ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ನಿಮ್ಮ ಆಹಾರದಲ್ಲಿರಲಿ ಈ ಐದು ವಸ್ತುಗಳು

Foods For Premature White Hair Problem:  ಇತ್ತೀಚಿನ ದಿನಗಳಲ್ಲಿ ಬಿಡುವಿಲ್ಲದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿಯೂ ಕೂದಲಿನ ಆರೋಗ್ಯ ಹಾಳಾಗುತ್ತದೆ. 

Foods For Premature White Hair Problem:  40 ರಿಂದ 45 ವರ್ಷ ವಯಸ್ಸಿನಲ್ಲಿ ತಲೆಯಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುವುದು  ದೊಡ್ಡ ವಿಷಯವಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ವಯಸ್ಸಾದವರಲ್ಲಿ ಮಾತ್ರವಲ್ಲ ಯುವಕರಲ್ಲೂ ಕಾಣಿಸಿಕೊಳ್ಳುತ್ತಿದೆ. ನಮ್ಮ ಕೂದಲಿನಲ್ಲಿ ಮೆಲನಿನ್ ಎಂಬ ವರ್ಣದ್ರವ್ಯವಿರುತ್ತದೆ. ಇದು ವಯಸ್ಸಾದಂತೆ ಕಡಿಮೆಯಾಗುವುದರಿಂದ ಕೂದಲು ಬೆಳ್ಳಗಾಗಲು ಆರಂಭವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಿಡುವಿಲ್ಲದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿಯೂ ಕೂದಲಿನ ಆರೋಗ್ಯ ಹಾಳಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಬ್ರೋಕೊಲಿ :  ಬ್ರೋಕೊಲಿಯನ್ನು ಅತ್ಯಂತ ಆರೋಗ್ಯಕರ ತರಕಾರಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಫೋಲಿಕ್ ಆಮ್ಲ ಸಮೃದ್ಧವಾಗಿರುತ್ತದೆ. ಇದು ಕೂದಲು ಬೇಗನೇ ಬಿಳಿಯಾಗುವುದನ್ನು ತಡೆಯುತ್ತದೆ. 

2 /5

ಕರಿಬೇವಿನ ಎಲೆಗಳು : ಇದರಲ್ಲಿ ಫೋಲಿಕ್ ಆಸಿಡ್ ಮತ್ತು ಕಬ್ಬಿಣಾಂಶ ಹೇರಳವಾಗಿ ದೊರೆಯುತ್ತದೆ. ಅದಕ್ಕಾಗಿಯೇ ಹೆಚ್ಚಿನ ಆಹಾರದಲ್ಲಿ ಈ ಕರಿಬೇವಿನ ಎಲೆಯನ್ನು ಬಳಸಿದರೆ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗಲು ಪ್ರಾರಂಭಿಸುತ್ತದೆ.  

3 /5

ಹಸಿರು ಎಲೆಗಳ ತರಕಾರಿಗಳು: ಇವುಗಳು ಫೋಲಿಕ್ ಆಮ್ಲದ ಸಮೃದ್ಧ ಮೂಲವಾಗಿದೆ. ಇದರ ಸಹಾಯದಿಂದ ಕೂದಲು ಬಿಳಿಯಾಗುವುದನ್ನು  ತಡೆಯಬಹುದು. ಇದಕ್ಕಾಗಿ ದೈನಂದಿನ ಆಹಾರದಲ್ಲಿ ಪಾಲಕ್,ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪನ್ನು ಸೇರಿಸಬೇಕು. 

4 /5

 ಐರನ್ ಹೆಚ್ಚಿರುವ ಆಹಾರ :  ನಮ್ಮ ದೇಹದಲ್ಲಿ  ಐರನ್ ಮತ್ತು ಕಾಪರ್ ನಂತಹ ಪ್ರಮುಖ ಪೋಷಕಾಂಶಗಳ ಕೊರತೆಯಿಂದಾಗಿ ಕೂದಲು ಚಿಕ್ಕ ವಯಸ್ಸಿನಲ್ಲಿಯೇ  ಬಿಳಿಯಾಗುತ್ತದೆ. ಇದಕ್ಕಾಗಿ ಅಣಬೆ, ಆಲೂಗಡ್ಡೆ, ವಾಲ್ ನಟ್ಸ್ ಮುಂತಾದವುಗಳನ್ನು ಆಹಾರದಲ್ಲಿ ಸೇರಿಸಿ.

5 /5

ಬ್ಲೂಬೆರ್ರಿ: ಬಿಳಿ ಕೂದಲು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಬೇಕಾದರೆ ಸತು, ಅಯೋಡಿನ್ ಮತ್ತು ವಿಟಮಿನ್ ಬಿ 12 ನಂತಹ ಪ್ರಮುಖ ಪೋಷಕಾಂಶಗಳನ್ನು ಹೊಂದಿರುವ ಬೆರಿಹಣ್ಣುಗಳನ್ನು ಸೇವಿಸಿ.    ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)