CoWin: ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕರೋನಾ ಲಸಿಕೆ, ಒಂದೇ ದಿನದಲ್ಲಿ ಕೋಟಿಗೂ ಹೆಚ್ಚು ನೋಂದಣಿ

ಭಾರತದಲ್ಲಿ ಕರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಮಾರೋಪಾದಿಯಲ್ಲಿ ಪ್ರಯತ್ನಗಳು ಮುಂದುವರೆದಿದೆ. ಈ ಸರಣಿಯಲ್ಲಿ, ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕರೋನಾ ಲಸಿಕೆ ಪಡೆಯಬಹುದು ಎಂದು ಸರ್ಕಾರ ಘೋಷಿಸಿದೆ, ಇದಕ್ಕಾಗಿ ಬುಧವಾರದಿಂದ ನೋಂದಣಿ ಪ್ರಾರಂಭವಾಯಿತು.

Written by - Yashaswini V | Last Updated : Apr 29, 2021, 07:55 AM IST
  • ಮೂರನೇ ಹಂತದಲ್ಲಿ ಕರೋನಾ ಲಸಿಕೆಗಾಗಿ ಬುಧವಾರದಿಂದ ನೋಂದಣಿ ಪ್ರಾರಂಭವಾಯಿತು
  • ಲಸಿಕೆಗಾಗಿ ಕೋವಿನ್ ಮತ್ತು ಆರೋಗ್ಯಾ ಸೇತು ಅಪ್ಲಿಕೇಶನ್‌ನಲ್ಲಿ ಆನ್‌ಲೈನ್ ನೋಂದಣಿ ಕಡ್ಡಾಯ
  • ಮೊದಲ ದಿನವೇ ದಾಖಲೆಯ ಮಟ್ಟದಲ್ಲಿ ನೋಂದಣಿ
CoWin: ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕರೋನಾ ಲಸಿಕೆ, ಒಂದೇ ದಿನದಲ್ಲಿ ಕೋಟಿಗೂ ಹೆಚ್ಚು ನೋಂದಣಿ title=
Covid Vaccination

ನವದೆಹಲಿ: ಭಾರತದಲ್ಲಿ ಕರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು ಯುದ್ಧದ ಹಾದಿಯಲ್ಲಿ ಪ್ರಯತ್ನಗಳು ಮುಂದುವರೆದಿದೆ. ಈ ಮಧ್ಯೆ ಮೇ 1 ರಿಂದ ಮೂರನೇ ಹಂತದ ವ್ಯಾಕ್ಸಿನೇಷನ್ ಅಭಿಯಾನ ಆರಂಭವಾಗಲಿದ್ದು ಈ ಸಮಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುವುದಾಗಿ ಸರ್ಕಾರ ಘೋಷಿಸಿದೆ.

ಮೂರನೇ ಹಂತದಲ್ಲಿ ಕರೋನಾ ಲಸಿಕೆಗಾಗಿ ಬುಧವಾರದಿಂದ ನೋಂದಣಿ ಪ್ರಾರಂಭವಾಯಿತು. ಲಸಿಕೆಗಾಗಿ ಕೋವಿನ್ (CoWin) ಮತ್ತು ಆರೋಗ್ಯಾ ಸೇತು ಅಪ್ಲಿಕೇಶನ್‌ನಲ್ಲಿ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ಮೊದಲ ದಿನವೇ ದಾಖಲೆಯ ಸಂಖ್ಯೆಯ ಜನರು ನೋಂದಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ - Corona ಯುಗದಲ್ಲಿ ನಿಮ್ಮ ಬಳಿಯೂ ಇರಲಿ ಈ Health Gadgets

ಮೊದಲ ದಿನ ಒಂದು ಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ:
ವ್ಯಾಕ್ಸಿನೇಷನ್ (Corona Vaccination) ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಮುಖ ಹೆಜ್ಜೆಯಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿರುವ MyGovIndia, ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ಗಾಗಿ 10 ದಶಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ - Pulse Oximeter: ಆಕ್ಸಿಮೀಟರ್ ಸಿಗುತ್ತಿಲ್ಲವೇ? ಚಿಂತಿಸಬೇಡಿ, ಇಲ್ಲಿದೆ ಅಗ್ಗದ ಆಯ್ಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಮಾಹಿತಿಯ ಪ್ರಕಾರ, ಅಪ್ಲಿಕೇಶನ್ ಕ್ರ್ಯಾಶ್‌ಗಳ ದೂರುಗಳು ಸಹ ಹಲವು ಬಾರಿ ಕೇಳಿಬಂದವು. ಸೋಶಿಯಲ್ ಮೀಡಿಯಾದಲ್ಲಿ ಜನರು ಈ ಬಗ್ಗೆ ದೂರು ನೀಡಿದ್ದಾರೆ. ಮೇ 1 ರಿಂದ 18 ವರ್ಷ ವಯಸ್ಸಿನವರಿಗೆ ಕರೋನಾವೈರಸ್ ಲಸಿಕೆ ಹಾಕಲಾಗುತ್ತದೆ. ಆದರೆ ಇದಕ್ಕಾಗಿ ಅವರು ಕೋವಿನ್ ಮತ್ತು ಆರೋಗ್ಯಾ ಸೇತು ಅಪ್ಲಿಕೇಶನ್ಗಳಲ್ಲಿ ನೋಂದಾಯಿಸಿಕೊಳ್ಳಬೇಕು.
ಅಪ್ಲಿಕೇಶನ್ ಹಲವು ಬಾರಿ ಕ್ರ್ಯಾಶ್ ಆಗಿದೆ:

 

Trending News