ನವದೆಹಲಿ: Digital Hiring Apps - ಸುಮಾರು ಎರಡು ವರ್ಷಗಳಿಂದ, ಚಾಲ್ತಿಯಲ್ಲಿರುವ ಕೋವಿಡ್ ಪ್ರಕೋಪದ ಕಾರಣ, ಅನೇಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಮತ್ತು ಇದೀಗ ಅವರಿಗೆ ಹೊಸ ಉದ್ಯೋಗ ಪಡೆಯಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತಿದೆ.
ನವದೆಹಲಿ: Digital Hiring Apps - ಸುಮಾರು ಎರಡು ವರ್ಷಗಳಿಂದ, ಚಾಲ್ತಿಯಲ್ಲಿರುವ ಕೋವಿಡ್ ಪ್ರಕೋಪದ ಕಾರಣ, ಅನೇಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಮತ್ತು ಇದೀಗ ಅವರಿಗೆ ಹೊಸ ಉದ್ಯೋಗ ಪಡೆಯಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತಿದೆ. ನೀವೂ ಸಹ ಒಳ್ಳೆಯ ಕೆಲಸದ (Job Application) ಹುಡುಕಾಟದಲ್ಲಿದ್ದರೆ, ಈ ಲೇಖನ ನಿಮಗಾಗಿ. ನಿಮ್ಮ ಆಯ್ಕೆಯ ಮತ್ತು ಸಾಮರ್ಥ್ಯದ ಕೆಲಸವನ್ನು ನಿಮಗೆ ನೀಡುವಂತಹ ಐದು ಡಿಜಿಟಲ್ ಹೈರಿಂಗ್ ಅಪ್ಲಿಕೇಶನ್ಗಳ ಪಟ್ಟಿಯನ್ನು ನಾವು ನಿಮಗೆ ನೀಡಲಿದ್ದೇವೆ.
ಇದನ್ನೂ ಓದಿ-Diwali 2021: ದೀಪಾವಳಿಯಂದು ದೇವಿ ಲಕ್ಷ್ಮಿಯ ಆಗಮನದ ಸಂಕೇತ ನೀಡುತ್ತವೆ ಈ 5 ಸಂಗತಿಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
1. LinkedIN Recuiter - ಉದ್ಯೋಗಗಳಿಗಾಗಿ ಡಿಜಿಟಲ್ ನೇಮಕಾತಿ ಅಪ್ಲಿಕೇಶನ್ಗಳ ವಿಷಯಕ್ಕೆ ಬಂದರೆ, ಲಿಂಕ್ಡ್ಇನ್ ಹೆಸರು ಬಹುತೇಕ ಮುಂಚೂಣಿಯಲ್ಲಿದೆ. ಇದೊಂದು ಅತ್ಯಂತ ಜನಪ್ರಿಯ ವೇದಿಕೆ, ಇಲ್ಲಿ ನಿಮ್ಮ ಪ್ರೊಫೈಲ್ ಅನ್ನು ರಚಿಸುವ ಮೂಲಕ, ಜನರೊಂದಿಗೆ 'ಸಂಪರ್ಕ'ಗಳನ್ನು ಮಾಡುವ ಮೂಲಕ ನೀವು ಸುಲಭವಾಗಿ ಕೆಲಸವನ್ನು ಹುಡುಕಬಹುದು.
2. Hirect - ಈ ಅಪ್ಲಿಕೇಶನ್ ಅನ್ನು ವಿಶೇಷವಾಗಿ ಹೈ ಗ್ರೋಥ್ ಸ್ಟಾರ್ಟ್ ಅಪ್ ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದೊಂದು ಚಾಟ್-ಆಧಾರಿತ ನೇರ ನೇಮಕಾತಿ ಅಪ್ಲಿಕೇಶನ್ ಆಗಿದೆ. ಇದುವರೆಗೆ ಒಂದು ಮಿಲಿಯನ್ಗಿಂತಲೂ ಹೆಚ್ಚು ಸ್ಟಾರ್ಟಪ್ಗಳನ್ನು ಇದರಲ್ಲಿ ಸೇರಿಸಲಾಗಿದೆ.
3. Naukri Recuiter - ಈ ಅಪ್ಲಿಕೇಶನ್ನ ಸಹಾಯದಿಂದ, ನೀವು ನಿಮಗಾಗಿ ಕೆಲಸವನ್ನು ಸುಲಭವಾಗಿ ಹುಡುಕಬಹುದು. ಈ ಅಪ್ಲಿಕೇಶನ್ನಲ್ಲಿ, ಕೆಲಸದ ಹುಡುಕಾಟ ನಡೆಸುವವರಿಗೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ವಿಶೇಷ ಕಾಲರ್ ಐಡಿ ವೈಶಿಷ್ಟ್ಯವನ್ನು ಒದಗಿಸಲಾಗಿದೆ, ಇದು ಕರೆಗಳನ್ನು ಸ್ವೀಕರಿಸುವ ಮತ್ತು ಉದ್ಯೋಗಗಳನ್ನು ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
4. Monster - ಮಾನ್ಸ್ಟರ್ ಕೂಡ ಅತ್ಯಂತ ಜನಪ್ರೀಯ ನೌಕರಿ ಹುಡುಕಾಟದ ಆಪ ಗಳಲ್ಲಿ ಒಂದು. ನೀವು ನಿಮ್ಮ ರೆಸ್ಯೂಮ್ ಅನ್ನು ರಚಿಸಿ ಮಾನ್ಸ್ಟರ್ ನಲ್ಲಿ ಅಪ್ಲೋಡ್ ಮಾಡಬಹುದು ಮತ್ತು ನಂತರ ಕಂಪನಿಗಳು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಅವುಗಳನ್ನು ಫಿಲ್ಟರ್ ಮಾಡಬಹುದು ಮತ್ತು ಅದನ್ನು ಓದಬಹುದು. ಅಲ್ಲದೆ, ಇಲ್ಲಿ ನೀವು ನಿಮ್ಮ ಸಂಪರ್ಕ ವಿವರಗಳನ್ನು ಸಹ ನೀಡಬಹುದು ಇದರಿಂದ ನೇಮಕಾತಿದಾರರು ನಿಮ್ಮೊಂದಿಗೆ ನೇರವಾಗಿ ಮಾತನಾಡಬಹುದು.
5. Workable - ಇದೊಂದು Android ಅಪ್ಲಿಕೇಶನ್ ಆಗಿದೆ ಮತ್ತು ವೈಯಕ್ತಿಕ ಪ್ರೊಫೈಲ್, ಸ್ಕೋರ್ಕಾರ್ಡ್, ಮೌಲ್ಯಮಾಪನ ಮತ್ತು ವರದಿಯಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ ಮತ್ತು ಈ ಅಪ್ಲಿಕೇಶನ್ನಲ್ಲಿ ನಿಮ್ಮ ಸಂದರ್ಶನವನ್ನು ಸಹ ನೀವು ನಿಗದಿಪಡಿಸಬಹುದು.