ಈ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ವಿಟಮಿನ್ ಬಿ 12 ಮತ್ತು ಡಿ 3 ಕೊರತೆ .!

ವಿಟಮಿನ್ ಡಿ 3 ಮತ್ತು ವಿಟಮಿನ್ ಬಿ 12 ಎರಡೂ ದೇಹಕ್ಕೆ ಬಹಳ ಮುಖ್ಯ. ನಾವು ವಿಟಮಿನ್ ಡಿ 3 ಬಗ್ಗೆ ಹೇಳುವುದಾದರೆ, ಅದು ಬಿಳಿ ರಕ್ತ ಕಣಗಳನ್ನು ರಚಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ.

ಬೆಂಗಳೂರು : ವಿಟಮಿನ್ ಡಿ 3 ಮತ್ತು ವಿಟಮಿನ್ ಬಿ 12 ಎರಡೂ ದೇಹಕ್ಕೆ ಬಹಳ ಮುಖ್ಯ. ನಾವು ವಿಟಮಿನ್ ಡಿ 3 ಬಗ್ಗೆ ಹೇಳುವುದಾದರೆ, ಅದು ಬಿಳಿ ರಕ್ತ ಕಣಗಳನ್ನು ರಚಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ. ದೇಹದಲ್ಲಿ ಈ ವಿಟಮಿನ್ ಕೊರತೆಯಿದ್ದರೆ, ಈ ಎಲ್ಲಾ ಕಾರ್ಯಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಭಯಾನಕ ಕಾಯಿಲೆಗಳ ಅಪಾಯ ಎದುರಾಗಬಹುದು. ವಿಟಮಿನ್ ಬಿ12 ಕೊರತೆಯಿಂದ ದೇಹದಲ್ಲಿ ಶಕ್ತಿಯ ಕೊರತೆ ಉಂಟಾಗಬಹುದು, ಕಾರ್ಬೋಹೈಡ್ರೇಟ್‌ಗಳ ಚಯಾಪಚಯ ಕ್ರಿಯೆಗೆ ತೊಂದರೆಯಾಗಬಹುದು. ಕರುಳಿನ ಕಾರ್ಯಚಟುವಟಿಕೆಗೆ ಅಡ್ಡಿಯಾಗಬಹುದು. ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆಯೂ ಕಡಿಮೆಯಾಗಬಹುದು. ಆದ್ದರಿಂದ, ಈ ವಿಟಮಿನ್‌ಗಳ ಉತ್ತಮ ಮೂಲಗಳ ಬಗ್ಗೆಯೂ ತಿಳಿದಿರಬೇಕು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಸಾಲ್ಮನ್‌ನಂತಹ ಮೀನುಗಳು ಎರಡೂ ರೀತಿಯ ವಿಟಮಿನ್‌ಗಳನ್ನು ಒಳಗೊಂಡಿರುತ್ತವೆ. ಇದರಲ್ಲಿರುವ ಪೌಷ್ಟಿಕಾಂಶಗಳು ಮೆದುಳಿಗೆ ಪ್ರಯೋಜನಕಾರಿಯಾಗಿ ಕಂಡುಬರುತ್ತವೆ. 

2 /5

ಅನೇಕ ವಿಧದ ವಿಟಮಿನ್ ಗಳು ಖನಿಜಗಳು ಮತ್ತು ಪ್ರೋಟೀನ ಗಳು ಮೊಟ್ಟೆಯ ಹಳದಿ ಲೋಳೆಯಲ್ಲಿ ಕಂಡುಬರುತ್ತವೆ. ಈ ಎರಡೂ ವಿಟಮಿನ್ ಗಳು ಮೊಟ್ಟೆಗಳಲ್ಲಿಯೂ ಕಂಡುಬರುತ್ತವೆ. ಆದ್ದರಿಂದ, ಎರಡೂ ವಿಟಮಿನ್ ಗಳನ್ನು ಮೊಟ್ಟೆಯ ಬುರ್ಜಿ,  ಆಮ್ಲೆಟ್ ರೂಪದಲ್ಲಿ ಸೇವಿಸಬಹುದು.

3 /5

ಮೊಸರಿನಲ್ಲಿ ಪ್ರೋಟೀನ್‌ನ ಜೊತೆಗೆ ವಿಟಮಿನ್ ಡಿ ಮತ್ತು ಬಿ 12 ಸಹ ಕಂಡುಬರುತ್ತದೆ.  

4 /5

ಸಸ್ಯಾಹಾರಿಗಳಿಗೆ ಸೋಯಾ ಹಾಲು ಈ ಎರಡೂ ವಿಟಮಿನ್‌ಗಳ ಉತ್ತಮ ಮೂಲವಾಗಿದೆ. ಇದು ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಅನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

5 /5

 ಬಂಗುಡೆ ಮೀನುಗಳನ್ನು ವಿಟಮಿನ್‌ಗಳ ಉತ್ತಮ ಮೂಲವೆಂದು  ಹೇಳಲಾಗುತ್ತದೆ.  ದೇಹದಲ್ಲಿನ ವಿಟಮಿನ್ ಡಿ 3 ಮತ್ತು ಬಿ 12 ಕೊರತೆಯನ್ನು ಪೂರೈಸಲು ಇದನ್ನು ಸೇವಿಸಿ. ಮೀನು ತಿನ್ನಲು ಇಷ್ಟವಿಲ್ಲದಿದ್ದರೆ, ಕಾಡ್ ಲಿವರ್ ಎಣ್ಣೆಯನ್ನು ತೆಗೆದುಕೊಳ್ಳಿ.