ದಿನಕ್ಕೆ ಕಡಿಮೆ ಎಂದರೂ ಮೂರರಿಂದ ನಾಲ್ಕು ಕಪ್ ಚಹಾ ಕುಡಿದರೆ ಸಹ ನಿಮ್ಮ ಆರೋಗ್ಯದ ಮೇಲೆ ಮಾರಕ ರೋಗ ವಕ್ಕರಿಸಿಕೊಳ್ಳಬಹುದು.
ಕೆಲವರಿಗೆ ದಿನದಲ್ಲಿ ಅದೆಷ್ಟು ಬಾರಿ ಟೀ ಕುಡಿಯುತ್ತೇನೆ ಎಂಬ ಪ್ರಜ್ಞೆಯಿಲ್ಲದೆ, ಸಿಕ್ಕಾಪಟ್ಟೆ ಸೇವನೆ ಮಾಡುವುದುಂಟು. ಆದರೆ ಈ ಅಭ್ಯಾಸ ಅವರ ಜೀವಕ್ಕೆ ಗಂಭೀರ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆಯಿದೆ. ದಿನಕ್ಕೆ ಕಡಿಮೆ ಎಂದರೂ ಮೂರರಿಂದ ನಾಲ್ಕು ಕಪ್ ಚಹಾ ಕುಡಿದರೆ ಸಹ ನಿಮ್ಮ ಆರೋಗ್ಯದ ಮೇಲೆ ಮಾರಕ ರೋಗ ವಕ್ಕರಿಸಿಕೊಳ್ಳಬಹುದು.
ಚಹಾದಲ್ಲಿರುವ ಕೆಫೀನ್ ನಿದ್ರಾಹೀನತೆ, ತಲೆ ಸುತ್ತುವುದು, ಎದೆಯುರಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಹೀಗಾಗಿ ಟೀ ಅತಿಯಾಗಿ ಸೇವನೆ ಮಾಡಬಾರದು.
ದಿನಕ್ಕೆ 1 ರಿಂದ 2 ಕಪ್ ಚಹಾವನ್ನು ಕುಡಿಯಬಹುದು. ಒಂದು ವೇಳೆ ಗಂಟಲು ನೋವು, ಶೀತದಂತಹ ಸಮಸ್ಯೆಗಳಿದ್ದರೆ 2 ರಿಂದ 3 ಕಪ್ ಗಿಡಮೂಲಿಕೆ ಚಹಾವನ್ನು ಕುಡಿಯಬಹುದು. ಆದರೆ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿಕೊಳ್ಳಿ
ಚಹಾವು ಕೆಫೀನ್ ಅಂಶವನ್ನು ಒಳಗೊಂಡಿರುತ್ತದೆ. ಹೀಗಾಗಿ ಅತಿಯಾದ ಸೇವನೆಯು ನಿಮ್ಮ ನಿದ್ರೆಯನ್ನು ಹಾಳು ಮಾಡಬಹುದು
ಇವಿಷ್ಟೇ ಅಲ್ಲದೆ ಎದೆಯುರಿಯಂತಹ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಅದರ ಜೊತೆಗೆ ಅಸಿಡಿಟಿ ಸಮಸ್ಯೆಗಳನ್ನೂ ಸಹ ಉಂಟುಮಾಡುತ್ತದೆ. ದೇಹದಲ್ಲಿ ಕಬ್ಬಿಣಾಂಶವನ್ನು ಸಹ ಕಡಿಮೆ ಮಾಡುತ್ತದೆ. ಇದು ಮಾರಕ ರೋಗಗಳನ್ನು ಸೃಷ್ಟಿಸುವ ಭೀತಿಯೂ ಇರುತ್ತದೆ.