Russia Ukraine war : ರಷ್ಯಾದ ಪಡೆಗಳು ಉಕ್ರೇನ್ನ ಮೇಲೆ ಆಕ್ರಮಣ ಮಾಡಿ ಆರು ತಿಂಗಳು ಕಳೆದಿವೆ. ದೈನಂದಿನ ವೈಮಾನಿಕ ದಾಳಿಗಳನ್ನ ಉಕ್ರೇನಿಯನ್ನರು ಎದುರಿಸುತ್ತಿದ್ದಾರೆ.
Russia Ukraine war : ರಷ್ಯಾದ ಪಡೆಗಳು ಉಕ್ರೇನ್ನ ಮೇಲೆ ಆಕ್ರಮಣ ಮಾಡಿ ಆರು ತಿಂಗಳು ಕಳೆದಿವೆ. ದೈನಂದಿನ ವೈಮಾನಿಕ ದಾಳಿಗಳನ್ನ ಉಕ್ರೇನಿಯನ್ನರು ಎದುರಿಸುತ್ತಿದ್ದಾರೆ. ಉಕ್ರೇನ್ನ ಪೂರ್ವ ಮತ್ತು ದಕ್ಷಿಣದ ಹೆಚ್ಚಿನ ಭಾಗಗಳು ರಷ್ಯಾದ ನಿಯಂತ್ರಣದಲ್ಲಿ ಉಳಿದಿವೆ. ಪಾಶ್ಚಿಮಾತ್ಯ ನಿರ್ಬಂಧಗಳ ಪರಿಣಾಮವಾಗಿ ರಷ್ಯಾ ಕೂಡ ನರಳುತ್ತಿದೆ, ಆದರೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ನಿಲುವನ್ನು ಹಿಂತೆಗೆದುಕೊಂಡಿಲ್ಲ. ಈ ಆರು ತಿಂಗಳುಗಳಲ್ಲಿ ಯುದ್ಧ ತಂದಿಟ್ಟ ಅನಾಹುತ ಅಷ್ಟಿಷ್ಟಲ್ಲ. ಸಾವು, ನೋವು ತುಂಬಿದ ಈ ಯುದ್ಧದ ದೃಶ್ಯಗಳು ಕಣ್ಣಾಲೆಯನ್ನು ಒದ್ದೆ ಮಾಡುತ್ತವೆ. ಕರುಳು ಹಿಂಡುವಂತಿರುವ ಈ ಫೋಟೋಗಳು ಯುದ್ಧದ ಭೀಕರ ಪರಿಣಾಮ ಹೇಗಿರಬಹುದು ಎಂಬುದಕ್ಕೆ ಸಾಕ್ಷಿಯಾಗಿವೆ.
Russia Ukraine war : ರಷ್ಯಾ-ಉಕ್ರೇನ್ ಕದನಕ್ಕೆ 6 ತಿಂಗಳು ಪೂರ್ಣಗೊಂಡಿದ್ದು, ಆದರೂ ಈ ಯುದ್ಧ ಯಾವುದೇ ನಿರ್ಣಾಯಕ ಹಂತ ತಲುಪಿಲ್ಲ.
Russia Ukraine war : ಕೀವ್, ಖಾರ್ಕೀವ್ನಿಂದ ರಷ್ಯಾ ಪಡೆಯನ್ನು ಉಕ್ರೇನ್ ಹೊರಗಟ್ಟಿದ್ದು, ಡೊನ್ಬಾಸ್, ಮರಿಯುಪೋಲ್ ರಷ್ಯಾ ವಶದಲ್ಲಿದೆ.
Russia Ukraine war : ಸುಲಭ ಜಯದ ನಿರೀಕ್ಷೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಫೆಬ್ರವರಿ 24 ರಂದು ಅಪ್ರಚೋದಿತ ಯುದ್ಧ ಸಾರಿದ್ದರು.
Russia Ukraine war : 2ನೇ ಮಹಾಯುದ್ಧ ಬಳಿಕ ನಡೆದ ಅತಿದೊಡ್ಡ ಯುದ್ಧ ಎನಿಸಿಕೊಂಡಿತು ಈ ರಷ್ಯಾ - ಉಕ್ರೇನ್ ಸಮರ.
Russia Ukraine war : ಕಳೆದ 6 ತಿಂಗಳ ಹಿಂದೆ ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ಈಗಾಗಲೇ ಬಹುತೇಕ ಪ್ರದೇಶಗಳನ್ನು ವಶಕ್ಕೆ ಪಡೆದಿದೆ.
Russia Ukraine war : ಉಕ್ರೇನ್ನ ಪ್ರತಿಹೋರಾಟದ ನಡುವೆ ಕೀವ್ ಸೇರಿದಂತೆ ಕೆಲ ನಗರಗಳು ಉಳಿದುಕೊಂಡಿವೆ.
Russia Ukraine war : ಆದರೆ ಪ್ರತಿನಿತ್ಯ ರಷ್ಯಾ ಸೈನ್ಯ ಆಗೊಂದು ಈಗೊಂದು ಸಣ್ಣಪುಟ್ಟ ದಾಳಿ ಮಾಡುತ್ತಿವೆ.
Russia Ukraine war : ಪಾಶ್ಚಿಮಾತ್ಯ ನಿರ್ಬಂಧಗಳ ಪರಿಣಾಮವಾಗಿ ರಷ್ಯಾ ಕೂಡ ನರಳುತ್ತಿದೆ, ಆದರೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ನಿಲುವನ್ನು ಹಿಂತೆಗೆದುಕೊಂಡಿಲ್ಲ.
Russia Ukraine war : ಸೋವಿಯತ್ ಅಳ್ವಿಕೆಯಿಂದ ಹೊರಬಂದು ಸ್ವಾತಂತ್ರ್ಯ ಪಡೆದ ಉಕ್ರೇನ್ಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಸಹ ರಷ್ಯಾ ಅವಕಾಶ ಕೊಡಲಿಲ್ಲ.
Russia - Ukraine war : ಈ ಆರು ತಿಂಗಳುಗಳಲ್ಲಿ ಯುದ್ಧ ತಂದಿಟ್ಟ ಅನಾಹುತ ಅಷ್ಟಿಷ್ಟಲ್ಲ. ಸಾವು, ನೋವು ತುಂಬಿದ ಈ ಯುದ್ಧದ ದೃಶ್ಯಗಳು ಕಣ್ಣಾಲೆಯನ್ನು ಒದ್ದೆ ಮಾಡುತ್ತವೆ.