Diwali Gift Ideas 2021: ಸ್ನೇಹಿತರು ಮತ್ತು ಬಂಧುಗಳಿಗೆ ನೀಡಲು ಅದ್ಭುತ ಉಡುಗೊರೆಗಳು ಇಲ್ಲಿವೆ

ದೀಪಾವಳಿ ಹಬ್ಬದಲ್ಲಿ ಪ್ರತಿಯೊಬ್ಬರೂ ತಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಉಡುಗೊರೆ ನೀಡಿ ಶುಭಾಶಯ ಕೋರುತ್ತಾರೆ.

ಪರಸ್ಪರ ಸಂತೋಷವನ್ನು ಹಂಚಿಕೊಳ್ಳುವ ಬೆಳಕಿನ ಹಬ್ಬವೇ ದೀಪಾವಳಿ. ನಾಲ್ಕೈದು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಪ್ರತಿಯೊಬ್ಬರೂ ತಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಉಡುಗೊರೆ ನೀಡಿ ದೀಪಾವಳಿ ಹಬ್ಬದ ಶುಭಾಶಯ ಕೋರುತ್ತಾರೆ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಯಾವ ಉಡುಗೊರೆಗಳನ್ನು ನೀಡಬೇಕು ಎಂದು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ಸೂಪರ್ ಐಡಿಯಾ. ಇಲ್ಲಿ ನೀವು ಕೇವಲ 1,500 ರೂ.ನೊಳಗೆ ಅದ್ಭುತ ಉಡುಗೊರೆಗಳನ್ನು ಖರೀದಿಸಿ ನಿಮ್ಮ ಆಪ್ತರಿಗೆ ನೀಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

Mi Rechargeable LED Lamp: Miಯ ಅಧಿಕೃತ ವೆಬ್‌ಸೈಟ್‌ನಿಂದ ನೀವು ಈ Rechargeable LED Lamp ಖರೀದಿಸಿದರೆ ಶೇ.28ರಷ್ಟು ರಿಯಾಯಿತಿ ಸಿಗುತ್ತದೆ.  1,799 ರೂ. ಮೌಲ್ಯದ ಇದನ್ನು ನೀವು ಡಿಸ್ಕೌಂಟ್ ಬಳಿಕ 1,299 ರೂ.ಗಳಿಗೆ ಖರೀದಿಸಬಹುದು. ಒಂದೇ ಚಾರ್ಜ್‌ನಲ್ಲಿ 5 ದಿನಗಳವರೆಗೆ ಬರುವ ಈ LED ಲ್ಯಾಂಪ್ ಸೂಪರ್ ಆಗಿದ್ದು, ಇದರಲ್ಲಿ ನೀವು 3 ಹಂತದ ಹೊಳಪನ್ನು ಸಹ ಪಡೆಯುತ್ತೀರಿ.

2 /5

Realme Cobble Speaker: ರಿಯಾಲಿಟಿಯ ಈ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್‌ಗಳನ್ನು ನೀವು ಫ್ಲಿಪ್‌ಕಾರ್ಟ್‌ನಲ್ಲಿ1,399 ರೂ.ಗೆ ಖರೀದಿಸಬಹುದು. ಈ ಸ್ಪೀಕರ್ ಐಪಿಎಕ್ಸ್ 5 ರೇಟಿಂಗ್ ಅನ್ನು ಸಹ ಪಡೆದುಕೊಂಡಿದೆ, ಅಂದರೆ ಇದು ನೀರಿನಲ್ಲಿ ಹಾಕಿದರೂ ಸಹ ಹಾಳಾಗುವುದಿಲ್ಲ.

3 /5

Dell Wireless Keyboard and Mouse: ನಿಮ್ಮ ಪ್ರೀತಿಪಾತ್ರರು ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ ಅಥವಾ ಲ್ಯಾಪ್‌ಟಾಪ್‌ಗಳನ್ನು ಹೆಚ್ಚು ಬಳಸುತ್ತಿದ್ದರೆ, ಅವರಿಗೆ ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್ ನೀಡುವುದು ಉತ್ತಮ ಆಯ್ಕೆಯಾಗಿದೆ. ನೀವು ಅಮೆಜಾನ್‌ನಲ್ಲಿ 1,119 ರೂ.ಗೆ ಡೆಲ್‌ನ ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್ ಕಾಂಬೊವನ್ನು ಪಡೆಯಬಹುದು.

4 /5

Boat Bass-Heads 220 Earphones: ನೀವು ಈ ಬೋಟ್‌ ವೈರ್ಡ್ ಇಯರ್‌ಫೋನ್‌ಗಳನ್ನು ಫ್ಲಿಪ್‌ಕಾರ್ಟ್‌ನಿಂದ ಕೇವಲ 499 ರೂ.ಗೆ ಖರೀದಿಸಬಹುದು. ಇವುಗಳಲ್ಲಿ ನೀವು ಮೈಕ್ ಅನ್ನು ಸಹ ಪಡೆಯುತ್ತೀರಿ. ಇದರಿಂದ ಫೋನ್ ಕರೆಗಳನ್ನು ಸಹ ಸ್ವೀಕರಿಸಬಹುದು. ಈ ಇಯರ್‌ಫೋನ್‌ಗಳು ಹಲವಾರು ಬಣ್ಣಗಳಲ್ಲಿ ಲಭ್ಯವಿವೆ.

5 /5

Xiaomi 20,000mAh Power Bank: ನೀವು Xiaomiಯ 20,000mAh Dunder ಪವರ್ ಬ್ಯಾಂಕ್ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ 1,499 ರೂ.ಗೆ ಖರೀದಿಸಬಹುದು. ಕಡಿಮೆ ಸಾಮರ್ಥ್ಯದ 10,000mAh ಬ್ಯಾಟರಿಯ ಪವರ್ ಬ್ಯಾಂಕ್ ಅನ್ನು ಸಹ ನೀವು ತೆಗೆದುಕೊಳ್ಳಬಹುದು. ಇದರ ಬೆಲೆ 899 ರೂ. ಇದೆ.