ಮದುವೆಗೂ ಮುನ್ನ 3-4 ಜನರ ಜೊತೆ ಡೇಟಿಂಗ್; ವಿರಾಟ್ ಕೊಹ್ಲಿ ಅನುಷ್ಕಾರಿಗೆ ಫಸ್ಟ್ ಲವ್ ಅಲ್ಲ!

Bollywood celebrity gossip: ಆ್ಯಡ್‌ ಶೂಟ್‌ವೊಂದರ ಮೂಲಕ ನಟಿ ಅನುಷ್ಕಾ ಕೊಹ್ಲಿಗೆ ಪರಿಚಯವಾದರು. ಈ ಪರಿಚಯವೇ ನಂತರ ಪ್ರೀತಿಗೆ ತಿರುಗಿತು. 2017ರ ಡಿಸೆಂಬರ್‌ 21ರಂದು ಕೊಹ್ಲಿ ಮತ್ತು ಅನುಷ್ಕಾ ವಿವಾಹವಾದರು. ಮದುವೆಗೂ ಮುನ್ನ ಈ ಜೋಡಿ ಕೆಲ ವರ್ಷಗಳ ಕಾಲ ಪರಸ್ಪರ ಡೇಟಿಂಗ್ ನಡೆಸಿತು.

Virat Kohli-Anushka Sharma: ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌, ರನ್‌ ಮಷಿನ್‌ ಖ್ಯಾತಿಯ ವಿರಾಟ್ ಕೊಹ್ಲಿಯನ್ನು ಮದುವೆಯಾಗುವ ಮೊದಲು, ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಅವರ ಹೆಸರು ಅನೇಕರೊಂದಿಗೆ ತಳುಕು ಹಾಕಿಕೊಂಡಿತ್ತು. ಆ್ಯಡ್‌ ಶೂಟ್‌ವೊಂದರ ಮೂಲಕ ನಟಿ ಅನುಷ್ಕಾ ಕೊಹ್ಲಿಗೆ ಪರಿಚಯವಾದರು. ಈ ಪರಿಚಯವೇ ನಂತರ ಪ್ರೀತಿಗೆ ತಿರುಗಿತು. 2017ರ ಡಿಸೆಂಬರ್‌ 21ರಂದು ಕೊಹ್ಲಿ ಮತ್ತು ಅನುಷ್ಕಾ ವಿವಾಹವಾದರು. ಮದುವೆಗೂ ಮುನ್ನ ಈ ಜೋಡಿ ಕೆಲ ವರ್ಷಗಳ ಕಾಲ ಪರಸ್ಪರ ಡೇಟಿಂಗ್ ನಡೆಸಿತು. ಡೇಟಿಂಗ್ ಮಾಡಿದ ನಂತರವೇ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಈ ಜೋಡಿಯ ಪ್ರೀತಿಯ ದ್ಯೋತಕವಾಗಿ 2021ರಲ್ಲಿ ಪುತ್ರಿ ವಾಮಿಕಾ ಜನಿಸಿದಳು. ಕೊಹ್ಲಿಗಿಂತಲೂ ಮೊದಲು ನಟಿ ಅನುಷ್ಕಾರ ಹೆಸರು ಯಾರ್ಯಾರ ಜೊತೆ ಥಳಕು ಹಾಕಿಕೊಂಡಿತ್ತು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಅನುಷ್ಕಾ ಶರ್ಮಾ ಆರಂಭಿಕ ದಿನಗಳಲ್ಲಿ ಜೋಹೆಬ್ ಯೂಸುಫ್ ಎಂಬುವರ ಜೊತೆ ಸಂಬಂಧ ಹೊಂದಿದ್ದಳಂತೆ. ಫ್ಯಾಷನ್ ಶೋವೊಂದರಲ್ಲಿ ಇಬ್ಬರೂ ಭೇಟಿಯಾದರು. ಅನುಷ್ಕಾ ರನ್ನು ಮುಂಬೈಗೆ ಕರೆತಂದಿದ್ದೇ ಈ ಜೋಹೆಬ್ ಎಂದು ಹೇಳಲಾಗಿದೆ. ವೃತ್ತಿಜೀವನ ಸಂಬಂಧ ಈ ಜೋಡಿ ಪರಸ್ಪರ ದೂರವಾಗುವಂತಾಯಿತು ಎಂದು ಹೇಳಲಾಗಿದೆ. 

2 /6

ಜೋಹೆಬ್ ಯೂಸುಫ್‌ನಿಂದ ದೂರವಾದ ಬಳಿಕ ಅನುಷ್ಕಾ ಹಲವಾರು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದರು. "ಬ್ಯಾಂಡ್ ಬಾಜಾ ಬಾರಾತ್" ಚಿತ್ರದ ಮೂಲಕ ಅನುಷ್ಕಾಗೆ ರಣವೀರ್‌ ಸಿಂಗ್‌ ಪರಿಚಯವಾಯಿತು. ಈ ಸಿನಿಮಾದ ಎಲೆಕ್ಟ್ರಿಫೈಯಿಂಗ್ ಕೆಮಿಸ್ಟ್ರಿಯ ಮೂಲಕ ಈ ಜೋಡಿಯ ಆನ್-ಸ್ಕ್ರೀನ್ ಪ್ರಣಯವು ಆಫ್-ಸ್ಕ್ರೀನ್ ಸಂಬಂಧದ ವದಂತಿಗಳನ್ನು ಹುಟ್ಟುಹಾಕಿತ್ತು. ಈ ಜೋಡಿ ಡೇಟಿಂಗ್‌ ನಡೆಸುತ್ತಿದೆ ಎಂದು ಗಾಸಿಪ್‌ ಹರಡಿತು. ನಂತರ ಜೋಯಾ ಅಖ್ತರ್ ಅವರ "ದಿಲ್ ಧಡಕ್ನೆ ದೋ"ನಲ್ಲಿ ಈ ಜೋಡಿ ತೆರೆಯ ಮೇಲೆ ಮತ್ತೆ ಒಂದಾಯಿತು. ಆದರೆ ಈ ಜೋಡಿ ಎಂದಿಗೂ ತಮ್ಮ ಡೇಟಿಂಗ್‌ ಬಗ್ಗೆ ಅಧಿಕೃತ ಹೇಳಿಕೆ ನೀಡಲಿಲ್ಲ. 

