ಈ ವಸ್ತುಗಳಿಲ್ಲದೇ ದೀಪಾವಳಿ ಪೂಜೆ ಅಪೂರ್ಣ, ಧನ ಲಕ್ಷ್ಮಿಯ ಕೃಪೆ ಸಿಗುವುದಿಲ್ಲ..!

Diwali Laxmi Puja Samagri: ದೀಪಾವಳಿಯ ದಿನ ಮಾತೆ ಲಕ್ಷ್ಮಿಗೆ ವಿಶೇಷ ಪೂಜೆಯನ್ನು ನೇರವೇರಿಸಲಾಗುತ್ತದೆ. ಲಕ್ಷ್ಮೀ ಪೂಜೆ ಮಾಡುವುದರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ ಎನ್ನುವ ನಂಬಿಕೆ ಇದೆ. ದೀಪಾವಳಿ ಲಕ್ಷ್ಮಿ ಪೂಜೆಯಲ್ಲಿ ಇರಲೇಬೇಕಾದ ಕೆಲವು ವಸ್ತುಗಳ ಬಗ್ಗೆ ನೀವು ಖಂಡಿತವಾಗಿ ತಿಳಿದುಕೊಳ್ಳಲೇಬೇಕು.. ಇವು ಇಲ್ಲದಿದ್ದರೆ, ಪೂಜೆ ಪೂರ್ಣಗೊಳ್ಳುವುದಿಲ್ಲ.
 

1 /5

ದೀಪಾವಳಿ ಹಬ್ಬದ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಅಂದು ಹೊಸ ಬಟ್ಟೆ ಧರಿಸಿ ಪಟಾಕಿ ಸಿಡಿಸುವ ಸಂಪ್ರದಾಯವಿದೆ. ಈ ಹಬ್ಬವನ್ನು ದೇಶದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೀಪಗಳನ್ನು ಬೆಳಗಿಸುವ ಮೂಲಕ ಜನ ಹಬ್ಬವನ್ನು ಸಂಭ್ರಮಿಸುತ್ತಾರೆ..    

2 /5

ಲಕ್ಷ್ಮಿ ಪೂಜೆ ವೇಳೆ ಕೆಲವು ವಸ್ತುಗಳು ಇರಲೇಬೇಕು. ಇಲ್ಲದಿದ್ದರೆ ಪೂಜೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ವಿದ್ವಾಂಸರ ಪ್ರಕಾರ ದೀಪಾವಳಿ ಲಕ್ಷ್ಮಿ ಪೂಜೆಯಲ್ಲಿ ಇರಬೇಕಾದ ವಸ್ತುಗಳು ಯಾವುವು ಎಂದು ತಿಳಿಯೋಣ.    

3 /5

ಲಕ್ಷ್ಮಿ ಪೂಜೆಯಲ್ಲಿ ಗಣಪತಿ, ಕೆಂಪು ಬಟ್ಟೆ, ಅಮ್ಮನ ಪ್ರತಿಮೆ, ಬೆಳ್ಳಿ ನಾಣ್ಯ, ಚಿನ್ನ, ಕಮಲದ ಬೀಜಗಳು, ಅರಶಿನ, ಕುಂಕುಮ, ಶ್ರೀಗಂಧ, ಕರ್ಪೂರ, ಪಚ್ಚೆ ಕರ್ಪೂರ, ಏಲಕ್ಕಿ, ನಾಣ್ಯಗಳು, ಕಮಲದ ಹೂವು, ಗೋಮತಿ ಚಕ್ರ, ತುಪ್ಪ, ಸಿಹಿತಿಂಡಿಗಳನ್ನು ಒಳಗೊಂಡಿರಬೇಕು. .    

4 /5

ಪೂಜೆಯಲ್ಲಿ ಲಕ್ಷ್ಮಿ ಜೊತೆಗೆ ವಿಷ್ಣುವಿನ ಭಾವಚಿತ್ರ ಇರಬೇಕು. ದೀಪಾವಳಿಯ ಸಂದರ್ಭದಲ್ಲಿ ಮನೆಯ ಒಳಗೆ ಮತ್ತು ಹೊರಗೆ 13 ದೀಪಗಳನ್ನು ಬೆಳಗಿಸಬೇಕು.      

5 /5

ದೀಪಾವಳಿಯ ಹಿಂದಿನ ದಿನದಂದು ಧನ್ತೇರಸ್ ಮತ್ತು ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಉತ್ತರದಲ್ಲಿ ದೀಪಾವಳಿಯ ನಂತರ ಗೋವರ್ಧನ ಪೂಜೆ ಮತ್ತು ಭಗಿನಿ ಹಸ್ತ ಭೋಜನವನ್ನು ಮಾಡಲಾಗುತ್ತದೆ.   0