅಪಾಯಕಾರಿ ಕಾಯಿಲೆಗಳಿಗೆ ಬಲಿಯಾಗಬಹುದು ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.  

2 /4

ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಜರ್ನಲ್ ಆಫ್ ಬಿಎಂಸಿ ಮೆಡಿಸಿನ್‌ನಲ್ಲಿ ಪ್ರಕಟವಾದ ಈ ಹೊಸ ಅಧ್ಯಯನವು, ಯಾವುದೇ ಒಬ್ಬ ವ್ಯಕ್ತಿಯು ವಾರಕ್ಕೆ 3 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕೆಂಪು ಮಾಂಸ, ಸಂಸ್ಕರಿಸಿದ ಮಾಂಸ ಸೇವಿಸುತ್ತಿದ್ದರೆ ಮತ್ತು ಚಿಕನ್ (Chicken), ಮಟನ್ ಸೇರಿದಂತೆ ವಿವಿಧ ಬಗೆಯ  ಮಾಂಸವನ್ನು ಸೇವಿಸಿದರೆ 9 ವಿವಿಧ ರೀತಿಯ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಮಾಂಸವನ್ನು ಸೇವಿಸುವುದರಿಂದ ಕರುಳಿನ ಕ್ಯಾನ್ಸರ್ (Cancer) ಅಪಾಯವನ್ನು ಹೆಚ್ಚಿಸುತ್ತದೆ ಎಂದು ಮೊದಲು ನಡೆಸಿದ ಅನೇಕ ಅಧ್ಯಯನಗಳು ಮತ್ತು ಸಂಶೋಧನೆಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಅಧ್ಯಯನದಲ್ಲಿ ಮೊದಲ ಬಾರಿಗೆ, ಅಧಿಕ ಮಾಂಸ ಸೇವನೆಯು ಆ 25 ಕ್ಯಾನ್ಸರ್ ಅಲ್ಲದ ಕಾಯಿಲೆಗಳಿಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ - ಈ ಆಹಾರ ಸೇವಿಸುವುದರಿಂದ ಕ್ಷಣದಲ್ಲಿ ನಿವಾರಣೆಯಾಗುತ್ತೆ ನಿಮ್ಮ Acidity ಸಮಸ್ಯೆ

3 /4

ಸಂಶೋಧಕರ ಈ ಸಂಶೋಧನೆಯೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ (World Health Organization) ಸಹ ಹೆಚ್ಚಿನ ಮಾಂಸವನ್ನು ವಿಶೇಷವಾಗಿ ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಮಾಂಸವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಗಂಭೀರ ಹಾನಿಯಾಗಬಹುದು ಎಂದು ಹೇಳಿದೆ. ಈ ಅಧ್ಯಯನದಲ್ಲಿ ಬ್ರಿಟನ್‌ನ 4 ಲಕ್ಷ 75 ಸಾವಿರ ಮಧ್ಯವಯಸ್ಕ ಜನರನ್ನು ಸೇರಿಸಲಾಗಿದೆ. ಈ ಸಮಯದಲ್ಲಿ, ಸಂಶೋಧಕರು ಈ ಜನರ ಆಹಾರ ದಾಖಲೆಗಳು ಮತ್ತು ವೈದ್ಯಕೀಯ ದಾಖಲೆಗಳು ಮತ್ತು ಆಸ್ಪತ್ರೆ ದಾಖಲು ಮತ್ತು ಸಾವಿನ ಡೇಟಾವನ್ನು ಪರಿಶೀಲಿಸಿದರು. ಈ ಅಧ್ಯಯನವು 8 ವರ್ಷಗಳ ಕಾಲ ನಡೆಯಿತು. ಸರಾಸರಿ, ವಾರಕ್ಕೆ 3 ದಿನ ಅಥವಾ ಅದಕ್ಕಿಂತ ಹೆಚ್ಚು ಬಾರಿ ಮಾಂಸವನ್ನು ಸೇವಿಸುವವರು ಕಡಿಮೆ ಮಾಂಸವನ್ನು ಸೇವಿಸಿದವರಿಗಿಂತ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಇದನ್ನೂ ಓದಿ - Weight Loss Tips: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ ಈ 5 ಹಣ್ಣುಗಳಿಂದ ದೂರವಿರಿ

4 /4

ಸಂಸ್ಕರಿಸದ ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಮಾಂಸ ಅತಿಯಾಗಿ ತಿನ್ನುವವರಿಗೆ ರಕ್ತಕೊರತೆಯ ಹೃದಯ ಕಾಯಿಲೆ, ನ್ಯುಮೋನಿಯಾ, ಡೈವರ್ಟಿಕ್ಯುಲರ್ ಕಾಯಿಲೆ, ಕೊಲೊನ್ ಪಾಲಿಪ್ಸ್ ಮತ್ತು ಮಧುಮೇಹ ಬರುವ ಅಪಾಯ ಹೆಚ್ಚು. ಆದರೆ ಹೆಚ್ಚು ಕೋಳಿ ಮಾಂಸವನ್ನು ಸೇವಿಸಿದವರಿಗೆ ಗ್ಯಾಸ್ಟ್ರೊ-ಅನ್ನನಾಳದ ರಿಫ್ಲಕ್ಸ್ ಕಾಯಿಲೆ (GERD), ಜಠರದುರಿತ, ಡಿಯೋಡೆನಿಟಿಸ್, ಡೈವರ್ಟಿಕ್ಯುಲರ್ ಕಾಯಿಲೆ, ಪಿತ್ತಕೋಶದ ಕಾಯಿಲೆ ಮತ್ತು ಮಧುಮೇಹ (Diabetes) ಬರುವ ಅಪಾಯ ಹೆಚ್ಚು. ಪ್ರತಿದಿನ 70 ಗ್ರಾಂ ಸಂಸ್ಕರಿಸದ ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಮಾಂಸವನ್ನು ಸೇವಿಸುವವರಿಗೆ ಹೃದ್ರೋಗದ ಅಪಾಯವು 15 ಪ್ರತಿಶತ ಮತ್ತು ಮಧುಮೇಹದ ಅಪಾಯವು 30 ಪ್ರತಿಶತದಷ್ಟಿರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. (ಗಮನಿಸಿ: ಯಾವುದೇ ಪರಿಹಾರವನ್ನು ತೆಗೆದುಕೊಳ್ಳುವ ಮೊದಲು ಯಾವಾಗಲೂ ತಜ್ಞ ಅಥವಾ ವೈದ್ಯರನ್ನು ಸಂಪರ್ಕಿಸಿ. ಜೀ ನ್ಯೂಸ್ ಈ ಮಾಹಿತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.) ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.