ಸಂಖ್ಯೆಯಲ್ಲೇನಿದೆ ? ತಿರುಪತಿ ತಿಮ್ಮಪ್ಪನಿಗೆ 1,11,11,111 ರೂಪಾಯಿ ಚೆಕ್ ಕೊಟ್ಟ ಹುಬ್ಬಳ್ಳಿಯ ಭಕ್ತ


ದಕ್ಷಿಣ ಭಾರತದಲ್ಲಿರುವ  ವಿಷ್ಣುವಿನ ಪ್ರಮುಖ ದೇವಾಲಯಗಳಲ್ಲಿ ಶ್ರೀ ತಿರುಪತಿ ತಿರುಮಲ ಬಾಲಾಜಿ ದೇವಾಲಯಕ್ಕೆ  ವಿಶೇಷ ಸ್ಥಾನಮಾನವಿದೆ. 

ತಿರುಪತಿ: ದಕ್ಷಿಣ ಭಾರತದಲ್ಲಿರುವ  ವಿಷ್ಣುವಿನ ಪ್ರಮುಖ ದೇವಾಲಯಗಳಲ್ಲಿ ಶ್ರೀ ತಿರುಪತಿ ತಿರುಮಲ ಬಾಲಾಜಿ ದೇವಾಲಯಕ್ಕೆ (TTD) ವಿಶೇಷ ಸ್ಥಾನಮಾನವಿದೆ.  ಸಪ್ತಗಿರಿ ಮೇಲೆ ನೆಲೆಗೊಂಡಿರುವ  ಈ ದೇವಾಲಯವು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತಾಧಿಗಳು, ತಿಮ್ಮಪ್ಪನ ದರ್ಶನ (Timmappa Darshan) ಪಡೆದು ಪುನೀತರಾಗುತ್ತಾರೆ. ಗಣ್ಯಾತಿಗಣ್ಯರು ಕೂಡಾ ಇಲ್ಲಿಗೆ ಭೇಟಿ ನೀಡಿ ತಿಮ್ಮಪ್ಪನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಹರಕೆಯ ರೂಪದಲ್ಲಿ ಭಕ್ತರು ವೆಂಕಟೇಶ್ವರನಿಗೆ ಬೆಳ್ಳಿ, ಚಿನ್ನ ವಜ್ರಗಳ ಭರಣಗಳನ್ನು ಸಮರ್ಪಿಸುತ್ತಾರೆ.  ಅತ್ಯಂತ ಹೆಚ್ಚು ಆಭರಣಗಳನ್ನು ಹೊಂದಿರುವ ದೇವರು ತಿರುಪತಿ ತಿಮ್ಮಪ್ಪ ಎಂದೇ ಹೇಳಲಾಗುತ್ತದೆ.

1 /5

ತಿರುಪತಿಯ ಶ್ರೀ ಗೋವಿಂದರಾಜ ಸ್ವಾಮಿ ದೇವಸ್ಥಾನಕ್ಕೆ ಲಕ್ಷಾಂತರ  ಮೌಲ್ಯದ ಚಿನ್ನದ ಕಿರೀಟಗಳು ಮತ್ತು ಕಿವಿಯೋಲೆಗಳನ್ನು ಪ್ರದಾನ ಮಾಡಲಾಯಿತು.

2 /5

ಇಲ್ಲಿನ ದೇವಾಲಯಗಳಲ್ಲಿ ಕಾಲಕಾಲಕ್ಕೆ ಭಕ್ತರು ವೆಂಟೇಶ್ವರನಿಗೆ ಭೋಗ, ಬಟ್ಟೆ ಮತ್ತು ಆಭರಣಗಳನ್ನು ಸಮರ್ಪಿಸುತ್ತಾರೆ.

3 /5

ಹುಬ್ಬಳ್ಳಿಯ ಭಕ್ತರೊಬ್ಬರು,  ಎಸ್‌ವಿಬಿಸಿ (SVBC) ಟ್ರಸ್ಟ್ಗೆ ಒಂದು ಕೋಟಿಗೂ ಅಧಿಕ  ಮೊತ್ತದ ಚೆಕನ್ನು ನೀಡಿದ್ದಾರೆ. ಇವರು ದೇವರಿಗೆ ಒಂದು ಕೋಟಿ, 11 ಲಕ್ಷ, 11 ಸಾವಿರ, 111 ರೂಪಾಯಿಗಳನ್ನು ಅರ್ಪಿಸಿದ್ದಾರೆ, ಈ ಚೆಕ್ ಕೂಡಾ ಈಗ ಚರ್ಚೆಯ ವಿಷಯವಾಗಿದೆ. 

4 /5

ಕಳೆದ ತಿಂಗಳು ವೈಕುಂಠ ಏಕಾದಶಿ ಸಂದರ್ಭದಲ್ಲಿ ತಿರುಮಲ ಬೆಟ್ಟಗಳಲ್ಲಿ ಮೂರು ದಿನಗಳ ತಿರುಮಂಜನಂ ಆಯೋಜಿಸಲಾಗಿತ್ತು. ದೇವಾಲಯದ ಪ್ರತಿ ಹಬ್ಬದಲ್ಲೂ ದೇವಾಲಯವನ್ನು ವಿಶೇಷ  ರೀತಿಯಲ್ಲಿ ಶುಚಿಗೊಳಿಸಲಾಗುತ್ತದೆ.  

5 /5

ಕೋಟ್ಯಂತರ ಭಕ್ತರು ಶ್ರೀದೇವರ ದರ್ಶನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಅಲ್ಲದೆ ಇಲ್ಲಿ ದೇವರಿಗೆ ತಮ್ಮ ಮುಡಿಯನ್ನೂ ಸಮರ್ಪಿಸುತ್ತಾರೆ. ಈ ದೇವಾಲಯದಲ್ಲಿ ಶೃದ್ಧಾ ಭಕ್ತಿಯಿಂದ ಏನು ಕೇಳಿದರೂ ತಿಮ್ಮಪ್ಪ ದಯಪಾಲಿಸುತ್ತಾನೆ ಎನ್ನುವುದು ಭಕ್ತರ ನಂಬಿಕೆ