3 /6

ರಣವೀರ್‌ ಸಿಂಗ್‌ ಬಳಿಕ ಅನುಷ್ಕಾ ಶರ್ಮಾರ ಹೆಸರು ನಟ ಶಾಹಿದ್ ಕಪೂರ್ ಜೊತೆಗೆ ಥಳಕು ಹಾಕಿಕೊಂಡಿತ್ತು. "ಬದ್ಮಾಶ್ ಕಂಪನಿ" ಚಿತ್ರೀಕರಣದ ಸಮಯದಲ್ಲಿ ಈ ಜೋಡಿ ಡೇಟಿಂಗ್‌ ನಡೆಸುತ್ತಿದೆ ಎಂಬ ಗಾಳಿಸುದ್ದಿ ಹರಡಿತ್ತು. ಆದರೆ ಈ ಜೋಡಿ ಈ ಬಗ್ಗೆ ಯಾವುದೇ ರೀತಿ ಅಧಿಕೃತ ಹೇಳಿಕೆ ನೀಡಿಲಿಲ್ಲ.  

4 /6

ಶಾಹಿದ್‌ ಕಪೂರ್‌ ನಂತರ ಅನುಷ್ಕಾ ಶರ್ಮಾರ ಹೆಸರು ನಟ ರಣಬೀರ್ ಕಪೂರ್ ಜೊತೆಗೆ ಥಳಕು ಹಾಕಿಕೊಂಡಿತ್ತು. ಈ ಜೋಡಿ ಒಟ್ಟಿಗೆ ಸುತ್ತಾಡುತ್ತಿರುವ ಸುದ್ದಿ ಸಖತ್‌ ಸೌಂಡ್‌ ಮಾಡಿತ್ತು. ಈ ಜೋಡಿ ಡೇಟಿಂಗ್‌ ಮಾಡುತ್ತಿರುವ ಬಗ್ಗೆ ಅನೇಕ ಬಾರಿ ಸುದ್ದಿಯಾಗಿತ್ತು. ಆದರೆ ಇವರಿಬ್ಬರ ಸಂಬಂಧದ ಸತ್ಯವು ನಿಗೂಢವಾಗಿಯೇ ಉಳಿಯಿತು.

5 /6

ಭಾರತೀಯ ಕ್ರಿಕೆಟ್‌ ಸುರೇಶ್‌ ರೈನಾರ ಜೊತೆಗೂ ನಟಿ ಅನುಷ್ಕಾರ ಹೆಸರು ಥಳಕು ಹಾಕಿಕೊಂಡಿತ್ತು. ಈ ಜೋಡಿ ಪರಸ್ಪರ ಡೇಟಿಂಗ್‌ ನಡೆಸುತ್ತಿದೆ ಅಂತಾ ಸಖತ್‌ ಸುದ್ದಿಯಾಗಿತ್ತು. ಒಂದು ಹಂತದಲ್ಲಿ ಅನುಷ್ಕಾಳನ್ನು ರೈನಾ ಮದುವೆ ಆಗುತ್ತಾರೆಂದು ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಈ ಜೋಡಿ ಯಾವುದೇ ರೀತಿ ಅಧಿಕೃತ ಹೇಳಿಕೆ ನೀಡಲಿಲ್ಲ. ಇದು ಗಾಳಿಸುದ್ದಿ ಅಷ್ಟೇ ಎಂಬ ವಿಚಾರ ಹೊರಬಂದಿತು.

6 /6

ರಣವೀರ್ ಸಿಂಗ್ ಜೊತೆಗಿನ ಬ್ರೇಕಪ್ ನಂತರ ಅನುಷ್ಕಾ ಶರ್ಮಾ ಅವರು ನಟ ಅರ್ಜುನ್ ಕಪೂರ್‌ಗೆ ಹತ್ತಿರವಾದರು. ಈ ಜೋಡಿಯ ಸ್ನೇಹವು ಎಂದಿಗೂ ಪ್ರಣಯ ಸಂಬಂಧವಾಗಿ ಬೆಳೆಯಲಿಲ್ಲ. ಇವರಿಬ್ಬರೂ ಸೌಹಾರ್ದಯುತ ಸಂಬಂಧ ಉಳಿಸಿಕೊಂಡು ವೃತ್ತಿಪರವಾಗಿ ಪರಸ್ಪರ ಬೆಂಬಲಿಸುವುದನ್ನು ಮುಂದುವರೆಸಿದರು.